ಚೆನ್ನೈ ಮತ್ತು ದೆಹಲಿಯಿಂದ ಪ್ರಕಟವಾಗುವ ಬಹುತೇಕ ಎಲ್ಲ ರಾಷ್ಟ್ರೀಯ ಇಂಗ್ಲಿಷ್ ದೈನಿಕಗಳ ಆವೃತ್ತಿಗಳಲ್ಲಿ ನಾಲ್ಕು ಪುಟಗಳ ಜಾಹೀರಾತು ನೀಡಲಾಗಿತ್ತು. ಜಯಾ ಅವರ ಪೂರ್ಣ ಅಳತೆಯ ಚಿತ್ರವುಳ್ಳ ಈ `ಜಾಕೆಟ್~ ಜಾಹೀರಾತನ್ನು ಮಾಹಿತಿ ಮತ್ತು ಸಾರ್ವಜನಿಕ ಸಂಪರ್ಕದ ನಿರ್ದೇಶಕರ ಕಚೇರಿ ಬಿಡುಗಡೆ ಮಾಡಿತ್ತು (ಮುಖಪುಟ ಹಾಗೂ ಕೊನೆಯ ಪುಟಗಳನ್ನು ಸುತ್ತುವರಿದು ನೀಡಲಾಗುವ ಜಾಹೀರಾತಿಗೆ ಜಾಕೆಟ್ ಜಾಹೀರಾತು ಎನ್ನಲಾಗುತ್ತದೆ).