ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಮಹಾನ್ ದಾರ್ಶನಿಕ

Last Updated 11 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಕೃಷ್ಣರಾಜಪುರ: `ಮಹರ್ಷಿ ವಾಲ್ಮೀಕಿ ಅವರು ಅತ್ಯಮೂಲ್ಯ ರಾಮಾಯಣ ಮಹಾಕಾವ್ಯವನ್ನು ಕೊಡುಗೆಯಾಗಿ ಪ್ರಪಂಚಕ್ಕೆ ಪರಿಚಯಿಸಿದ ಮಹಾನ್ ದಾರ್ಶನಿಕ. ಅವರ ಆದರ್ಶಗಳನ್ನು ಇಂದಿನ ಯುವ ಜನಾಂಗ ಮೈಗೂಡಿಸಿಕೊಳ್ಳಬೇಕು~ ಎಂದು ಶಾಸಕ ಅರವಿಂದ ಲಿಂಬಾವಳಿ ಕರೆ ನೀಡಿದರು.

ಇಲ್ಲಿನ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ವಾಲ್ಮೀಕಿ ಮಹರ್ಷಿ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಅವರು, `ರಾಮಾಯಣ ಮಹಾ ಕಾವ್ಯದಲ್ಲಿರುವ ತತ್ವಗಳು ಇಂದಿಗೂ ಪ್ರಸ್ತುತವಾಗಿವೆ. ಕಾವ್ಯದ ತಿರುಳನ್ನು ಮಕ್ಕಳಿಗೆ ತಿಳಿಸುವುದು ಶಿಕ್ಷಕರ ಕರ್ತವ್ಯವಾಗಿದೆ. ಆದರ್ಶ ಪುರುಷನಾಗಿ ವಾಲ್ಮೀಕಿ ಸವೆಸಿದ ಬದುಕು ಎಲ್ಲರಿಗೂ ಮಾರ್ಗದರ್ಶನವಾಗಬೇಕು~ ಎಂದರು.

ಜಿ.ಪಂ. ಸದಸ್ಯ ಚಿಕ್ಕ ಮುನಿಯಪ್ಪ ಮತ್ತು ಜನಾಂಗದ ಮುಖಂಡ ಎಲ್ ಮುನಿಸ್ವಾಮಿ ಮಾತನಾಡಿದರು.
ತಾ.ಪಂ. ಸದಸ್ಯೆ ವನಜಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯೆ ಮುನಿರತ್ನಮ್ಮ , ಬಿಬಿಎಂಪಿ ಸದಸ್ಯರಾದ ಎನ್.ವೀರಣ್ಣ, ಆರ್. ಮಂಜುಳಾ ದೇವಿ, ನಗರಸಭೆ ಮಾಜಿ ಸದಸ್ಯ ಎಲ್.ಮಂಜುನಾಥ್, ಬಾಕ್ಸರ್ ನಾಗರಾಜ್ ಮತ್ತು ಜನಾಂಗದ ಮುಖಂಡರು ಉಪಸ್ಥಿತರಿದ್ದರು.
 
ತಹಸೀಲ್ದಾರ್ ಸಿ.ಎಲ್.ಶಿವಕುಮಾರ್ ಸ್ವಾಗತಿಸಿದರು. ಕ್ಷೇತ್ರ ಶಿಕ್ಷಣ ಅಧಿಕಾರಿ ನಂಜುಂಡಯ್ಯ ನಿರೂಪಿಸಿ, ವಿಶೇಷ ತಹಸೀಲ್ದಾರ್ ಬಾಳಪ್ಪ ವಂದಿಸಿದರು. ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ಜನಾಂಗದ ಮುಖಂಡರನ್ನು ಶಾಸಕ ಅರವಿಂದ ಲಿಂಬಾವಳಿ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT