ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ನಿಲಯ ಅವ್ಯವಸ್ಥೆ: ವಿದ್ಯಾರ್ಥಿನಿಯರ ಪ್ರತಿಭಟನೆ

Last Updated 19 ಅಕ್ಟೋಬರ್ 2012, 7:05 IST
ಅಕ್ಷರ ಗಾತ್ರ

ಹಾವೇರಿ: ಇಲ್ಲಿನ ಬಸವೇಶ್ವರ ನಗರ ದಲ್ಲಿರುವ ಬಿಸಿಎಂ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಖಂಡಿಸಿ ವಸತಿ ನಿಲ ಯದ ವಿದ್ಯಾರ್ಥಿನಿಯರು ಮಂಗಳ ವಾರ ರಾತ್ರಿ ಕಟ್ಟಡದ ಹೊರಗೆ ಬಂದು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ನೇತೃತ್ವದಲ್ಲಿ ಪ್ರತಿಭಟಿನೆ ನಡೆಸಿದರು.

`ವಸತಿ ನಿಲಯದಲ್ಲಿ ವ್ಯವಸ್ಥಿತ ಕುಡಿವ ನೀರಿನ ಸೌಲಭ್ಯವಿಲ್ಲ. ಮಲ ಗಲು ಮಂಚವಿಲ್ಲ. ಓದಲು ಮೇಜಿಲ್ಲ. ಊಟದ ಕೊಠಡಿಯಿಲ್ಲ. ಶೌಚಾಲಯ ಶುಚಿಗೊಳಿಸುವವರಿಲ್ಲ. ಅಲ್ಲದೇ, 95 ವಿದ್ಯಾರ್ಥಿನಿಯರನ್ನು ಕೇವಲ 10 ಕೊಠಡಿಗಳಲ್ಲಿ ಕೂಡಿಹಾಕಲಾಗಿದೆ~ ಎಂದು ವಿದ್ಯಾರ್ಥಿನಿಯರು ಅವಲತ್ತು ತೋಡಿಕೊಂಡರು.

ವಸತಿ ನಿಲಯದಲ್ಲಿ ನಿತ್ಯ ಕೊಡುವ ಆಹಾರ ತುಂಬಾ ಕಳಪೆಯಾಗಿದೆ. ಆಹಾರ ಗುಣಮಟ್ಟದ್ದಾಗಿಲ್ಲ. ವಸತಿ ನಿಲಯಕ್ಕೆ ಭದ್ರತಾ ಸಿಬ್ಬಂದಿ, ಖಾಯಂ ವಾರ್ಡನ್ ಇಲ್ಲ. ವಸತಿನಿಲಯ ಅವ್ಯವಸ್ಥೆಯ ಆಗರವಾಗಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದರು.

ಕಟ್ಟಡ ಬಾಡಿಗೆಯದ್ದಾಗಿದ್ದು, ಮಾಲೀಕರು ಸರಿಯಾಗಿ ನೀರು ಬಿಡು ವುದಿಲ್ಲ. ಬೆಳಗ್ಗೆ 8ಗಂಟೆ ನಂತರ ಸ್ವಲ್ಪ ನೀರು ಬಿಡುತ್ತಾರೆ. ಅದು ಸಾಕಾಗು ವುದಿಲ್ಲ. ಕೂಡಲೇ ಅಧಿಕಾರಿ ಗಳು ವಿದ್ಯಾರ್ಥಿನಿಲಯದ ಸಮಸ್ಯೆ ಬಗೆಹರಿ ಸಬೇಕು. ಸ್ವಂತ ಕಟ್ಟಡ, ಮೂಲ ಸೌಲಭ್ಯಗಳನ್ನು ಒದಗಿಸಬೇಕೆಂದು ಆಗ್ರಹಿಸಿದರು.ರಾಧಾ ಕುನ್ನೂರು, ಸವೀತಾ ಹಳ್ಳೇರ, ರುದ್ರಮ್ಮ ಕಾಳಣ್ಣನವರ, ಅಶ್ವಿನಿ ಸಿ.ಬಿ. ಇತರರು ಪ್ರತಿಭಟನೆ ಯಲ್ಲಿ ಪಾಲ್ಗೊಂಡಿದ್ದರು.

ವಿದ್ಯುತ್ ಕಡಿತ
ಹುಬ್ಬಳ್ಳಿ:
ಹೆಸ್ಕಾಂನ ಅಕ್ಷಯ ಕಾಲೊನಿ ಫೀಡರ್‌ನಲ್ಲಿ ತಾಂತ್ರಿಕ ತೊಂದರೆ ಯಿಂದಾಗಿ ಇಲ್ಲಿನ ವಿದ್ಯಾನಗರ,ಶಿರೂರು ಪಾರ್ಕ್, ವಿನಾಯಕ ನಗರ, ಅಕ್ಷಯ ಪಾರ್ಕ್, ಶ್ರೇಯಾನಗರ ಸೇರಿ ದಂತೆ ಹಲವು ಪ್ರದೇಶಗಳಲ್ಲಿ ಗುರು ವಾರ ರಾತ್ರಿ ವಿದ್ಯುತ್ ಅಡಚಣೆ ಯಾಯಿತು. ರಾತ್ರಿ 8.30ರಿಂದ ವಿದ್ಯುತ್ ಕಡಿತಗೊಂಡು ಸುಮಾರು 2 ಗಂಟೆ ಕಾಲ ಪರದಾಡಬೇಕಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT