ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಟಾಳ್ ನಾಗರಾಜ್‌ಗೆ ಎಸ್‌ಡಿಪಿಐ ಬೆಂಬಲ

Last Updated 23 ಏಪ್ರಿಲ್ 2013, 6:59 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್‌ಗೆ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಬೆಂಬಲ ಸೂಚಿಸಿದೆ ಎಂದು ಪಕ್ಷದ ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಆರೀಫ್ ತಿಳಿಸಿದರು.
ನಗರದ ಎಸ್‌ಡಿಪಿಐ ಕಚೇರಿಗೆ ಸೋಮವಾರ ವಾಟಾಳ್ ನಾಗರಾಜ್ ಅವರನ್ನು ಬರ ಮಾಡಿಕೊಂಡು ಸ್ವಾಗತಿಸಿ ಬೆಂಬಲ ವ್ಯಕ್ತಪಡಿಸಿದರು.

ಚಾಮರಾಜನಗರದ ಸಮಗ್ರ ಅಭಿವೃದ್ಧಿ ಬಗ್ಗೆ ಪಕ್ಷ ಅಧ್ಯಯನ ಮಾಡಿದೆ. ಕ್ಷೇತ್ರದ ಅಭಿವೃದ್ಧಿಗೆ ಒಬ್ಬ ಹೋರಾಟಗಾರನ ಆವಶ್ಯಕತೆ ಇದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯಕರ್ತರು, ಹಿತೈಷಿಗಳ ಅಭಿಪ್ರಾಯ ಸಂಗ್ರಹಿಸಿ ರಾಜ್ಯ ಸಮಿತಿಯ ನಿರ್ದೇಶನದಂತೆ ವಾಟಾಳ್‌ಗೆ ಪಕ್ಷ ಸಂಪೂರ್ಣ ಬೆಂಬಲ ನೀಡಿದೆ ಎಂದರು.

ವಾಟಾಳ್ ನಾಗರಾಜ್ ಮಾತನಾಡಿ, `ನಿಮ್ಮ ಬೆಂಬಲ ಪ್ರಗತಿದಾಯಕವಾಗಿದೆ. ಎಲ್ಲರೂ ಸೇರಿ ದೀನದಲಿತರು, ಅಲ್ಪಸಂಖ್ಯಾತರು, ಹಿಂದುಳಿದವರ ನೋವಿಗೆ ಧ್ವನಿಯಾಗಿ ಹೋರಾಟ ಮಾಡೋಣ ಎಂದು ಹೇಳಿದರು.

ಪಕ್ಷದ ನಗರಸಭೆ ಸದಸ್ಯರಾದ ಮಹೇಶ್, ಸೈಯದ್ ಇಮ್ರೋನ್, ವಹೀದಾ ಖಾನಂ, ಪಕ್ಷದ ಉಪಾಧ್ಯಕ್ಷ ಸಮೀಉಲ್ಲಾ ಖಾನ್, ಪ್ರಧಾನ ಕಾರ್ಯದರ್ಶಿ ಅಬ್ರಾರ್ ಅಹಮ್ಮದ್, ಕಾರ್ಯದರ್ಶಿ ಇರ್ಷಾದ್ ಅಹಮ್ಮದ್, ಸೈಯದ್ ಜುಲ್ಫಿ, ಅಜ್ಮತ್ ಖುರೇಷಿ, ಮಹಮ್ಮದ್ ಅಲಿ ಹಾಜರಿದ್ದರು.

ಜನರಿಗೆ ನೇರ ಸೌಲಭ್ಯ: ವಾಟಾಳ್
ಚಾಮರಾಜನಗರ: ತಾವು ಈ ಬಾರಿ ಶಾಸಕನಾಗಿ ಆಯ್ಕೆಯಾದರೆ ಯಾರ ಮಧ್ಯಸ್ಥಿಕೆಗೆ ಅವಕಾಶ ನೀಡದೆ ನೇರವಾಗಿ ಜನರ ಸಮಸ್ಯೆ ಬಗೆಹರಿಸಿ ಸವಲತ್ತು ಕಲ್ಪಿಸಲು ಒತ್ತು ನೀಡುತ್ತೇನೆ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಭ್ಯರ್ಥಿ ವಾಟಾಳ್ ನಾಗರಾಜ್ ಹೇಳಿದರು.

ತಾಲ್ಲೂಕಿನ ಬಂಡಿಗೆರೆ ಗ್ರಾಮದ ಶ್ರೀಮಂಟೇಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ನಡೆದ ಉಪ್ಪಾರ ಜನಾಂಗದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು. ಮತದಾರರು ವದಂತಿಗಳಿಗೆ ಕಿವಿಗೊಡಬಾರದು.  ಅಪಪ್ರಚಾರಕ್ಕೆ ಬೆಲೆ ಕೊಡದೆ ನನಗೆ ಆಶೀರ್ವಾದ ಮಾಡಬೇಕು. ಉಪ್ಪಾರ ಮೋಳೆಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗುವುದು ಎಂದು ಭರವಸೆ ನೀಡಿದರು.

ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಗೆ ಒತ್ತು ನೀಡಲಾಗುವುದು. ಯುವಕರಿಗೆ ಉದ್ಯೋಗ ಕೊಡಿಸಲು ಹೋರಾಟ ಮಾಡಲಾಗುವುದು. ಬಂಡಿಗೆರೆ ಗ್ರಾಮವನ್ನು ಉಪ ನಗರ ಮಾಡಲು ಆದ್ಯತೆ ನೀಡಲಾಗುವುದು. ಈ ಹಿನ್ನೆಲೆಯಲ್ಲಿ ಒಗ್ಗಟ್ಟಿನಿಂದ ನನಗೆ ಮತ ನೀಡಬೇಕು ಎಂದು ಮನವಿ ಮಾಡಿದರು. 
ಮುಖಂಡರಾದ ಶಿವಣ್ಣಶೆಟ್ಟಿ, ಮಾದಶೆಟ್ಟಿ, ಶಿವಯ್ಯಶೆಟ್ಟಿ, ಬಸವಶೆಟ್ಟಿ, ಚಿಕ್ಕಸಿದ್ದಶೆಟ್ಟಿ, ಕೃಷ್ಣಶೆಟ್ಟಿ, ಪುಟ್ಟಸ್ವಾಮಿ, ನಿಂಗಶೆಟ್ಟಿ, ಲಿಂಗರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT