ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸತಿಶಾಲೆಗೆ ಶಿಕ್ಷಕರ ಎರವಲು: ಆದೇಶ

Last Updated 6 ಆಗಸ್ಟ್ 2013, 8:37 IST
ಅಕ್ಷರ ಗಾತ್ರ

ಸಿಂಧನೂರು: ತಾಲ್ಲೂಕಿನ ತುರ್ವಿಹಾಳ ಮೊರಾರ್ಜಿ ದೇಸಾಯಿ ಮಾದರಿ ವಸತಿ ಶಾಲೆಗೆ ತಕ್ಷಣ ಜಾರಿಗೆ ಬರುವಂತೆ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ನಾಗಣ್ಣ ಅವರು ನಾಲ್ಕು ಜನ ಶಿಕ್ಷಕರಿಗೆ ಎರವಲು ಆದೇಶ ಹೊರಡಿಸಿದರು.

ಶಿಕ್ಷಕರ ಕೊರತೆಯನ್ನು ಪ್ರತಿಭಟಿಸಿ ಶಾಲೆಯ ವಿದ್ಯಾರ್ಥಿಗಳು ಸೋಮವಾರ ರಸ್ತೆ ತಡೆ ಹಾಗೂ ಉಪವಾಸ ಸತ್ಯಾಗ್ರಹ ನಡೆಸಿದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿ ಕ್ರಮ ಜರುಗಿಸಿದರು.

ಸಿಂಧನೂರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಒಬ್ಬರು, ಕಿತ್ತೂರು ಚೆನ್ನಮ್ಮ ವಸತಿ ಶಾಲೆಯಿಂದ ಒಬ್ಬರು, ಮಸ್ಕಿ ಮೊರಾರ್ಜಿ ವಸತಿ ಶಾಲೆಯಿಂದ ಇಬ್ಬರು ಶಿಕ್ಷಕರಿಗೆ ತುರ್ವಿಹಾಳ ಮೊರಾರ್ಜಿ ಶಾಲೆಗೆ ಕರ್ತವ್ಯಕ್ಕೆ ಹಾಜರಾಗುವಂತೆ ಎರವಲು ಆದೇಶ ನೀಡಿದರು.

ಸೆಕ್ಯುರಿಟಿ ಏಜೆನ್ಸಿಗೆ ಟೆಂಡರ್ ಕರೆ ಮಾಡಲಾಗಿದ್ದು ಇಷ್ಟರಲ್ಲಿಯೇ ಕಾವಲುಗಾರರನ್ನು ನೇಮಕ ಮಾಡಲಾಗುವುದು. ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿ, ಪೆಟ್ಟಿಗೆ, ಹಾಸಿಗೆ, ಹೊದಿಕೆ, ಶೌಚಾಲಯ, ಸ್ನಾನಗೃಹದ ವ್ಯವಸ್ಥೆ ಸೇರಿದಂತೆ ಮೂಲಭೂತ ಅವಶ್ಯಕತೆಗಳನ್ನು ಸರಿಪಡಿಸಲು ಕ್ರಮಕೈಗೊಳ್ಳುವು ದಾಗಿ ವಿದ್ಯಾರ್ಥಿಗಳಿಗೆ ಭರವಸೆ ನೀಡಿದರು.

ಪಠ್ಯಪುಸ್ತಕಗಳನ್ನು ಎರಡು ದಿನದೊಳಗಾಗಿ ರಾಯಚೂರಿನಿಂದ ತೆಗೆದುಕೊಂಡು ಬರುವಂತೆ ವಸತಿ ಶಾಲೆಯ ಪ್ರಾಚಾರ್ಯರಿಗೆ ಸೂಚಿಸಿದರು. ವಸತಿ ಶಾಲೆಯ ಕಟ್ಟಡದ ಮಾಲೀಕರಿಗೆ ತಿಳಿಸಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಹೇಳಿದರು. ಕುಡಿಯುವ ನೀರು ಉಪ್ಪಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದ್ದಕ್ಕೆ ನೀರನ್ನು ಪ್ರಯೋಗಾಲಯಕ್ಕೆ ಕಳುಹಿಸಿ ಪರೀಕ್ಷೆ ಮಾಡಿಸಿದ ನಂತರ ಮುಂದಿನ ಕ್ರಮಕೈಗೊಳ್ಳಲಾಗು ವುದು ಎಂದು ನಾಗಣ್ಣ ತಿಳಿಸಿದರು.

ಅಕ್ಕಿ ಮತ್ತಿತರ ಆಹಾರ ಧಾನ್ಯಗಳು ಕಳಪೆಯಾಗಿ ರುವ ಬಗ್ಗೆ ವಿದ್ಯಾರ್ಥಿಗಳು ಗಮನಸೆಳೆದಾಗ, ಕಳೆದ ವರ್ಷ ಟೆಂಡರ್ ಪಡೆದ ಗುತ್ತಿಗೆದಾರರನ್ನೇ ಮುಂದುವರೆಸಲಾಗಿದೆ. ಅವರಿಗೆ ಸೂಕ್ತ ಎಚ್ಚರಿಕೆ ನೀಡುವ ಮೂಲಕ ಸಮಸ್ಯೆ ಸರಿಪಡಿಸಲಾಗುವುದು ಎಂದು ಉತ್ತರಿಸಿದರು.

ಜಿಲ್ಲಾ ಪಂಚಾಯಿತಿ ಸದಸ್ಯೆ ಬಸಮ್ಮ ಕುಂಟೋಜಿ ಅವರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಹಲವು ಸಮಸ್ಯೆಗಳನ್ನು ಎದುರಿಸುತ್ತಿರುವುದರಿಂದ ಆದಷ್ಟು ಶೀಘ್ರ ಸ್ವಂತ ಕಟ್ಟಡದ ವ್ಯವಸ್ಥೆ ಮಾಡಿಕೊಡುವಂತೆ ಮನವಿ ಮಾಡಿದರು. ಈಗಾಗಲೇ ಕಲಮಂಗಿ ಗ್ರಾಮದಲ್ಲಿ 23 ಎಕರೆ ಸರ್ಕಾರಿ ಜಮೀನನ್ನು ವಸತಿ ಶಾಲೆಗೆಂದೇ ಕಾಯ್ದಿರಿಸಲಾಗಿದ್ದು ಆದಷ್ಟು ಶೀಘ್ರ ಜಿಲ್ಲಾಧಿಕಾರಿಗಳ ಗಮನ ಸೆಳೆದು ಸಮಾಜ ಕಲ್ಯಾಣ ಇಲಾಖೆಗೆ ಆ ಜಮೀನನ್ನು ಹಸ್ತಾಂತರಿಸಿಕೊಳ್ಳಲು ತಿಳಿಸಿದರು.

ವಿಸ್ತರಣಾಧಿಕಾರಿ ಶಂಕ್ರಯ್ಯ, ಶಿಕ್ಷಣ ಸುಗಮಕಾರ ನಂದಿಕೋಲಮಠ, ಪ್ರಾಚಾರ್ಯ ಹಿರೇಮಠ, ವಿದ್ಯಾರ್ಥಿ ಪಾಲಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT