ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆ ಮಸೂದೆ: ಮೂರ್ತಿ ಅಭಿಮತ

Last Updated 6 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮುಂಬೈ(ಪಿಟಿಐ): `ಭಾರತೀಯ ಐ.ಟಿ ಕಂಪೆನಿಗಳು ತಮ್ಮ ಸಾಗರೋತ್ತರ ವಹಿವಾಟಿಗೆ ಸ್ಥಳೀಯರನ್ನೇ ಹೆಚ್ಚು ನೇಮಕ ಮಾಡಿಕೊಳ್ಳಬೇಕು' ಎಂದು ಇನ್ಫೊಸಿಸ್ ಅಧ್ಯಕ್ಷ ಎನ್.ಆರ್.ನಾರಾಯಣ ಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ಅಮೆರಿಕದ ವಲಸೆ ನೀತಿ ಸುಧಾರಣೆ ಮಸೂದೆ ಕುರಿತು ಪ್ರತಿಕ್ರಿಯಿಸಿರುವ ಅವರು, `ನಾನು ವೀಸಾ ಆಧಾರಿತ ಕಂಪೆನಿಗಳ ದೊಡ್ಡ ಅಭಿಮಾನಿಯೇನೂ ಅಲ್ಲ. ಯಾವುದೇ ದೇಶದಲ್ಲಿ ಆರ್ಥಿಕ ಬಿಕ್ಕಟ್ಟು ಇದ್ದಾಗ ನಿರುದ್ಯೋಗ ಪ್ರಮಾಣ ಹೆಚ್ಚಿರುತ್ತದೆ. ಆಗ ವಿದೇಶಿಯರಿಗೆ ಉದ್ಯೋಗ ನೀಡದಿರುವುದನ್ನು ಪ್ರೊತ್ಸಾಹಿಸದಿರುವ  ನಿರ್ಧಾರ ಕೈಗೊಳ್ಳುವುದು ಸಹಜ' ಎಂದು ಹೇಳಿದ್ದಾರೆ.

ಆದರೆ, ಅಮೆರಿಕದ ವಲಸೆ ನೀತಿ ಸುಧಾರಣೆ ಮಸೂದೆಯು ದೇಶೀಯ ಐ.ಟಿ ಉದ್ಯಮದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT