ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ಉದ್ದೇಶದ ಲಾಂಡ್ರಿ ವಹಿವಾಟು

Last Updated 23 ಫೆಬ್ರುವರಿ 2011, 16:25 IST
ಅಕ್ಷರ ಗಾತ್ರ

ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಬಳಸುವ, ಸಗಟು ರೂಪದಲ್ಲಿ ವಸ್ತ್ರಗಳನ್ನು ಶುಭ್ರಗೊಳಿಸುವ  ವಾಷಿಂಗ್‌ಮಷೀನ್‌ಗಳನ್ನು ತಯಾರಿಸುವ ಮತ್ತು ವಿತರಿಸುವ ರಾಮ್‌ಸನ್ಸ್ ಗಾರ್ಮೆಂಟ್ ಫಿನಿಷಿಂಗ್ ಈಕ್ವಿಪ್‌ಮೆಂಟ್ ಸಂಸ್ಥೆಯು ಅಮೆರಿಕದ ಅಲೈಯನ್ಸ್ ಲಾಂಡ್ರಿ ಸಿಸ್ಟಮ್ಸ್ ಸಹಯೋಗದಲ್ಲಿ ಎರಡು ದುಬಾರಿ  ಲಾಂಡ್ರಿ ಸಾಧನಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಸಂಸ್ಥೆಯು ದೇಶದಲ್ಲಿ ಪರಿಚಯಿಸಲಿರುವ ಬಾಡಿಗೆಗೆ ದೊರೆಯುವ ಲಾಂಡ್ರಿ ಪರಿಕಲ್ಪನೆಯು ಹೋಟೆಲ್, ಆಸ್ಪತ್ರೆ, ಅಪಾರ್ಟ್‌ಮೆಂಟ್ಸ್, ಶಿಕ್ಷಣ ಸಂಸ್ಥೆಗಳು, ಸೇನೆ, ರೈಲ್ವೆ ಮತ್ತಿತರ ಸಂಸ್ಥೆಗಳಿಗೆ  ಹೆಚ್ಚು ಪ್ರಯೋಜನಕ್ಕೆ ಬರಲಿದೆ.

ನಾಣ್ಯಗಳನ್ನು ಹಾಕಿದರೆ ಬಟ್ಟೆಗಳನ್ನು ಶುಭ್ರ ಮಾಡಿಕೊಡುವ  ‘ಸ್ಪೀಡ್ ಕ್ವೀನ್’ ಬ್ರಾಂಡ್‌ನ ಲಾಂಡ್ರಿ ಯಂತ್ರವನ್ನೂ ಸದ್ಯದಲ್ಲಿಯೇ ಪರಿಚಯಿಸಲಾಗುವುದು ಎಂದು ರಾಮ್‌ಸನ್ಸ್ ನಿರ್ದೇಶಕ ಸುಂದರ್ ಬೆಲಾನಿ, ಬುಧವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

8 ರಿಂದ 10, 18ರಿಂದ 20 ಮತ್ತು 25 ರಿಂದ 35 ಕೆಜಿ ತೂಕದಷ್ಟು ಬಟ್ಟೆಗಳನ್ನು ಏಕಕಾಲಕ್ಕೆ ಶುಭ್ರಗೊಳಿಸುವ, ಹಣ ಪಾವತಿಸಿ ಬಟ್ಟೆ ತೊಳೆದುಕೊಂಡು ಹೋಗುವ ‘ಲಾಂಡರ್‌ಮಾರ್ಟ್’ ಪರಿಕಲ್ಪನೆಯನ್ನೂ ಪರಿಚಯಿಸಲಾಗುತ್ತಿದೆ.

ಗ್ರಾಹಕರು ಹಣ ಪಾವತಿಸಿ ಬಟ್ಟೆಗಳನ್ನು ಶುಭ್ರಗೊಳಿಸಿಕೊಂಡು ಹೋಗುವ ಮಳಿಗೆಗಳ ಆರಂಭಕ್ಕೆ ರೂ 10ರಿಂದ ರೂ 20 ಲಕ್ಷ ವೆಚ್ಚ ತಗುಲುವುದು. ವಾಣಿಜ್ಯ ಬಳಕೆ ಉದ್ದೇಶದ ಪ್ರತಿಯೊಂದು ವಾಷಿಂಗ್ ಮಷಿನ್‌ಗಳ ಬೆಲೆ ರೂ 2 ಲಕ್ಷದಿಂದ ಆರಂಭಗೊಳ್ಳುತ್ತದೆ. ಇಂತಹ ಮಳಿಗೆಗಳನ್ನು ಅರೆ ಕಾಲಿಕ ವೃತ್ತಿಯಂತೆ ಯಾರಾದರೂ ಆರಂಭಿಸಬಹುದು. ಹೂಡಿಕೆ ಮಾಡಿದ ಮೊತ್ತಕ್ಕೆ ಶೇ 40ರಷ್ಟು ಲಾಭ ಪಡೆದುಕೊಳ್ಳಬಹುದು. ನಗರದ ಹೊರವಲಯದ ಬೊಮ್ಮಸಂದ್ರದಲ್ಲಿ ರೂ 15ರಿಂದ ರೂ 20 ಕೋಟಿ ವೆಚ್ಚದಲ್ಲಿ ಲಾಂಡ್ರಿಗಳ ತಯಾರಿಕಾ ಘಟಕ ಆರಂಭಿಸಲಾಗುತ್ತಿದೆ. ಅಲೈಯನ್ ಸಂಸ್ಥೆಯ ಸಹಯೋಗದಲ್ಲಿ ಈ ಘಟಕ ಅಸ್ತಿತ್ವಕ್ಕೆ ಬರುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT