ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯವ್ಯ ಖಾದ್ಯಕ್ಕೆ ಜಾಫ್ರಾನ್

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಉದ್ಯಾನ ನಗರ ಬೆಳೆದಂತೆ ಹೆಚ್ಚು ಹೆಚ್ಚು ಉದ್ಯಮಗಳು ವಹಿವಾಟಿನಲ್ಲಿ ತೊಡಗುತ್ತಿವೆ. ಇದಕ್ಕೆ ಹೋಟೆಲ್ ಉದ್ಯಮವೂ ಹೊರತಾಗಿಲ್ಲ. ನಿತ್ಯ ಒಂದಿಲ್ಲೊಂದು ಐಷಾರಾಮಿ ರೆಸ್ಟೊರೆಂಟ್‌ಗಳು ಆರಂಭವಾಗುತ್ತವೆ. ಈ ಸಾಲಿಗೆ ಹೊಸ ಸೇರ್ಪಡೆ `ಜಾಫ್ರಾನ್~ ರೆಸ್ಟೋರೆಂಟ್.

ಸೆಂಟ್ ಮಾರ್ಕ್ಸ್ ರಸ್ತೆ ಪಾಪಣ್ಣ ಸ್ಟ್ರೀಟ್‌ನಲ್ಲಿ ತಲೆಯೆತ್ತಿರುವ `ಜಾಫ್ರಾನ್~ನಲ್ಲಿ ವಾಯವ್ಯ ಪ್ರದೇಶದ (ಪಂಜಾಬ್, ರಾಜಸ್ತಾನ, ಪಾಕ್ ಗುಡ್ಡಗಾಡು) ಪಾಕ ಶೈಲಿಯ ಮೂಲಕ ನೂತನ ಗ್ರಾಹಕರನ್ನು ತೃಪ್ತಿ ಪಡಿಸಲಿದೆ. ಜತೆಗೆ ಮೊಘಲ್ ಖಾದ್ಯಗಳೂ ಇಲ್ಲಿವೆ.

ಸಸ್ಯಾಹಾರಿ ಮತ್ತು ಮಾಂಸಾಹಾರಿ ಎರಡೂ ಬಗೆಯ ಆಹಾರ, ಮುರ್ಗ್ ಮಲೈ ಟಿಕ್ಕಾ, ಕಬಾಬ್, ಬಗೆಬಗೆಯ ಬಿರಿಯಾನಿ ಸವಿಯಬಹುದು. ಅರಮನೆಯ ಭವ್ಯ ಕೊಠಡಿಗಳನ್ನು ಹೋಲುವ ಒಳಾಂಗಣ ವಿನ್ಯಾಸ ರೆಸ್ಟೊರೆಂಟ್‌ಗೆ ವಿಶೇಷ ಆಕರ್ಷಣೆ ನೀಡಿದೆ. 

ಆರೋಗ್ಯಕರ ಆಹಾರವನ್ನು ತಯಾರಿಸುತ್ತೇವೆ. ಹೆಚ್ಚು ಮಸಾಲೆ, ಎಣ್ಣೆ ಬಳಸದೆ ರುಚಿಗೆ ನಮ್ಮಲ್ಲಿ ಆದ್ಯತೆ ಎನ್ನುತ್ತಾರೆ  ರೆಸ್ಟೊರೆಂಟ್ ಮಾಲೀಕರಾದ ಸಿದ್ಧಾರ್ಥ ಪೂಜಾರಿ ಮತ್ತು ರಾಜೇಶ್ ಸಚ್‌ದೇವ್. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT