ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಣದಲ್ಲಿ ಗಣೇಶಾವತಾರ

Last Updated 29 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಗಣೇಶ ಚತುರ್ಥಿ ಮತ್ತೆ ಬಂದಿದೆ. ನಗರದ ಮಾರುಕಟ್ಟೆಯಲ್ಲೆಗ ಎಲ್ಲಿ ನೋಡಿದರೂ ಗಣೇಶ, ಗೌರಿಯ ವಿಗ್ರಹಗಳೆ ಕಣ್ಣಿಗೆ ಕಾಣಿಸುತ್ತವೆ. ಆದರೆ ಇಲ್ಲೊಂದು ಸ್ಥಳದಲ್ಲಿ ದಶವತಾರ ರೂಪದ ಗಣೇಶ ವಿಗ್ರಹಗಳು ಎಲ್ಲರ ಕಣ್ಮನ ಸೆಳೆಯುತ್ತಿವೆ.

ವರ್ಣ ಕರಕುಶಲ ಅಂಗಡಿ ಆಯೋಜಿಸಿರುವ ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ 750ಕ್ಕೂ ಹೆಚ್ಚು ವಿಧದ ಗಣೇಶನ ವಿಗ್ರಹಗಳು ಇವೆ. ಗಿಟಾರ್ ಹಿಡಿದು ಹಾಡುತ್ತಿರುವ, ತಬಲಾ ಬಾರಿಸುವ, ಪತ್ರಿಕೆ ಓದುವ ಹೀಗೆ ನೂರಾರು ಭಂಗಿಯ ಗಣೇಶ ಇಲ್ಲಿದ್ದಾನೆ.

ಈ ಪ್ರದರ್ಶನದ ಮತ್ತೊಂದು ವಿಶೇಷವೆಂದರೆ ಇಲ್ಲಿನ ಗಣೇಶನ ವಿಗ್ರಹಗಳು ನೀರಿಗೆ ವಿಸರ್ಜಿಸುವ ಗಣಪಗಳಲ್ಲ. ಬದಲಾಗಿ ಮನೆಯಲ್ಲಿ ಅಲಂಕಾರಕ್ಕಾಗಿ, ಪೂಜೆ ಮಾಡಲಿಕ್ಕಾಗಿ ಬಳಸಬಹುದಾಗಿದೆ.

ದೇವರ ಮನೆಯಲ್ಲಿ ತೂಗು ಹಾಕುವ ಹಿತ್ತಾಳೆ ಗಣಪನ ವಿಗ್ರಹಗಳು, ಗೋಡೆಗೆ ನೇತುಹಾಕುವ ಅಲಂಕಾರಿಕ ವಿಗ್ರಹಗಳು ಸಹ ಗೃಹಿಣಿಯರಿಗೆ ಮೆಚ್ಚುಗೆಯಾಗುತ್ತಿವೆ. 40 ರೂ.ನಿಂದ ಪ್ರಾರಂಭವಾಗಿ 6ಸಾವಿರ ರೂವರೆಗಿನ ಗಣಪನನ್ನು ಇಲ್ಲಿ ನೋಡಬಹುದು.

ಮುಂಬೈನ ಫೈಬರ್ ಕಲೆ, ಪುದುಚೇರಿಯ ಟೆರ‌್ರಾಕೋಟಾ, ಗುಜರಾತ್, ರಾಜಸ್ತಾನದ ರೆಸಿನ್ ಗಣೇಶ ಮೂರ್ತಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಪರಿಸರಸ್ನೇಹಿ ಗಣಪನ ವಿಗ್ರಹಗಳನ್ನು ಮಾತ್ರ ಇಲ್ಲಿ ಇಡಲಾಗಿದೆ ಹಾಗಾಗಿ ಗಣೇಶ ಪ್ರಿಯರು ಹೆಚ್ಚಾಗಿ ಬಂದು ನೆಚ್ಚಿನ ವಿಗ್ರಹಗಳನ್ನು ಕೊಳ್ಳುತ್ತಾರೆ ಎನ್ನುತ್ತಾರೆ ಮಾಲೀಕ ಅರುಣ್.
 
ಕಲಾವಿದರು ತಯಾರಿಸಿದ ಮಣ್ಣಿನ ವಿಗ್ರಹಗಳಿಗೆ ಪತ್ನಿ ಚೇತನಾ ಮತ್ತು ಮಗಳು ಅನುಷಾ ಬಣ್ಣ ಹಚ್ಚುತ್ತಾರೆ. ಅವುಗಳು ಇಲ್ಲಿ ಪ್ರದರ್ಶನಕ್ಕಿವೆ ಎನ್ನುತ್ತಾರೆ.

ಸ್ಥಳ: ಈಸ್ಟ್ ಪಾರ್ಕ್ ರಸ್ತೆ, 9ನೇ ಕ್ರಾಸ್ (ಪೋಸ್ಟ್ ಆಫೀಸ್ ಹಿಂಭಾಗ), ಮಲ್ಲೇಶ್ವರಂ. ಬೆಳಿಗ್ಗೆ 10ರಿಂದ ರಾತ್ರಿ 8. ಪ್ರದರ್ಶನ ಸೆ. 1ರ ವರೆಗೆ ಮಾತ್ರ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT