ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಗಳ್ಳಿ ಶಾಲೆ ಶತಮಾನೋತ್ಸವ ಇಂದು

Last Updated 23 ಡಿಸೆಂಬರ್ 2013, 9:45 IST
ಅಕ್ಷರ ಗಾತ್ರ

ಕುಮಟಾ: 135 ವರ್ಷಗಳ ಹಿಂದಿನ ತಾಲ್ಲೂಕಿನ ವಾಲಗಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮವನ್ನು ಡಿ. 23 ರಂದು  ಏರ್ಪಡಿಸಲಾಗಿದೆ.

ತಾವೆಲ್ಲ ಕಲಿತ ಶಾಲೆಯ ಶತಮಾನೋತ್ಸವ ತಮ್ಮ ಮನೆಯ ಮನೆಯ ಹಬ್ಬವೇನೋ ಎಂಬಂತೆ ಇಡೀ ಊರು ಕಾರ್ಯಕ್ರಮದ ತಯಾರಿಯಲ್ಲಿ ಪಾಲ್ಗೊಂಡಿದೆ. ವಿಶಿಷ್ಟ ರುಚಿಯ ಬೆಲ್ಲ, ಜೇಡಿ ಮಣ್ಣು (ಹಂಚಿನ ಮಣ್ಣು), ಕಾರು ಭತ್ತಕ್ಕೆ ಹೆಸರಾದ ವಾಲಗಳ್ಳಿ ಗ್ರಾಮದಲ್ಲಿ ಶಿಕ್ಷಣದ ಕುರಿತು135 ವರ್ಷಗಳ ಹಿಂದೆ ಪ್ರಜ್ಞೆ ಮೂಡಿದ್ದೂ ಗಮನಾರ್ಹ ಸಂಗತಿ.

1878ರ ಆಗಸ್ಟ್‌ 23 ರಂದು ಊರಿನ ಮೂರು ರಸ್ತೆಗಳು ಕೂಡವ ಜಾಗದಲ್ಲಿ ಜೋಪಡಿಯೊಂದರಲ್ಲಿ ಆರಂಭವಾದ ಶಾಲೆ ಮೂಲಕ ವಾಲಗಳ್ಳಿ ಊರಿನಲ್ಲಿ ಶಿಕ್ಷಣದ ಪರಿಕಲ್ಪನೆ ಮೊಳಕೆಯೊಡೆಯಿತು. ನಂತರ ಶಿಕ್ಷಣ ಪ್ರೇಮಿ ಶಾಂತಾರಾಮ ಶಿವ ಶೆಟ್ಟರ ಮನೆಯ ಮಾಳಿಗೆಯಲ್ಲಿ, ಕಾಲಕ್ರಮೇಣ ಸ್ವಂತ ಜಾಗದಲ್ಲಿ ಶಾಲೆ ಅಭಿವೃದ್ಧಿ ಹೊಂದಿತು.

ಓಲಗಳ್ಳಿ: ಕುಮಟಾದಿಂದ  ಚಂದಾವರ, ಸಿದ್ದಾಪುರಕ್ಕೆ ಹೋಗುವ ಮಾರ್ಗದಲ್ಲಿ ಸಿಗುವ ವಾಲಗಳ್ಳಿ ಗ್ರಾಮದ ಮೂಲ  ಹೆಸರು  ‘ಓಲಗಳ್ಳಿ’ ಎಂದು. ಆದರೆ ಕ್ರಮೇಣ ಉಚ್ಚಾರಕ್ಕೆ ಸುಲಭವಾದ ‘ವಾಲಗಳ್ಳಿ’ಯೇ ಊರಿನ ಹೆಸರಾಗಿ ದಾಖಲಾಯಿತು. ವಿಶಿಷ್ಟ ರುಚಿಯ ಬೆಲ್ಲಕ್ಕೆ ಹೆಸರಾದ ವಾಲಗಳ್ಳಿಯ ರಸ್ತೆ ಇಕ್ಕೆಲಗಳ ಗದ್ದೆಗಳಲ್ಲಿ ಈಗಲೂ ಕಬ್ಬು ಬೆಳೆಯುತ್ತಾರೆ. ವಾಲಗಳ್ಳಿಯಲ್ಲಿ ಕಬ್ಬಿನ ಗಾಣ ಬಿದ್ದಿದೆ ಎಂದರೆ ಅಲ್ಲಿ ಧಾವಿಸುವವರು ಹೆಚ್ಚು. ವಿಶಿಷ್ಟ ಜೇಡಿಮಣ್ಣಿಗೂ ಹೆಸರಾದ ಈ ಊರು ಒಂದು ಕಾಲದಲ್ಲಿ ಹಂಚಿನ ಕಾರ್ಖಾನೆಗಳಿಗೆ ಮಣ್ಣು ಪೂರೈಸುವ ಕೇಂದ್ರವೂ ಅಗಿತ್ತು.

ಶಾಲೆಯ ಶತಮಾನೋತ್ಸವ ಸಮಿತಿಯ  ಎನ್‌.ಕೆ.ಶಾನಭಾಗ, ಡಾ.ಪಿ.ಕೆ.ಭಟ್ಟ,  ಮಂಜುನಾಥ ಗೌಡ, ದೇವರಾಯ ನಾಯ್ಕ ಸೇರಿದಂತೆ ಊರಿನ ಅನೇಕರು ಶತಮಾನೋತ್ಸವದ ಸವಿ ನೆನಪಿಗೆ ಶಾಲೆಯಲ್ಲಿ ದೊಡ್ಡ ಮೊತ್ತದ ನಿಧಿ ಸ್ಥಾಪಿಸಿ, ಶಾಲೆಯಿಂದ ಕಲಿತು ಉನ್ನತ ವ್ಯಾಸಂಗಕ್ಕೆ ಹೋಗುವ ಪ್ರತಿಭಾವಂತ, ಬಡ ವಿದ್ಯಾರ್ಥಿಗಳಿಗೆ ನೆರವಾಗುವ ಮಹತ್ವದ ಕನಸು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT