ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ಯೋಜನೆಗೆ 38 ಲಕ್ಷ ಮೀಸಲು

Last Updated 3 ಫೆಬ್ರುವರಿ 2011, 6:15 IST
ಅಕ್ಷರ ಗಾತ್ರ

ಮೊಳಕಾಲ್ಮುರು: ಪಟ್ಟಣದಲ್ಲಿ ಅನುಷ್ಠಾನಗೊಳ್ಳಲಿರುವ ವಿವಿಧ ವಸತಿ ಯೋಜನೆಗಳಿಗೆ ಒಟ್ಟು ್ಙ 38 ಲಕ್ಷ ಕಾಯ್ದಿರಿಸಲು ಪ.ಪಂ. ನಿರ್ಣಯ ಕೈಗೊಂಡಿದೆ.
ಇಲ್ಲಿನ ಪ.ಪಂ. ಕಚೇರಿಯಲ್ಲಿ ಬುಧವಾರ ಅಧ್ಯಕ್ಷೆ ಸಮೀರಾನಾಜ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ವಾಜಪೇಯಿ ವಸತಿ ಯೋಜನೆ ಅಡಿಯಲ್ಲಿ 53 ಫಲಾನುಭವಿಗಳಿಗೆ ತಲಾ ್ಙ 30 ಸಾವಿರ ಸಹಾಯಧನದಂತೆ ್ಙ15 ಲಕ್ಷರೂ, ರಾಜ್ಯ ಹಣಕಾಸು ಅನುದಾನದಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಮನೆ ನಿರ್ಮಿಸಿಕೊಳ್ಳಲು 18 ಫಲಾನುಭವಿಗಳಿಗೆ ್ಙ 15 ಲಕ್ಷ, ಇದೇ ಫಲಾನುಭವಿಗಳಿಗೆ ವಾಜಪೇಯಿ ಯೋಜನೆಯಡಿ ಸೌಲಭ್ಯ ಪಡೆಯಲು ್ಙ 5 ಲಕ್ಷ, ಅಂಬೇಡ್ಕರ್ ಬಡಾವಣೆಯಲ್ಲಿ ಹೌಮಾಸ್ಟ್ ದೀಪ, ಬೀದಿ ದೀಪ ಅಳವಡಿಕೆಗೆ  ್ಙ 10 ಲಕ್ಷ ಮೀಸಲಿಡಲು ಸಭೆಯಲ್ಲಿ ನಿರ್ಣಯಿಲಾಯಿತು.

2010-11 ನೇ ಸಾಲಿನಲ್ಲಿ ರಾಜ್ಯ ಹಣಕಾಸು ಯೋಜನೆಯಲ್ಲಿ ಪಟ್ಟಣಕ್ಕೆ ಒಟ್ಟು ್ಙ 373 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಈ ಪೈಕಿ ್ಙ 189 ಲಕ್ಷ ವೆಚ್ಚದ ಸಿಮೆಂಟ್ ರಸ್ತೆ, ಚರಂಡಿ ಕಾಮಗಾರಿಗಳ ನಿರ್ಮಾಣ ಹೊಣೆಯನ್ನು ನಿರ್ಮಿತಿ ಕೇಂದ್ರಕ್ಕೆ ನೀಡಲಾಗಿದೆ, ್ಙ 15 ಲಕ್ಷ ವೆಚ್ಚದಲ್ಲಿ ಘನತ್ಯಾಜ್ಯ ವಸ್ತುಗಳ ನಿರ್ವಹಣೆ ಕೇಂದ್ರದಲ್ಲಿ ಗಾರ್ಡ್ ಕೊಠಡಿ, ಟ್ರ್ಯಾಕ್ಟರ್ ಮತ್ತಿತರೆ ಸಾಮಗ್ರಿಗಳನ್ನು ಕೊಳ್ಳಲು ಹಾಗೂ ಈ ಹಿಂದೆ ಬಿಆರ್‌ಜಿಎಫ್ ಯೋಜನೆಯಲ್ಲಿ ಪ.ಪಂ.ನಲ್ಲಿ ಕೆಲಸ ಮಾಡುತ್ತಿದ್ದ 17 ಮಂದಿ ದಿನಗೂಲಿ ನೌಕರರ ವೇತನ ನೀಡಲು ಮತ್ತು ಮುಂದಿನ ದಿನಗಳಲ್ಲಿ ಇವರನ್ನು ಘನತ್ಯಾಜ್ಯ ವಸ್ತುಗಳ ವಿಲೇವಾರಿ ಕಾರ್ಯಗಳಿಗೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲು ಸಭೆ ನಿರ್ಣಯಿಸಿತು.

ಬಸ್‌ನಿಲ್ದಾಣದಲ್ಲಿ ವ್ಯರ್ಥವಾಗುತ್ತಿರುವ ಮಳಿಗೆಗಳನ್ನು ಬಾಡಿಗೆಗೆ ನೀಡುವ ಸಂಬಂಧ ಚರ್ಚಿಸಲು ಫೆ. 4ರಂದು ವಿಶೇಷ ಸಭೆ ಕರೆಯಲು, ಬಾಕಿ ಕಂದಾಯ ವಸೂಲಿ ಚುರುಕುಗೊಳಿಸಲು ವಾರ್ಡ್ ಮಟ್ಟದಲ್ಲಿ ಶಾಮಿಯಾನ ಹಾಕಿ ಕೇಂದ್ರ ಸ್ಥಾಪನೆ ಮಾಡುವ ಜತೆಗೆ ಅಗತ್ಯ ಅರ್ಜಿಗಳನ್ನು ಉಚಿತವಾಗಿ ನೀಡಲು, ಆಯಾ ವಾರ್ಡ್‌ನ ಅಕ್ರಮ, ಸಕ್ರಮ, ಕಡಿತಕ್ಕೆ ಅಲ್ಲಿಯೇ ಕ್ರಮ ತೆಗೆದುಕೊಳ್ಳಲು ಪ.ಪಂ. ಮುಂದಾಗಿದ್ದು, ಶೀಘ್ರವೇ ಯೋಜನೆಗೆ ಚಾಲನೆ ನೀಡಲಾಗುವುದು. ರಂಗಯ್ಯನದುರ್ಗ ಕುಡಿಯುವ ನೀರಿನ ಯೋಜನೆಗೆ ಎಕ್ಸ್‌ಪ್ರೆಸ್ ಲೈನ್ ಅಳವಡಿಕೆ ಕಾರ್ಯ ಚುರುಕುಗೊಳಿಸಲು ಸರ್ಕಾರಕ್ಕೆ ಪತ್ರ ಬರೆಯಾಗಿದ್ದು, ಗುತ್ತಿಗೆದಾರರಿಗೆ ನೊಟೀಸ್ ನೀಡಲಾಗಿದೆ ಎಂದು ಮುಖ್ಯಾಧಿಕಾರಿ ವಾಸೀಂ ಮಾಹಿತಿ ನೀಡಿದರು.

ಖಾಲಿ ಜಾಗದಲ್ಲಿರುವ ಗಿಡ, ಕಸಕಡ್ಡಿ ತೆಗೆಯುವಂತೆ ಮಾಲೀಕರಿಗೆ ನೊಟೀಸ್ ನೀಡಬೇಕು.  ಅಧ್ಯಕ್ಷರ ಅಪ್ಪಣೆ ಮೇರೆಗೆ ಎಂದು ಕೈಗೊಳ್ಳುವ ನಿರ್ಣಯಗಳನ್ನು ಸದಸ್ಯರ ಗಮನಕ್ಕೆ ತಂದು ನಡವಳಿಕೆ ಪುಸ್ತಕದಲ್ಲಿ ದಾಖಲು ಮಾಡಬೇಕು. ವೈದ್ಯಕೀಯ ಕೋರ್ಸ್ ವಿದ್ಯಾರ್ಥಿಗಳಿಗೆ ನೀಡುತ್ತಿರುವ ಧನಸಹಾಯವನ್ನು ಹೆಚ್ಚಳ ಮಾಡುವಂತೆ, ಶವಸಾಗಿಸುವ ವಾಹನ ಕೊಳ್ಳಲು ಅನುಮತಿ ನೀಡಲು ಕೋರಲು ಜಿಲ್ಲಾಧಿಕಾರಿಗಳ ಬಳಿಗೆ ಸದಸ್ಯರ ನಿಯೋಗ ಹೋಗಲು ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಉಪಾಧ್ಯಕ್ಷೆ ಅನ್ನಪೂರ್ಣಮ್ಮ ಮತ್ತು ಪ.ಪಂ. ಸದಸ್ಯರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT