ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುನೆಲೆಗೆ ಪ್ರವೇಶ: ವಾಹನ ಸಂಚಾರ ಮಾರ್ಗ ಬದಲು

Last Updated 8 ಫೆಬ್ರುವರಿ 2011, 19:35 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಬುಧವಾರದಿಂದ ಭಾನುವಾರದವರೆಗೆ ‘ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಈ ಕೆಳಕಂಡಂತೆ ಬದಲಾವಣೆ ಮಾಡಲಾಗಿದೆ.

ಪ್ರದರ್ಶನಕ್ಕೆ ಆಗಮಿಸುವವರು ಬಳ್ಳಾರಿ ರಸ್ತೆ, ಅತ್ತಿಗಾನಹಳ್ಳಿ, ಅಮೃತಹಳ್ಳಿ, ಹೆಬ್ಬಾಳ ಮೇಲು ಸೇತುವೆ, ಸಿಬಿಐ ಜಂಕ್ಷನ್ ಮೂಲಕ ವಾಯುನೆಲೆ ಕಡೆಗೆ ಸಂಚರಿಸಬೇಕು.
ವಾಯುನೆಲೆ ಪ್ರವೇಶಕ್ಕೆ ಎ1, 2, ಎ2, 5, 8ಎ, 9ಎ ಮತ್ತು 9ಬಿ ಪ್ರವೇಶ ದ್ವಾರಗಳನ್ನು ಬಳಸಬೇಕು. ನಿರ್ಗಮನಕ್ಕೆ 3ಎ, 6 ಮತ್ತು 10ನೇ ಪ್ರವೇಶ ದ್ವಾರಗಳನ್ನು ಬಳಸಬೇಕು.

ಪಿ8 ಪಾಸ್ ಹೊಂದಿರುವವರು ಮತ್ತು ಟಿಕೆಟ್ ಪಡೆದಿರುವವರು ದೇವನಹಳ್ಳಿ ಕಡೆಯಿಂದ ಬಳ್ಳಾರಿ ರಸ್ತೆಗೆ ಐದನೇ ಪ್ರವೇಶ ದ್ವಾರದ ಮುಖಾಂತರ ಬಂದು ಸಾರ್ವಜನಿಕ ವಾಹನ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಬೇಕು. ಬೆಂಗಳೂರು ನಗರದಿಂದ ಬರುವವರು ವೆಂಕಟಾಲ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲ್ಲಿಸಿ ಪ್ರದರ್ಶನದ ವ್ಯವಸ್ಥಾಪಕರು ಒದಗಿಸುವ ಬಸ್‌ನಲ್ಲಿ ಪ್ರದರ್ಶನದ ಸ್ಥಳಕ್ಕೆ ಹೋಗಬೇಕು.

ಪಿ9 ಪಾಸ್ ಮತ್ತು ಟಿಕೆಟ್ ಹೊಂದಿರುವವರು ವಾಹನಗಳನ್ನು 8ಎ, 8, ಬಿ, 9ಎ ಮತ್ತು ಬಿ ಪ್ರವೇಶ ದ್ವಾರಗಳ ಮೂಲಕ ಪ್ರವೇಶಿಸಿ, ವಾಹನ ನಿಲ್ಲಿಸಿ ಪ್ರದರ್ಶನದ ಸ್ಥಳಕ್ಕೆ ಹೋಗಬೇಕು.
ನಿರ್ಗಮನ ವ್ಯವಸ್ಥೆ: ಪ್ರವೇಶ ದ್ವಾರ 1, 2ಎ, 2ಬಿ ಮೂಲಕ ಪ್ರವೇಶಿಸುವವರು ಪ್ರವೇಶ ದ್ವಾರಗಳ ಸಂಖ್ಯೆ 3ರಿಂದ ಹೊರಗೆ ಬಂದು ಬಳ್ಳಾರಿ ರಸ್ತೆಗೆ ಹೋಗಿ ಹುಣಸೇಮಾರನಹಳ್ಳಿ ಜಂಕ್ಷನ್‌ಗೆ ಬಂದು ‘ಯು’ ತಿರುವು ಪಡೆದು ನಗರದ ಕಡೆಗೆ ಸಾಗಬೇಕು.

ಡೊಮೆಸ್ಟಿಕ್ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡುವವರು ಪ್ರವೇಶದ್ವಾರ ಸಂಖ್ಯೆ 5ಎ ಮೂಲಕ ಹೊರಗೆ ಬಂದು ಬಳ್ಳಾರಿ ರಸ್ತೆಗೆ ಹೋಗಿ ನಗರದ ಕಡೆ ಸಂಚರಿಸಬೇಕು.
ವೆಂಕಟಾಲ ನಿಲುಗಡೆ ಪ್ರದೇಶದಲ್ಲಿ ವಾಹನ ನಿಲುಗಡೆ ಮಾಡಿದವರು ಅಂಬಿಯನ್ಸ್ ಡಾಬಾ ಬಳಿ ಎಡ ತಿರುವು ಪಡೆದು ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆ ಮೂಲಕ ನಾಗೇನಹಳ್ಳಿ ಗೇಟ್ ತಲುಪಿ ದೊಡ್ಡಬಳ್ಳಾಪುರ ರಸ್ತೆಗೆ ಹೋಗಬೇಕು. ಅಲ್ಲಿಂದ ಎಡಕ್ಕೆ ತಿರುಗಿ ಯಲಹಂಕ ಮದರ್ ಡೇರಿ ಮೂಲಕ ಬಿಇಎಲ್ ವೃತ್ತಕ್ಕೆ ಬಂದು ಮುಂದೆ ಸಾಗಬೇಕು.

‘ಅಡ್ವಾ’ ವಾಹನ ನಿಲುಗಡೆ ಪ್ರದೇಶದಲ್ಲಿ ಪ್ರವೇಶ ದ್ವಾರ 8ಎ, 8ಬಿ, 9ಎ ಮತ್ತು 9ಬಿ ಮೂಲಕ ಒಳ ಪ್ರವೇಶಿಸುವವರು ಪ್ರವೇಶ ದ್ವಾರ 10ರಿಂದ ಹೊರ ಬಂದು ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆ ಮೂಲಕ ನಾಗೇನಹಳ್ಳಿ ಗೇಟ್ ತಲುಪಿ ದೊಡ್ಡಬಳ್ಳಾಪುರ ರಸ್ತೆ ಸೇರಬೇಕು. ಅಲ್ಲಿಂದ ಎಡ ತಿರುವು ಪಡೆದು ಯಲಹಂಕ ಮದರ್ ಡೇರಿ ಮೂಲಕ ಬಿಇಎಲ್ ವೃತ್ತದ ಕಡೆಗೆ ಹೋಗಬೇಕು.

ಬಿಐಎಎಲ್ ಮಾರ್ಗ: ಬೆಂಗಳೂರು ನಗರದಿಂದ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ (ಬಿಐಎಎಲ್) ಕಡೆಗೆ ಸಂಚರಿಸುವವರು ಮೇಖ್ರಿ ವೃತ್ತದಿಂದ, ಬಿಇಎಲ್ ವೃತ್ತಕ್ಕೆ ಹೋಗಿ ಬಳಿಕ ದೊಡ್ಡಬಳ್ಳಾಪುರ ರಸ್ತೆಗೆ ಸಾಗಿ ರಾಜಾನುಕುಂಟೆ ಸಮೀಪ ಬಲ ತಿರುವು ಪಡೆದು ಎಂವಿಐಟಿ ವೃತ್ತಕ್ಕೆ ತಲುಪಿ ನಂತರ ಬಳ್ಳಾರಿ ರಸ್ತೆಯಲ್ಲಿ ಸಂಚರಿಸಬೇಕು. ಬೆಂಗಳೂರು ನಗರದ ಪಶ್ಚಿಮ ಮತ್ತು ದಕ್ಷಿಣ ಭಾಗದ ಸಾರ್ವಜನಿಕರು ಬಿಐಎಎಲ್‌ಗೆ ಹೋಗಲು ಹೊರ ವರ್ತುಲ ರಸ್ತೆ ಬಳಸಬೇಕು., ನಂತರ ನ್ಯೂ ಬಿಇಎಲ್ ವೃತ್ತ, ಗಂಗಮ್ಮನಗುಡಿ ಮೂಲಕ ಸಾಗಬೇಕು. ಬಳಿಕ ಮದರ್ ಡೇರಿ ಮುಖಾಂತರ ಯಲಹಂಕ ತಲುಪಿ ದೊಡ್ಡಬಳ್ಳಾಪುರ ರಸ್ತೆ, ರಾಜಾನುಕುಂಟೆ ಬಳಿ ಎಡ ತಿರುವು ಪಡೆದು ಎಂವಿಐಟಿ ಪ್ರವೇಶ ದ್ವಾರ ತಲುಪಿ ಬಿಐಎಎಲ್ ಕಡೆಗೆ ಹೋಗಬೇಕು.

ನಗರದ ಆಗ್ನೇಯ ಮತ್ತು ಪೂರ್ವ ಭಾಗದಿಂದ ಸಂಚರಿಸುವವರು ಹೊರ ವರ್ತುಲ ರಸ್ತೆ ಸೇರಿ ಹೆಣ್ಣೂರು ರಸ್ತೆ, ನಾಗಾವಾರ, ಥಣಿಸಂದ್ರ, ಕೋಗಿಲು ತಿರುವು ಬಳಿ ಬಳ್ಳಾರಿ ರಸ್ತೆಗೆ ಬಂದು ಬಾಗಲೂರು ಕಡೆ ಸಾಗಿ ದೇವನಹಳ್ಳಿ ಟೌನ್ ಸೇರಿ ಬಿಐಎಎಲ್‌ಗೆ ಹೋಗಬೇಕು. ವಾಯುನೆಲೆ ಕಡೆ ಸಂಚರಿಸುವವರು ನಾಗಾವಾರ, ಥಣಿಸಂದ್ರ, ಕೋಗಿಲು ತಿರುವು ಮೂಲಕ ಬಳ್ಳಾರಿ ರಸ್ತೆ ಸೇರಿ ನಂತರ ಹೆಣ್ಣೂರು ರಸ್ತೆ, ಬಾಗಲೂರು ರಸ್ತೆ, ಬಾಗಲೂರು ತಿರುವಿನ ಮೂಲಕ ಮುಂದೆ ಸಾಗಬೇಕು.

ಭಾರಿ ವಾಹನಗಳ ನಿಷೇಧ: ಬುಧವಾರದಿಂದ ಭಾನುವಾರದವರೆಗೆ ಬೆಳಿಗ್ಗೆ ಆರು ಗಂಟೆಯಿಂದ ರಾತ್ರಿ ಹತ್ತು ಗಂಟೆವರೆಗೆ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳನ್ನು ಹೊರತುಪಡಿಸಿ ಭಾರಿ ವಾಹನಗಳು ಹಾಗೂ ಜಂಟಿ ಬಸ್‌ಗಳ ಸಂಚಾರವನ್ನು ಬಳ್ಳಾರಿ ರಸ್ತೆಯಲ್ಲಿ ನಿರ್ಬಂಧಿಸಲಾಗಿದೆ

ತುಮಕೂರು ಕಡೆಯಿಂದ ಹೈದರಾಬಾದ್ ಕಡೆಗೆ ಸಂಚರಿಸುವ ಭಾರಿ ವಾಹನಗಳು ದಾಬಸ್‌ಪೇಟೆ ಬಳಿ ಎಡ ತಿರುವು ಪಡೆದು ರಾಷ್ಟ್ರೀಯ ಹೆದ್ದಾರಿ 207ರ ಮೂಲಕ ಸಾಗಬೇಕು.
ಮೈಸೂರು ಕಡೆಯಿಂದ ಹೈದರಾಬಾದ್ ಕಡೆ ಸಾಗುವವರು ಹೊರ ವರ್ತುಲ ರಸ್ತೆಯಿಂದ ಬಂದು ನೆಲಮಂಗಲದ ಮೂಲಕ ಕನಸವಾಡಿ, ರಾಜಾನುಕುಂಟೆ, ಎಂವಿಐಟಿ ಮೂಲಕ ಬಳ್ಳಾರಿ ರಸ್ತೆ ಸೇರಬೇಕು.

ಹಳೆ ಮದ್ರಾಸ್ ರಸ್ತೆ ಕಡೆಗೆ ಹೋಗುವವರು ಬೂದಿಗೆರೆ ತಿರುವಿನಿಂದ ರಾಷ್ಟ್ರೀಯ ಹೆದ್ದಾರಿ 207ಕ್ಕೆ ಬರಬೇಕು. ಆ ನಂತರ ದೇವನಹಳ್ಳಿ ಮೂಲಕ ಮುಂದೆ ಸಾಗಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT