ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಸ್ತುಪ್ರದರ್ಶನ ತುಂಬ ಮಾಹಿತಿ ಮಹಾಪೂರ!

Last Updated 22 ಜನವರಿ 2011, 7:30 IST
ಅಕ್ಷರ ಗಾತ್ರ

ಮೈಸೂರು: ಯಾವ ತಳಿ ಬೆಳೆ ಬೆಳೆದರೆ ಹೆಚ್ಚು ಇಳುವರಿ ಬರುತ್ತದೆ? ಕೀಟನಾಶಕಗಳ ನಿಯಂತ್ರಣಕ್ಕೆ ಯಾವ ಔಷಧಿ ಸಿಂಪಡಿಸಬೇಕು? ಗಿರಿರಾಜ ಕೋಳಿ ಮಾರಾಟದಿಂದ ಎಷ್ಟು ಹಣ ಸಂಪಾದಿಸಬಹುದು? ಕೃಷಿ ಯಂತ್ರೋಪಕರಣಗಳಿಗೆ ದೊರೆಯುವ ಸಬ್ಸಿಡಿ, ವಿವಿಧ ತಳಿಗಳ ಹಸು, ಆದಿವಾಸಿ ಸಮುದಾಯ ತಯಾರಿಸಿದ ಜೇನುತುಪ್ಪ, ಗಿಡಮೂ                     ಲಿಕೆಗಳ ಔಷಧ ಎಲ್ಲಿ ಸಿಗುತ್ತೆ..?

ಹುಣಸೂರಿನ ಮುನೇಶ್ವರ ಕಾವಲ್ ಮೈದಾನಕ್ಕೆ ಭೇಟಿ ನೀಡಿದರೆ ಎಲ್ಲ ಮಾಹಿತಿ ಲಭ್ಯ. ಕೇಂದ್ರ ಸಮಾಚಾರ ಮತ್ತು ಪ್ರಸಾರ ಸಚಿವಾಲಯ ಭಾರತ ನಿರ್ಮಾಣ ಸಾರ್ವಜನಿಕ ಮಾಹಿತಿ ಆಂದೋಲನದ ಅಂಗವಾಗಿ ಗುರುವಾರ ಇಲ್ಲಿ ವಸ್ತುಪ್ರದರ್ಶನ ಏರ್ಪಡಿಸಿದೆ. ಇಲ್ಲಿ ಒಂದು ಸುತ್ತು   ಹಾಕಿದರೆ ಸರ್ವ ಮಾಹಿತಿ ಕೈಯಲ್ಲಿ! ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಹಲವು ಯೋಜನೆಗಳ ಅನುಷ್ಠಾನಕ್ಕೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿವೆ. ಆದರೆ ಅದು ಸಮರ್ಪಕವಾಗಿ ಅನುಷ್ಠಾನಗೊಳ್ಳುತ್ತಿಲ್ಲ. ವಿವಿಧ ಯೋಜನೆಗಳ ಉದ್ದೇಶ ಮತ್ತು ಮಾಹಿತಿ ಜನರಿಗೆ ತಿಳಿಸುವ ಸಲುವಾಗಿ ವಸ್ತುಪ್ರದರ್ಶನವನ್ನು ಮೂರು ದಿನಗಳ ಕಾಲ ಏರ್ಪಡಿಸಲಾಗಿದೆ.

ವಸ್ತುಪ್ರದರ್ಶನದಲ್ಲಿ 23 ಕಾರ್ಯಕ್ರಮಗಳ ವಿವರ ನೀಡಲಾಗಿದೆ. ಮಹಿಳಾ ಸಬಲೀಕರಣ, ಮಕ್ಕಳ ಹಕ್ಕುಗಳು, ಶಿಕ್ಷಣ, ಆಂತರಿಕ ಭದ್ರತೆ, ಕೃಷಿರಂಗ, ವಸತಿ, ನೀರಾವರಿ ಯೋಜನೆಗಳ ಕುರಿತ ಚಿತ್ರಗಳ ಪ್ರದರ್ಶನಗಳು ಸ್ವಾಗತಿಸುತ್ತಿವೆ.ಚರ್ಮಕ್ಕಾಗಿ ಬೇಟೆಯಾಡುವುದರಿಂದ ಪ್ರಾಣಿಗಳ  ಸಂತತಿ ನಾಶ, ಕಾಳ್ಗಿಚ್ಚಿನಿಂದ ಅಪಾರ ಅರಣ್ಯ ನಾಶ ಹಾಗೂ ವಿವಿಧ ಪ್ರಾಣಿಗಳ ಮಾದರಿಗಳ ಪ್ರದರ್ಶಿಸುವ ಮೂಲಕ ಅರಣ್ಯ ಇಲಾಖೆ ಜನರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದೆ.

ಇನ್ನು ಸ್ವಸಹಾಯ ಗುಂಪುಗಳು ತಯಾರಿಸಿದ ತಿಂಡಿ, ರುಚಿಯಾದ ಉಪ್ಪಿನಕಾಯಿ, ಕ್ಯಾಂಡಲ್, ಅಗರಬತ್ತಿಗಲೂ ಲಭ್ಯ. ಬಿದರಿನಿಂದ ತಯಾರಿಸಿದ ಮೊರ, ಬೀಸಣಿಗೆ, ತಟ್ಟೆ, ಪೆನ್ ಸ್ಟ್ಯಾಂಡ್ ಸಹ ಕೊಂಡುಕೊಳ್ಳಬಹುದು.ಪ್ರದರ್ಶನದ ಒಂದು ಕಡೆ ಗಿಡಮೂಲಿಕೆಗಳ ಔಷಧಿ, ಬಿಳಿ ಕೂದಲು ಕಪ್ಪು ಮಾಡಲು, ಕೂದಲು ಬೆಳೆಯಲು ಔಷಧ ಲಭ್ಯ ಎಂದು ಕೂಗಿ ಕೂಗಿ ಹೇಳಲಾಗುತ್ತಿತ್ತು. ಇದರಿಂದ ಆಕರ್ಷಿತರಾದ ಜನರು ಈ ಮಳಿಗೆಗೆ ಕುತೂಹಲದಿಂದ ಭೇಟಿ ನೀಡುವ ದೃಶ್ಯ ಸಾಮಾನ್ಯವಾಗಿತ್ತು. ಮಕ್ಕಳ ವಿಜ್ಞಾನ ಪ್ರದರ್ಶನ ಗಮನ ಸೆಳೆಯಿತು.

ಕೃಷಿ ಇಲಾಖೆ ಸಿಬ್ಬಂದಿ ಬತ್ತ, ರಾಗಿ, ದ್ವಿದಳ ಧಾನ್ಯ, ಹಾಗೂ ಕೃಷಿ ಯಂತ್ರೋಪಕರಣಗಳಿಗೆ ನೀಡುವ ಸಬ್ಸಿಡಿ ಕುರಿತು ಮಾಹಿತಿ ನೀಡಿದರು. ಬೆಲ್ಲ ತೂಕ ಮಾಡುವುದು, ಹರಾಜು ಮಾರುಕಟ್ಟೆ, ಮೀನುಗಾರಿಕೆ ಇಲಾಖೆಯು ಮೀನುಗಳ ತಳಿಗಳು, ಮೀನು ಹಿಡಿಯುವ ವಿಧಾನ, ಗಿರಿರಾಜ ಕೋಳಿ ಸಾಕಾಣೆಯಿಂದ ಸಂಪಾದನೆ, ವಿವಿಧ ಮಾದರಿಯ ಹಸುಗಳ ಬಗ್ಗೆ ರೈತರಿಗೆ ಸಂಬಂಧಪಟ್ಟ ಇಲಾಖೆಗಳ ಸಿಬ್ಬಂದಿ ವಿವರಿಸಿದರು.

ಜಿಲ್ಲಾ ಪಂಚಾಯಿತಿಯು ಶಾಲಾ ಶೌಚಾಲಯ, ಸಮುದಾಯ ಶೌಚಾಲಯ, ಕಡಿಮೆ ನೀರು ಬಳಸುವ ಶೌಚಾಲಯಗಳು ಹಾಗೂ ಅತಿ ಕಡಿಮೆ ಬೆಲೆಯ ಗುಜರಾತ್ ಶೌಚಾಲಯಗಳ ಮಾದರಿಗಳನ್ನು ಪ್ರದರ್ಶನದಲ್ಲಿ ಇಡಲಾಗಿತ್ತು. ಮಳೆ ನೀರು ಸಂಗ್ರಹಿಸುವ ಮೂಲಕ ಅಂತರ್ಜಲ ಹೆಚ್ಚಿಸುವುದು ಹಾಗೂ ಮನೆ ಮೇಲಿಂದ ಬೀಳುವ ಮಳೆ ನೀರನ್ನು ಟ್ಯಾಂಕ್‌ನಲ್ಲಿ ಸಂಗ್ರಹಿಸಿಕೊಟ್ಟುಕೊಂಡು ಇತರೆ ಕೆಲಸಗಳಿಗೆ ಬಳಕೆ ಮಾಡುವುದರ ಕುರಿತು ಪ್ರಾತ್ಯಕ್ಷಿಕೆ  ನೀಡಲಾಯಿತು.

ಎಚ್‌ಎಂಟಿ ಕಂಪೆನಿಯ ರೂ. 375ರಿಂದ ರೂ. 3,450 ವರೆಗಿನ ವಾಚ್‌ಗಳು ಪ್ರಮುಖ ಆಕರ್ಷಣೆಯಾಗಿತ್ತು. ವಾಚ್ ಕೊಳ್ಳುವವರಿಗೆ ಮೂರು ದಿನಗಳ ಕಾಲ ಶೇ. 25ರವರೆಗೆ ರಿಯಾಯಿತಿ ಇದೆ. ಬಿಎಚ್‌ಇಎಲ್ ಕಂಪೆನಿಯು ಸೌರ ಶಕ್ತಿ ಮೂಲಕ ಸೋಲಾರ್ ಲ್ಯಾಟಿನ್, ಕಾಂಪೌಂಡ್ ಮತ್ತು ಮನೆಯಲ್ಲಿ ಬಳಸುವ ಲೈಟ್‌ಗಳ ಬಗ್ಗೆ ಮಾಹಿತಿ ನೀಡಿತು.ಬಹುತೇಕ ಮಳಿಗೆಗಳು ಭರ್ತಿಯಾಗಿದ್ದವು. ಸಾರ್ವಜನಿಕರು ತಡ ಮಾಡದೆ ವಸ್ತುಪ್ರದರ್ಶನಕ್ಕೆ ಭೇಟಿನೀಡಿ ಮಾಹಿತಿ ಪಡೆದುಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT