ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯು ಗಡಿಯನ್ನೂ ಉಲ್ಲಂಘಿಸಿದ ಚೀನಾ - ಬಿಕ್ಕಟ್ಟು ಇನ್ನಷ್ಟು ಜಟಿಲ

Last Updated 24 ಏಪ್ರಿಲ್ 2013, 14:20 IST
ಅಕ್ಷರ ಗಾತ್ರ

ಲೇಹ್/ನವದೆಹಲಿ (ಪಿಟಿಐ): ಚೀನಾ ಭಾರತ ಭೂ ಗಡಿ ಮಾತ್ರವಲ್ಲ ವಾಯು ಗಡಿಯನ್ನೂ ಅತಿಕ್ರಮಿಸಿದ್ದು, ಭಾರತದ ವಾಯುಪ್ರದೇಶದೊಳಗೆ ಚೀನಾದ 2 ಮಿಲಿಟರಿ ಹೆಲಿಕಾಪ್ಟರ್‌ಗಳು ಹಾರಾಡಿವೆ.

ಕಳೆದ 21ರಂದೇ ಲೇಹ್‌ನಿಂದ ಈಶಾನ್ಯಕ್ಕೆ ಸುಮಾರು ನೂರು ಕಿ.ಮೀ. ದೂರದಲ್ಲಿ ಭಾರತದ ವಾಯುಪ್ರದೇಶದೊಳಗೆ ನುಗ್ಗಿದ ಚೀನಾದ 2 ಮಿಲಿಟರಿ ಹೆಲಿಕಾಪ್ಟರ್‌ಗಳು ಭಾರತದೊಳಗೆ ಆಹಾರ ಪೊಟ್ಟಣ, ಸಿಗರೇಟು ಹಾಗೂ ಸ್ಥಳಿಯ ಭಾಷೆಯಲ್ಲಿ ಬರೆದ ಕಾಗದಗಳನ್ನು ಎಸೆದು ಹೋಗಿವೆ ಎಂಬ ವಿಷಯ ತಡವಾಗಿ ಬೆಳಕಿಗೆ ಬಂದಿದೆ.

ಈ ಘಟನೆ ಚೀನಿ ಸೈನಿಕರು ಭಾರತದ ಗಡಿಯೊಳಗೆ ನುಗ್ಗಿದ 5 ದಿನದ ನಂತರ ಘಟಿಸಿದೆ ಎಂದು ತಿಳಿದು ಬಂದಿದೆ.

ಈ ಹಿನ್ನೆಲೆಯಲ್ಲಿ ಗಡಿ ಪ್ರದೇಶದಲ್ಲಿ ಹೆಚ್ಚಿನ ಪಡೆಗಳನ್ನು ಭಾರತ ನಿಯೋಜಿಸಿದ್ದು ಎಲ್ಲೆಡೆ ಕಟ್ಟೆಚ್ಚರ ವಹಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT