ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಂತಿ, ಭೇದಿ ಉಲ್ಭಣ: ಜನತೆ ಆತಂಕ

Last Updated 8 ಸೆಪ್ಟೆಂಬರ್ 2011, 10:00 IST
ಅಕ್ಷರ ಗಾತ್ರ

ಅಕ್ಕಿಆಲೂರ: ಇಲ್ಲಿಗೆ ಸಮೀಪವಿರುವ ಗೇರಗುಡ್ಡ ಬಸಾಪುರ ಗ್ರಾಮದಲ್ಲಿ ವಾಂತಿ, ಭೇದಿ ಪ್ರಕರಣಗಳು ಮತ್ತೆ ಉಲ್ಭಣಗೊಂಡಿದ್ದು ಗ್ರಾಮದಲ್ಲಿ ಆತಂಕ ಮುಂದುವರೆದಿದೆ.

ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆಯವರೆಗೆ ಅಸ್ವಸ್ಥಗೊಂಡ ಗ್ರಾಮಸ್ಥರ ಸಂಖ್ಯೆ ಹೆಚ್ಚುತ್ತಾ ಸಾಗಿದ್ದು ವಾಂತಿ, ಭೇದಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ 4 ಜನ ಗ್ರಾಮಸ್ಥರನ್ನು ಹುಬ್ಬಳ್ಳಿಯ ಕಿಮ್ಸಗೆ ದಾಖಲಿಸಲಾಗಿದೆ. 

ಬುಧವಾರ ಮಧ್ಯಾಹ್ನದ ವರೆಗೆ ಮೂವರು ಚಿಕ್ಕಮಕ್ಕಳು ಸೇರಿದಂತೆ ಸುಮಾರು 50 ಗ್ರಾಮಸ್ಥರು ಅಸ್ವಸ್ಥ ಮರಾಗಿದ್ದಾರೆ. ತೀವ್ರ ವಾಂತಿ, ಭೇದಿ ಯಿಂದ ನರಳುತ್ತಿರುವ ಮಲ್ಲವ್ವ ಪಡ ವೇಶಪ್ಪ ಸುಬ್ಬಣ್ಣನವರ (30), ಪವಿತ್ರಾ ಬಸವಣೆಪ್ಪ ಪಟ್ಟಣಶೆಟ್ಟಿ (15), ಯಲ್ಲಪ್ಪ ಬಸವಣೆಪ್ಪ ಸುಬ್ಬಣ್ಣ ನವರ (60) ಮತ್ತು ಬಸಪ್ಪ ಬಸ ಣೆಪ್ಪ ಬಿದರಗಡ್ಡಿ ಎಂಬ ಗ್ರಾಮಸ್ಥ ರನ್ನು ಹುಬ್ಬಳ್ಳಿಯ ಕಿಮ್ಸ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ಕಲುಷಿತ ಕುಡಿಯುವ ನೀರನ್ನು ಸೇವಿಸಿದ್ದು ಘಟನೆಗೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿರುವ ಹಿನ್ನೆಲೆಯಲ್ಲಿ ಅಕ್ಕಿಆಲೂರ ಹಾಗೂ ವೀರಾಪುರದಿಂದ ಗೇರಗುಡ್ಡ ಬಸಾಪುರ ಗ್ರಾಮಕ್ಕೆ ಶುದ್ಧ ಕುಡಿಯುವ ನೀರನ್ನು ಪೊರೈಸಲಾಗುತ್ತಿದೆ.

ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರವನ್ನು ತೆರೆಯಲಾಗಿದ್ದು ವೈದ್ಯರು ಹಾಗೂ ಆರೋಗ್ಯ ಇಲಾ ಖೆಯ ಸಿಬ್ಬಂದಿ ಚಿಕಿತ್ಸೆ ಒದಗಿಸು ತ್ತಿದ್ದಾರೆ. ಗ್ರಾಮಸ್ಥರನ್ನು ಗುಣಮುಖರ ನ್ನಾಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಅಗತ್ಯ ಔಷಧಗಳನ್ನು ಪೊರೈ ಸುತ್ತಿದೆ.

ಈ ಪ್ರಕರಣದಲ್ಲಿ ಬಹುತೇಕ ಗ್ರಾಮ ಸ್ಥರು ಬರೀ ಭೇದಿಯಿಂದ ಬಳಲುತ್ತಿ ರುವುದು ಆರೋಗ್ಯ ಇಲಾಖೆಗೆ ತಲೆ ನೋವಾಗಿದೆ. ವಾಂತಿ ತಕ್ಷಣವೇ ನಿಯಂತ್ರಣಕ್ಕೆ ಬರುತ್ತಿದ್ದು ಭೇದಿ ನಿಯಂತ್ರಣ ಕಷ್ಟಸಾಧ್ಯ ಹೀಗಾಗಿ ಚಿಕಿತ್ಸೆ ನೀಡುತ್ತಿರುವ ವೈದ್ಯರ ತಂಡ ಪರ ದಾಡುವಂತಾಗಿದೆ. ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಸ್ವಸ್ಥಗೊಂಡ ಗ್ರಾಮಸ್ಥರು ಗುಣಮುಖರಾಗಿದ್ದಾರೆ ಎಂದು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಚಿನ್ಮಯ ಕುಲಕರ್ಣಿ ಪ್ರಜಾ ವಾಣಿಗೆ ತಿಳಿಸಿದ್ದಾರೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಈಶ್ವರ ಮಾಳೋದೆ, ತಾಲ್ಲೂಕಾ ಆರೋಗ್ಯಾ ಧಿಕಾರಿ ಡಾ.ರಾಜೇಂದ್ರ ಗೊಡ್ಡೆಮ್ಮಿ, ಸ್ಥಳೀಯ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯೆ ಗೀತಾ ಅಂಕಸಖಾನಿ, ಜಿ.ಪಂ. ಮಾಜಿ ಸದಸ್ಯ ಕೃಷ್ಣ ಈಳಗೇರ, ಗಾಮ ಪಂಚಾಯಿತಿ ಅಧ್ಯಕ್ಷ ಗಿರೀಶ ಬೂದಿಹಾಳ ಇನ್ನೂ ಹಲವರು ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಅಸ್ವಸ್ಥಗೊಂಡ ಗ್ರಾಮಸ್ಥರಿಗೆ   ಎಳನೀರು ವಿತರಿಸಿದರು. ಗೇರಗುಡ್ಡ ಬಸಾಪುರ ಗ್ರಾಮದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದು ಚಿಕಿತ್ಸೆ ಹಾಗೂ ಔಷಧೋಪಚಾರದಲ್ಲಿ ತೊಡಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT