ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲಿಬಾಲ್: ಮುಂದುವರಿದ ಗೆಲುವಿನ ಓಟ

Last Updated 18 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಗೆಲುವಿನ ಓಟ ಮುಂದುವರಿಸಿರುವ ಕರ್ನಾಟಕದ ಬಾಲಕ ಹಾಗೂ ಬಾಲಕಿಯರ ತಂಡದವರು ಚತ್ತೀಸಗಡದ ಚಂಪಾದಲ್ಲಿ ನಡೆಯುತ್ತಿರುವ 20ನೇ ರಾಷ್ಟ್ರೀಯ ಮಿನಿ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಮಂಗಳವಾರದ ಪಂದ್ಯದಲ್ಲಿಯು ಗೆಲುವು ಸಾಧಿಸಿದರು.

ಕರ್ನಾಟಕ ಬಾಲಕರ ತಂಡ 25-21, 25-12, 26-24ರಲ್ಲಿ ಹರಿಯಾಣ ತಂಡವನ್ನು ಸೋಲಿಸಿತು. ಈ ಪಂದ್ಯವು 57 ನಿಮಿಷಗಳ ಕಾಲ ನಡೆಯಿತು. ಬಾಲಕಿಯರ ವಿಭಾಗದವರು 25-19, 25-11, 25-13ಪಾಯಿಂಟ್‌ಗಳಿಂದ ಮಿಜೋರಾಂ ತಂಡವನ್ನು ಸೋಲಿಸಿದರು. ಈ ಪಂದ್ಯ 55 ನಿಮಿಷಗಳಲ್ಲಿ ಅಂತ್ಯ ಕಂಡಿತು ಎಂದು ಇಲ್ಲಿಗೆ ಬಂದಿರುವ ವರದಿಗಳು ತಿಳಿಸಿವೆ.

ಇದೇ ಚಾಂಪಿಯನ್‌ಷಿಪ್‌ನ ಬಾಲಕರ ವಿಭಾಗದ ಇತರ ಪಂದ್ಯಗಳಲ್ಲಿ ಆಂಧ್ರ ಪ್ರದೇಶ 25-20, 25-13, 25-20ರಲ್ಲಿ ಮಣಿಪುರ ಮೇಲೂ, ಮಹಾರಾಷ್ಟ್ರ 25-21, 19-25, 25-18, 25-15ರಲ್ಲಿ ಮಧ್ಯ ಪ್ರದೇಶ ವಿರುದ್ಧವೂ ಗೆಲುವು ಪಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT