ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಯುಪಡೆಗೆ 75 ತರಬೇತಿ ಯುದ್ಧ ವಿಮಾನ ಖರೀದಿ

Last Updated 23 ಜುಲೈ 2012, 19:30 IST
ಅಕ್ಷರ ಗಾತ್ರ

ತುಮಕೂರು: ಸ್ವಿಟ್ಜರ್‌ಲೆಂಡ್‌ನ ಪಿಲಾಟಸ್ ಏರ್‌ಕ್ರಾಪ್ಟ್ ಕಂಪೆನಿಯಿಂದ ಭಾರತೀಯ ವಾಯು ಪಡೆಗೆ 75 ತರಬೇತಿ ಯುದ್ಧ ವಿಮಾನಗಳನ್ನು ಖರೀದಿಸಲಾಗುತ್ತಿದೆ ಎಂದು ಭಾರತೀಯ ವಾಯು ಪಡೆಯ ಏರ್ ಮಾರ್ಷಲ್ (ತರಬೇತಿ) ರಾಜೀಂದರ್ ಸಿಂಹ ಇಲ್ಲಿ ಸೋಮವಾರ ತಿಳಿಸಿದರು.

 ನಗರದಲ್ಲಿ ಮಾಜಿ ಸೈನಿಕರ ಇಸಿಎಚ್‌ಎಸ್ ಪಾಲಿ ಕ್ಲಿನಿಕ್ ಉದ್ಘಾಟನಾ ಕಾರ್ಯಕ್ರಮದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ತರಬೇತಿ ಯುದ್ಧ ವಿಮಾನ ಖರೀದಿ ಸಂಬಂಧ ರಕ್ಷಣಾ ಸಚಿವಾಲಯವು ಈಗಾಗಲೇ ಒಪ್ಪಂದಕ್ಕೆ ಸಹಿ ಹಾಕಿದೆ. ಮುಂದಿನ ವರ್ಷ ಜನವರಿಯಲ್ಲಿ `ಪಿಲಾಟಸ್-ಪಿಸಿ 7~ ಹೆಸರಿನ 13 ಯುದ್ಧ ವಿಮಾನಗಳು ಸೇರ್ಪಡೆಯಾಗಲಿವೆ. ಆ ಬಳಿಕ ಪ್ರತಿ ಎರಡು ತಿಂಗಳಿಗೆ ಐದರಂತೆ ಉಳಿದ ವಿಮಾನಗಳು ಬರಲಿವೆ ಎಂದರು.

ಸದ್ಯಕ್ಕೆ ಸೈನಿಕರಿಗೆ ಎಚ್‌ಪಿಟಿ-32 ಯುದ್ಧ ವಿಮಾನಗಳಲ್ಲಿ ತರಬೇತಿ ನೀಡಲಾಗುತ್ತಿದೆ.  ಈ ವಿಮಾನಗಳಲ್ಲಿ ರೆಕಾರ್ಡ್ ಸ್ಟಿಸ್ಟಂ ಸೇರಿದಂತೆ ವಿವಿಧ ಸೌಲಭ್ಯಗಳ ಕೊರತೆಯಿದೆ. ಹೀಗಾಗಿ ಸೈನಿಕರಿಗೆ ತರಬೇತಿ ನೀಡಲು ಎಚ್‌ಪಿಟಿ-32 ಯುದ್ಧ ವಿಮಾನಗಳ ಬದಲಿಗೆ ಪಿಲಾಟಸ್-ಪಿಸಿ 7 ವಿಮಾನ ಬಳಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.

ಮುಂದಿನ ವರ್ಷ ತೇಜಸ್:  ದೇಶದ ಬಹು ನಿರೀಕ್ಷೆಯ ಸ್ವದೇಶಿ ನಿರ್ಮಿತ ಲಘು ಯುದ್ಧ ವಿಮಾನ `ತೇಜಸ್~ ಮುಂದಿನ ವರ್ಷ ಡಿಸೆಂಬರ್‌ನಲ್ಲಿ ವಾಯು ಪಡೆಗೆ ಸೇರ್ಪಡೆಯಾಗಲಿದೆ ಎಂದರು.ಬೀದರ್‌ನಲ್ಲಿ ಶೀಘ್ರವೇ ಸಂಚಾರಿ ಪಾಲಿಕ್ಲಿನಿಕ್ ಆರಂಭಿಸಲಾಗುವುದು. ಅಲ್ಲದೆ ತಮಿಳುನಾಡಿನ ತಾಮರಂನಲ್ಲಿ ಹೊಸದಾಗಿ ಪಾಲಿಕ್ಲಿನಿಕ್ ಆರಂಭಿಸಲಾಗುವುದು ಎಂದು ಹೇಳಿದರು.

ವಾಯು ಪಡೆಯಲ್ಲಿ ಅಧಿಕಾರಿ ಮಟ್ಟದ ಸಿಬ್ಬಂದಿ ಕೊರತೆ ಇದೆ. ವಾಯು ಸೇನೆ ಸೇರ್ಪಡೆಗೆ ಆಸಕ್ತಿ ತೋರುವ ಅಭ್ಯರ್ಥಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಆಯ್ಕೆಗೆ ಕಟ್ಟುನಿಟ್ಟಿನ ಮಾನದಂಡ ಅನುಸರಿಸುವುದರಿಂದ ಸಾಕಷ್ಟು ಸಂಖ್ಯೆಯಲ್ಲಿ ಗುಣಮಟ್ಟದ ಅಭ್ಯರ್ಥಿಗಳು ಸಿಗುತ್ತಿಲ್ಲ. ನಿವೃತ್ತಿಯಾಗುತ್ತಿರುವ ಅಧಿಕಾರಿಗಳ ಸಂಖ್ಯೆ ಹೆಚ್ಚಿರುವುದು ಸಿಬ್ಬಂದಿ ಕೊರತೆಗೆ ಪ್ರಮುಖ ಕಾರಣವಾಗಿದೆ.

ಆದರೂ ಆಯ್ಕೆ ಮಾನದಂಡವನ್ನು ಸಡಿಲಿಸುವ ಪ್ರಶ್ನೆಯೇ ಇ್ಲ್ಲಲ. ರಾಷ್ಟ್ರೀಯ ಸೈನಿಕ ತರಬೇತಿ ಕಾಲೇಜಿನಲ್ಲಿ ಕೇವಲ 350 ಪ್ರವೇಶ ಮಿತಿ ಇದೆ. ಪ್ರತಿ ವರ್ಷ ಒಂದು ಲಕ್ಷಕ್ಕೂ ಅಧಿಕ ಅಭ್ಯರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಹೆಚ್ಚುತ್ತಿರುವ ಆಕಾಂಕ್ಷಿಗಳ ಒತ್ತಡದ ಕಾರಣ ಪ್ರವೇಶ ಮಿತಿ ಹೆಚ್ಚಿಸಲು ಚಿಂತಿಸಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT