ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್: ಕರ್ನಾಟಕ ಚಾಂಪಿಯನ್

Last Updated 18 ಡಿಸೆಂಬರ್ 2010, 7:35 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಭಾವಿ ಸ್ಮ್ಯಾಷ್ ಹಾಗೂ ಬ್ಲಾಕಿಂಗ್‌ನಿಂದ ಎದುರಾಳಿ ಪಡೆಗೆ ಸವಾಲಾಗಿ ನಿಂತ ಆತಿಥೇಯ ಕರ್ನಾಟಕ ತಂಡದವರು 26ನೇ ಅಖಿಲ ಭಾರತ ಪೋಸ್ಟಲ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಫೈನಲ್‌ನಲ್ಲಿ ತಮಿಳುನಾಡಿಗೆ ಆಘಾತ ನೀಡಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. ಕಂಠೀರವ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅಂತಿಮ ಹಣಾಹಣಿಯಲ್ಲಿ ಗೆಲ್ಲುವ ನೆಚ್ಚಿನ ತಂಡವಾಗಿ ಕಾಣಿಸಿಕೊಂಡಿದ್ದ ತಮಿಳು ನಾಡು ವಿರುದ್ಧ ಕರ್ನಾಟಕದವರು ಅಚ್ಚರಿಯ ಫಲಿತಾಂಶ ಪಡೆಯುವಲ್ಲಿ ಯಶಸ್ವಿಯಾದರು.

ಮೇಲು ನೋಟಕ್ಕೆ ಪ್ರಬಲ ಎನಿಸಿದರೂ ತಮಿಳುನಾಡು 0-3 ಸೆಟ್‌ಗಳ ಅಂತರದಿಂದ ಕರ್ನಾಟಕಕ್ಕೆ ಶರಣಾಯಿತು. ನಿಕಟ ಪೈಪೋಟಿಯ ನಡುವೆಯೂ ಪಂದ್ಯದ ಮೇಲೆ ಹಿಡಿತ ಬಿಗಿಗೊಳಿಸಿದ ಆತಿಥೇಯರು 25-22, 25-12, 25-23ರಲ್ಲಿ ವಿಜಯ ಸಾಧಿಸಿದರು. ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಆಂಧ್ರ ಪ್ರದೇಶ ತಂಡವು 3-2 ಸೆಟ್‌ಗಳ ಅಂತರದಿಂದ ಗುಜರಾತ್ ವಿರುದ್ಧ ಗೆಲುವು ಪಡೆಯಿತು. ಅಂಗಳದಲ್ಲಿ ಹೊಂದಾಣಿಕೆ ತೋರಿದ ಆಂಧ್ರ ಪ್ರದೇಶದವರು 25-23, 17-25, 25-21, 21-25, 15-12ರಲ್ಲಿ ಗೆದ್ದರು. ಅಂತರರಾಷ್ಟ್ರೀಯ ವಾಲಿಬಾಲ್ ಆಟಗಾರ ಶ್ರೀಶೇಖರ್ ಹಾಗೂ ಅಥ್ಲೀಟ್ ಪ್ರಮೀಳಾ ಅಯ್ಯಪ್ಪ ಅವರು ವಿಜೇತ ಕ್ರೀಡಾಪಟುಗಳಿಗೆ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT