ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಭವನಕ್ಕೆ 10 ಲಕ್ಷ ಅನುದಾನ: ಭರವಸೆ

Last Updated 13 ಅಕ್ಟೋಬರ್ 2011, 9:00 IST
ಅಕ್ಷರ ಗಾತ್ರ

ಗುಡಿಬಂಡೆ: ತಾಲ್ಲೂಕಿನಲ್ಲಿ ಸೂಕ್ತ ನಿವೇಶನ ದೊರೆತರೆ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಾಸಕರ ಹಾಗೂ ಸಂಸದರ ನಿಧಿಯಿಂದ ರೂ.10 ಲಕ್ಷ ನೀಡಲಾಗುವುದು ಎಂದು ಶಾಸಕ ಎನ್.ಸಂಪಂಗಿ ಭರವಸೆ ನೀಡಿದರು. 

ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಇಲ್ಲಿನ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ವಿ.ಕೃಷ್ಣಪ್ಪ ಮಾತನಾಡಿ, ವಾಲ್ಮೀಕಿ ಸಾರ್ವಕಾಲಿಕ  ಶ್ರೇಷ್ಠ ವ್ಯಕ್ತಿ ಎಂದರು.
ಟಿ.ಅಶ್ವತ್ಥರಾಮಯ್ಯ ಮಾತನಾಡಿದರು.

ಸಮಾರಂಭದಲ್ಲಿ ತಾ.ಪಂ. ಅಧ್ಯಕ್ಷೆ ಎನ್.ಮಂಜುಳಾ, ಉಪಾಧ್ಯಕ್ಷ ಕೆ.ಎ.ನಾರಾಯಣಸ್ವಾಮಿ, ಪ.ಪಂ.ಅಧ್ಯಕ್ಷೆ ಜಬೀನ್‌ತಾಜ್ ಚಾಂದ್‌ಪಾಷಾ, ಉಪಾಧ್ಯಕ್ಷ ಇಸ್ಮಾಯಿಲ್ ಅಜಾದ್, ತಹಶೀಲ್ದಾರ್ ಮುನಿವೀರಪ್ಪ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಜ್ಯೋತಿಪ್ರಕಾಶ್, ಸರ್ಕಲ್ ಇನ್ಸ್‌ಪೆಕ್ಟರ್ ಬಿ.ಎನ್.ಶಾಂತಕುಮಾರ್, ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಗಜನಾಣ್ಯ ನಾಗರಾಜ್, ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ವಿ.ನಾರಾಯಣಸ್ವಾಮಿ,  ಬಿಇಓ ವೈ.ಸಿ.ರವಿಕುಮಾರ್, ಪ.ಪಂ.ಮುಖ್ಯಾಧಿಕಾರಿ ಶ್ರೀರಾಮರೆಡ್ಡಿ, ತಾಲ್ಲೂಕು ಮುಖಂಡರಾದ   ಜಿ.ಎನ್.ನರಸಿಂಹಯ್ಯ, ಪ.ಪಂ. ಮಾಜಿ ಅಧ್ಯಕ್ಷ ಎ.ನಾಗರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶ್ವತ್ಥರೆಡ್ಡಿ ಇತರರು ಹಾಜರಿದ್ದರು.

ಎನ್.ನಾರಾಯಣಸ್ವಾಮಿ ಸ್ವಾಗತಿಸಿದರು.  ಗೋವಿಂದಪ್ಪ ನಿರೂಪಿಸಿದರು. ರವೀಂದ್ರ ಉಪ್ಪಾರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT