ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ನಿಯಮ ಉಲ್ಲಂಘನೆ

Last Updated 25 ಜನವರಿ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಪಿಟಿಐ): ಭಾರಿ ಪ್ರಮಾಣದಲ್ಲಿ ವಲಸೆ ನಿಯಮ ಉಲ್ಲಂಘನೆಯಾಗಿರುವ ಹಿನ್ನೆಲೆಯಲ್ಲಿ ಸಿಲಿಕಾನ್ ವ್ಯಾಲಿಯ ವಿಶ್ವವಿದ್ಯಾಲಯವೊಂದನ್ನು ಅಧಿಕಾರಿಗಳು ಮುಚ್ಚಿಸಿರುವುದರಿಂದ ಭಾರತದ ನೂರಾರು ವಿದ್ಯಾರ್ಥಿಗಳು ತವರಿಗೆ ಮರುಳಬೇಕಾದ ಭೀತಿಯಲ್ಲಿದ್ದಾರೆ.

ಈ ವಿದಾರ್ಥಿಗಳಲ್ಲಿ ಆಂಧ್ರಪ್ರದೇಶದವರೇ ಹೆಚ್ಚಾಗಿದ್ದು, ಅವರೆಲ್ಲರೂ ಈಗ ಆತಂಕಗೊಂಡಿದ್ದಾರೆ.ಸ್ಯಾನ್‌ಫ್ರಾನ್ಸಿಸ್ಕೊದ ಪ್ಲೆಸೆಂಟನ್‌ನಲ್ಲಿರುವ ಟ್ರಿ-ವ್ಯಾಲಿ ವಿಶ್ವವಿದ್ಯಾಲಯದ ವಿರುದ್ದ ವಲಸೆ ನಿಯಮ ಉಲ್ಲಂಘನೆ, ಅಕ್ರಮ ಹಣ ಸಂಗ್ರಹ ಮತ್ತು ಇತರ ಕಾನೂನು ಬಾಹಿರ ಚಟುವಟಿಕೆಗಳ ಆಪಾದನೆಯನ್ನು ಹೊರಿಸಲಾಗಿದ್ದು, ಅಧಿಕಾರಿಗಳು ಈ ವಿಶ್ವವಿದ್ಯಾಲಯದ ಮೇಲೆ ದಾಳಿ ಮಾಡಿದ ನಂತರ ಬೀಗ  ಹಾಕಿದ್ದಾರೆ.

ಈ ವಿಶ್ವವಿದ್ಯಾಲಯವು ವಿದೇಶಿ ವಿದ್ಯಾರ್ಥಿಗಳಿಗೆ ಅಕ್ರಮ ವಲಸೆ ಪತ್ರ ಪಡೆಯಲು ನೆರವಾಗುತ್ತಿತ್ತು. ವಿಶ್ವವಿದ್ಯಾಲಯದಲ್ಲಿಯ 1,555 ವಿದ್ಯಾರ್ಥಿಗಳ ಪೈಕಿ ಶೇಕಡಾ 95ರಷ್ಟು ವಿದ್ಯಾರ್ಥಿಗಳು ಭಾರತೀಯರು ಎಂದು ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ಸಲ್ಲಿಸಲಾಗಿರುವ ದೋಷಾರೋಪ ಪಟ್ಟಿಯಲ್ಲಿ ತಿಳಿಸಲಾಗಿದೆ.

ವಿವಿಧ ವಸತಿ ಕಾಲೆಜುಗಳಲ್ಲಿ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ದಾಖಲೆಯಲ್ಲಿ ತೋರಿಸಲಾಗಿದ್ದರೂ ಈ ವಿದ್ಯಾರ್ಥಿಗಳು ವಾಸ್ತವವಾಗಿ ಕಾನೂನು ಬಾಹಿರವಾಗಿ ಮೇರಿಲ್ಯಾಂಡ್, ವರ್ಜಿನಿಯಾ, ಪೆನ್ಸಿಲ್ವೆನಿಯಾ ಮತ್ತು ಟೆಕ್ಸಾಸ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT