ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿ ರಹಿತರಿಗೆ ಸೂರು: ವರ್ತೂರ್ ಭರವಸೆ

Last Updated 25 ಜನವರಿ 2011, 10:00 IST
ಅಕ್ಷರ ಗಾತ್ರ

ಕೋಲಾರ: ಕ್ಷೇತ್ರದಲ್ಲಿ ವಸತಿ ರಹಿತರಿಗೆ ಸೂರು ಕಲ್ಪಿಸಲು ಶೀಘ್ರ ಕ್ರಮ ಕೈಗೊಳ್ಳುತ್ತೇನೆ. ಅರ್ಹ ಫಲಾನುಭವಿಗಳ ಪಟ್ಟಿಯನ್ನು ಆಯಾ ಗ್ರಾಮಗಳಲ್ಲಿರುವ ಬಡವರನ್ನು ಗುರುತಿಸಿ ತಯಾರಿಸಲಾಗುವುದು. ಈ ಬಗ್ಗೆ ವಸತಿ ಸಚಿವರ ಜೊತೆ ಚರ್ಚಿಸಿರುವೆ  ಎಂದು ಶಾಸಕ ಆರ್. ವರ್ತೂರ್ ಪ್ರಕಾಶ್ ಅಭಿಪ್ರಾಯಪಟ್ಟಿದ್ದಾರೆ.

ತಾಲ್ಲೂಕಿನ ಕಡಗಟ್ಟೂರಿನಲ್ಲಿ ಭಾನುವಾರ ತಮ್ಮ ಬಣದ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ದೊಂಬರಾಟಕ್ಕೆ ಮಂಗಳವಾರ ಸಂಜೆಯೊಳಗೆ ತೆರೆ ಬೀಳಲಿದೆ. ಬಿಜೆಪಿ ಹೈಕಮಾಂಡ್ ನಿಯೋಗ ರಾಷ್ಟ್ರಪತಿಗಳನ್ನು ಭೇಟಿ ಮಾಡಿ ಯಡಿಯೂರಪ್ಪ ನಿರಪರಾಧಿ ಎಂದು ಮನವರಿಕೆ ಮಾಡಿಕೊಡಲಿದೆ ಎಂದು ತಿಳಿಸಿದರು.

ವಿಧಾನಸಭೆ ವಿಸರ್ಜನೆಯಾಗುವುದಿಲ್ಲ, ಮುಖ್ಯಮಂತ್ರಿಗಳು ಬದಲಾವಣೆಯಾಗುವುದಿಲ್ಲ. ಬಿಜೆಪಿ ಹೈಕಮಾಂಡ್ ಯಡಿಯೂರಪ್ಪನವರ ಪರವಾಗಿದೆ ಎಂದರು.
ಜಿಪಂ ಸದಸ್ಯ ಜಿ. ಎಸ್. ಅಮರ್‌ನಾಥ್, ಮುಖಂಡ ಪುಟ್ಟಸ್ವಾಮಾಚಾರ್,  ಕಲ್ವಮಂಜಲಿಯ ಕೆ.ಎನ್. ಚಂದ್ರೇಗೌಡ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಕೃಷ್ಣೇಗೌಡ ಮಾತನಾಡಿದರು.

ತಾಪಂ ಸದಸ್ಯರಾದ ಎನ್.ಕೆ. ನಾಗರಾಜ್, ಮುನಿಬೈರಪ್ಪ, ಭೂ ಬ್ಯಾಂಕ್ ನಿರ್ದೇಶಕ ಜಂಭಾಪುರ ವೆಂಕಟರಾಮ್, ಗ್ರಾಪಂ ಅಧ್ಯಕ್ಷರಾದ ಗಾಂಧಿ ನಾರಾಯಣಸ್ವಾಮಿ, ನರಸಿಂಹಮೂರ್ತಿ, ಸದಸ್ಯ ರಾಂಪುರ ಚಂದ್ರೇಗೌಡ, ಕಲ್ವಮಂಜಲಿ ಸೋಮಣ್ಣ, ಎಂ. ರಾಜೇಶ್, ಮುನ್ನಾಸಾಬ್, ಬೈರಂಡಹಳ್ಳಿಯ ರಾಮೇಗೌಡ, ನಾರಾಯಣಸ್ವಾಮಿ, ನಾಗರಾಜ್, ನರಸಾಪುರ ಗೋಪಿ, ವಿ.ಸಿ.ಒಡೆಯರ್, ಹುಲ್ಲಕಂಲ್ಲು ಈರಪ್ಪ, ಟಿ. ನಾರಾಯಣಸ್ವಾಮಿ, ಚಲ್ಲಹಳ್ಳಿ ನಾರಾಯಣಸ್ವಾಮಿ, ಅಪ್ಪಯ್ಯಣ್ಣ ವೇದಿಕೆಯಲ್ಲಿದ್ದರು.

ಗ್ರಾಪಂ ಸದಸ್ಯ ಕೆ. ಪಿ. ದೇವರಾಜ್ ನೇತೃತ್ವದಲ್ಲಿ ಪಟೇಲ್ ನಾರಾಯಣಗೌಡ, ಡಿ.ಆರ್. ನಾಗರಾಜ್, ಶ್ರೀನಿವಾಸಗೌಡ, ಎನ್. ವಿ. ವೆಂಕಟೇಶ್, ಹನುಮಂತಪ್ಪ, ಗುರುಮೂರ್ತಿ, ಚಂದ್ರೇಗೌಢ, ವೆಂಕಟೇಶಪ್ಪ, ಶ್ರೀನಿವಾಸ್, ಜಿ. ರಮೇಶ್, ಆನಂದ್, ವೆಂಕಟಚಲಪತಿ, ತಿಮ್ಮಣ್ಣ, ಮಂಜುನಾಥ್, ಕೋದಂಡಪ್ಪ, ಕೃಷ್ಣಪ್ಪ, ಕೆ.ಎಸ್. ವೆಂಕಟೇಶಪ್ಪ ಸೇರಿದಂತೆ 40 ಕ್ಕೂ ಮಂದಿ ಇದೇ ಸಂದರ್ಭದಲ್ಲಿ ಶಾಸಕರ ಬಣಕ್ಕೆ ಸೇರ್ಪಡೆಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT