ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಲಸೆಯಿಂದ ಮರೆಯಾಗುತ್ತಿದೆ ಹಳ್ಳಿಗಾಡಿನ ಸೊಗಡು

Last Updated 1 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಹಳ್ಳಿಗರು ನಾನಾ ಉದ್ಯೋಗ ಅರಸಿಕೊಂಡು ನಗರಕ್ಕೆ ವಲಸೆ ಬರುತ್ತಿರುವುದರಿಂದ ಹಳ್ಳಿಗಾಡಿನ ಸೊಗಡು ಪೂರ್ಣವಾಗಿ ಮರೆ ಯಾಗುತ್ತಿದೆ. ಈ ದಿಸೆಯಲ್ಲಿ ವಲಸೆ ಬಂದಿರುವವರು ತಮ್ಮ ಹಳ್ಳಿಗಳಿಗೆ ಕೊಡುಗೆ ನೀಡಬೇಕು~ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಕರೆ ನೀಡಿದರು.

ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ನಗರದ ಜಯನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶಂಕುತಳಾ ಜಯದೇವ್ ಶರಣ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.  `ಮಾನವ ಸಂಪನ್ಮೂಲದ ಮುಂದೆ ಎಲ್ಲ ಸಂಪನ್ಮೂಲಗಳು ಗೌಣ ವೆನಿಸುತ್ತವೆ. ಹಾಗಾಗಿ ಪ್ರಸ್ತುತ ದೇಶ ಪಡೆದುಕೊಂಡಿರುವ ಮಾನವ ಸಂಪನ್ಮೂಲವನ್ನು ಸಮರ್ಪಕವಾಗಿ ಬಳಸುವ ಅಗತ್ಯವಿದೆ. ವಿದ್ಯಾವಂತ ರೆಲ್ಲರೂ ಕೃಷಿ ಕ್ಷೇತ್ರದಲ್ಲಿ ತೊಡಗಿಸಿ ಕೊಳ್ಳುತ್ತಿರುವುದು ನಿಜಕ್ಕೂ ಸಂತೋಷದ ವಿಚಾರ~ ಎಂದರು.

ಸಾಹಿತಿ ಸಾ.ಶಿ.ಮರುಳಯ್ಯ, ` ಸ್ನೇಹ ಮತ್ತು ಪ್ರೀತಿಯಿಂದ ಮಾತ್ರ ಎದುರಿಗಿರುವ ದುಷ್ಟತನವನ್ನು ಗೆಲ್ಲಲು ಸಾಧ್ಯವಿದ್ದು, ಯುವ ಸಮೂಹ ಸ್ನೇಹಪರ ಗುಣವನ್ನು ಬೆಳೆಸಿ ಕೊಳ್ಳಬೇಕು~ ಎಂದು ಕರೆ ನೀಡಿದರು. ಮಾಜಿ ಸಚಿವೆ ಲೀಲಾದೇವಿ ಆರ್. ಪ್ರಸಾದ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT