ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವರ್ಷ ಕಳೆಯುವ ಮೊದಲೇ ಹಾಳಾದ ರಸ್ತೆ

Last Updated 19 ಅಕ್ಟೋಬರ್ 2012, 6:45 IST
ಅಕ್ಷರ ಗಾತ್ರ

ಹಿರೇಕೆರೂರ: ಪಟ್ಟಣದಿಂದ ರಾಣೆ ಬೆನ್ನೂರಿಗೆ ಹೋಗುವ ರಸ್ತೆಯಲ್ಲಿ ತಾವರಗಿ ಹಳ್ಳದವರೆಗೆ ಸುಮಾರು ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ 2 ಕಿ.ಮೀ. ರಸ್ತೆಯು ಕೇವಲ ವರ್ಷವನ್ನು ಪೂರೈಸುವ ಮೊದಲೇ ಪೂರ್ಣ ಡಾಂಬರು ಕಿತ್ತು ಹಾಳಾಗಿದ್ದು ನಿತ್ಯ ಪ್ರಯಾಣಿಕರು ಶಾಪ ಹಾಕುತ್ತಾ ಸಾಗುತ್ತಿದ್ದಾರೆ.

ತಾಲ್ಲೂಕಿನ ಅತೀಹೆಚ್ಚು ದಟ್ಟಣಿಯ ರಸ್ತೆ ಇದಾಗಿದ್ದು, ನಿತ್ಯ ನೂರಾರು ದೊಡ್ಡ ವಾಹನಗಳು ಸಾವಿರಾರು ಸಣ್ಣ ವಾಹನಗಳು ರಸ್ತೆಯಲ್ಲಿ ಸಂಚರಿ ಸುತ್ತವೆ. ಈ ವರ್ಷ ಬರಗಾಲ ಬಿದ್ದಿದ್ದು ಭಾರಿ ಮಳೆ ಕೂಡ ಸುರಿದಿಲ್ಲ, ಆದರೂ ಡಾಂಬರೀಕರಣಗೊಂಡ ರಸ್ತೆಯು ಕೆಲವೇ ದಿನಗಳಲ್ಲಿ ಕಿತ್ತು ಹೋಗ ಲಾರಂಭಿಸಿದ್ದು, ಕಳಪೆ ಕಾಮಗಾರಿಯ ಪರಿಣಾಮವಾಗಿದೆ ಎನ್ನುತ್ತಾರೆ ನಿತ್ಯ ಸಂಚರಿಸುವ ಪ್ರಯಾಣಿಕರು.

ಗುತ್ತಿಗೆದಾರರೇ ಒಂದು ವರ್ಷ ಕಡ್ಡಾಯವಾಗಿ ರಸ್ತೆಯ ನಿರ್ವಹಣೆ ಮಾಡಬೇಕು ಎಂದು ಶರತ್ತಿನ ಪರಿ ಣಾಮ ಕಿತ್ತುಹೋಗಿರುವ ಡಾಂಬರ್ ರಸ್ತೆಯಲ್ಲಿ ಅಲ್ಲಲ್ಲಿ ಖಡೀಕರಣ ಮಾಡಿದ್ದು, ವಾಹನ ದಟ್ಟಣಿ ಪರಿ ಣಾಮ ಅಲ್ಲಲ್ಲಿ ಕಲ್ಲುಗಳು ಮೇಲೆದ್ದು ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡುತ್ತಿವೆ. ಸಬಂಧಪಟ್ಟವರು ರಸ್ತೆ ದುರಸ್ತಿಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಯಾಣಿಕರ ಒತ್ತಾಯ ವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT