ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಕ್‌ವೆಲ್ ಪಾದಪ್ರೀತಿ

Last Updated 12 ಜನವರಿ 2012, 19:30 IST
ಅಕ್ಷರ ಗಾತ್ರ

ಈ ಯುವಕ ಇಂದಿನ ಇತರ ಯುವಜನರಿಗಿಂತ ಸ್ವಲ್ಪ ಭಿನ್ನ. ಹೆಸರು ನಿತೇಶ್ ಜೈನ್. ಇವರು ಬೆಂಗಳೂರಿನ ಜಯನಗರದಲ್ಲಿ ವಾಕ್‌ವೆಲ್ ಅನ್ನುವ ಡೆಡಿಕೇಟೆಡ್ ಫುಟ್ ಕೇರ್ ಸೆಂಟರ್  ಪ್ರಾರಂಭಿಸಿದ್ದಾರೆ.

`ವೃಕ್ಷ ಮಾರ್ಕೆಟಿಂಗ್~ ಇವರ ಕಂಪನಿಯ ಹೆಸರು. ಮುಖ್ಯವಾಗಿ ಪ್ರಿವೆಂಟಿವ್ ಹೆಲ್ತ್‌ಕೇರ್ (ವಾಕ್‌ವೆಲ್) ಮತ್ತು ಹೆಲ್ತ್ ಸಪ್ಲಿಮೆಂಟ್ (ವಿಟಮಿನ್ ಟ್ಯಾಬ್ಲೆಟ್-ಟೋಟಲ್ ಫಿಟ್) ಹೆಸರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.

ಮೂಲತಃ ರಾಜಸ್ತಾನದವರಾದ ನಿತೇಶ್ ತಂದೆ ಚಂಪಲಾಲ್ ಜೈನ್ ಕರ್ನಾಟಕ ಫಾರ್ಮಾಸ್ಯುಟಿಕಲ್ಸ್ ಸೆಕ್ಟರ್‌ನಲ್ಲಿ ಕಳೆದ 45 ವರ್ಷಗಳಿಂದ ಕೆಲಸ ಮಾಡಿದ್ದಾರೆ. ಓದಿದ್ದು ಬಿಷಪ್ ಕಾಟನ್ ಬಾಯ್ಸ ಶಾಲೆ, ಜೈನ್ ಕಾಲೇಜಿನಲ್ಲಿ ಪಿಯು ನಂತರ ಆಕ್ಸಫರ್ಡ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಇನ್‌ಫರ್ಮೆಶನ್ ಸೈನ್ಸ್‌ನಲ್ಲಿ ಡಿಸ್ಟಿಕ್ಷನ್ ಪಡೆದ ನಂತರ ಒಳ್ಳೆಯ ಉದ್ಯೋಗದ ಅವಕಾಶಗಳು ಬಂದರೂ ಅದನ್ನು ಒಪ್ಪಿಕೊಳ್ಳಲು ಮನಸ್ಸು ಹಿಂದೇಟು ಹಾಕಿತು.

ಅಪ್ಪನ ಸಂಸ್ಥೆಯನ್ನೇ ನಡೆಸಬಹುದಾಗಿತ್ತು. ಆದರೆ, ಅದಕ್ಕೂ ಮನಸ್ಸು ಒಪ್ಪಲಿಲ್ಲ. ಇಲ್ಲಿಯವರೆಗೆ ಕೇವಲ ಅಪ್ಪ-ಅಮ್ಮ ಹೇಳಿದರು ಅಂತ ಓದಿದ್ದಾಗಿತ್ತು. ಇನ್ನು ಜೀವನದಲ್ಲಿ ತಮ್ಮದೇ ಅಭಿಪ್ರಾಯಗಳನ್ನು ಹೊಂದಿರುವ ಕಂಪೆನಿ ಶುರು ಮಾಡಬೇಕೆಂದು ಓದು ಮುಗಿದ ಮೇಲೆ ಆರು ತಿಂಗಳ ಬ್ರೇಕ್ ತೆಗೆದುಕೊಂಡೆ. 

 ಬೆಂಗಳೂರಿನಲ್ಲಿ ಫುಟ್ ಕೇರ್ ಬಗ್ಗೆ ಎಕ್ಸ್‌ಕ್ಲ್ಯೂಸಿವ್ ಕಂಪೆನಿ ಇರದಿರುವುದು ಗಮನಕ್ಕೆ ಬಂದಿತು. ಸಕ್ಕರೆ ಕಾಯಿಲೆಯವರಿಗೆ ಬೇಕಾಗುವಂತಹ ಚಪ್ಪಲಿ ಮತ್ತು ವಿವಿಧ ರೀತಿಯ ಕಾಲುಗಳಿಗೆ ಸಂಬಂಧಿಸುವ ತೊಂದರೆಗಳನ್ನು ತಪ್ಪಿಸುವುದರೊಂದಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ಈ ಕಂಪೆನಿ ಶುರುಮಾಡಿದೆ.

ಈ ಕಂಪೆನಿಯಲ್ಲಿ ಸಂಪೂರ್ಣ 10 ಮಂದಿ ಇದ್ದು, ಇವರಲ್ಲಿ ಇಬ್ಬರು ವೈದ್ಯರು. ಇರುವ ಎಲ್ಲರೂ ಯುವಕರೇ ಎಂಬುದು ವಿಶೇಷ. ಪಾದಗಳ ರಕ್ಷಣೆ ಕ್ಷೇತ್ರದಲ್ಲಿ `ವಾಕ್‌ವೆಲ್~ ಗೂ ವಿಶಿಷ್ಟ ಸ್ಥಾನವಿದೆ. ಒಂದೇ ಸೂರಿನಲ್ಲಿ ಕಾಲಿನ ಸ್ಕ್ಯಾನಿಂಗ್, ಪರಿಣತರ ಸಲಹೆ ಮತ್ತು ಪರಿಹಾರವನ್ನೂ ಸೂಚಿಸಲಾಗುತ್ತದೆ.

ಇದರಲ್ಲಿ ಸ್ಕ್ಯಾನಿಂಗ್ ಮತ್ತು ಸಲಹೆಗೆ ಹಣ ನೀಡಬೇಕಾದ ಅಗತ್ಯ ಇಲ್ಲ. ಈಗಾಗಲೇ ಒಂದು ಸಾವಿರ ಜನರು ಇದರ ಉಪಯೋಗ ಪಡೆದುಕೊಂಡಿದ್ದಾರೆ.

ಇಲ್ಲಿರುವ `ಫುಟ್ ಸ್ಕ್ಯಾನರನ್ನು ಬೆಲ್ಜಿಯಂನಿಂದ ತರಿಸಲಾಗಿದ್ದು, ಯಾವುದೇ ರೀತಿಯ ಪಾದಗಳ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ದೊರೆಯಲಿದೆ. ಇಲ್ಲಿ ನೀಡಲಾಗುವ ಪರಿಹಾರ ಜಾಗತಿಕ ಗುಣಮಟ್ಟದ್ದು. ದೇಶದ ವಿವಿಧ ಭಾಗಗಳಿಂದ ಮತ್ತು ಜರ್ಮನಿಯಿಂದಲೂ ಕಚ್ಚಾವಸ್ತುಗಳನ್ನು ತರಿಸುವುದು ಈ ಕಂಪನಿಯ ವೈಶಿಷ್ಟ್ಯ. ಮಾಹಿತಿಗಳಿಗೆ: 9986621920.   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT