ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್ಮೀಕಿ ಸರ್ವ ಜನಾಂಗಕ್ಕೆ ಮಾರ್ಗದರ್ಶಕ

Last Updated 17 ಅಕ್ಟೋಬರ್ 2011, 6:00 IST
ಅಕ್ಷರ ಗಾತ್ರ

ಗಜೇಂದ್ರಗಡ: ರಾಮಾಯಣದಂತ ಶ್ರೇಷ್ಠ ಮಹಾಕಾವ್ಯವನ್ನು ಬರೆದ ಮಹರ್ಷಿ ವಾಲ್ಮೀಕಿ ಅವರು ಕೇವಲ ಒಂದು ಸಮಾಜಕ್ಕೆ ಸೀಮಿತವಲ್ಲ. ಅವರು ಸರ್ವ ಜನಾಂಗಕ್ಕೆ ಮಾರ್ಗದರ್ಶಕರು ಎಂದು ಕೆಆರ್‌ಡಿಸಿಎಲ್ ಅಧ್ಯಕ್ಷ, ಶಾಸಕ ಕಳಕಪ್ಪ ಬಂಡಿ ಅಭಿಪ್ರಾಯಪಟ್ಟರು.

ಭಾನುವಾರ ಇಲ್ಲಿನ ಗವಿಮಠದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ವಾಲ್ಮೀಕಿ ಜನಾಂಗದ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಎಲ್ಲರೂ ಶಿಕ್ಷಣವಂತರಾಗಬೇಕು. ಶಿಕ್ಷಣದಿಂದ ಮಾತ್ರ ಸಮಾಜದ ಪ್ರಗತಿ ಸಾಧ್ಯ ಎಂದು ಅವರು ತಿಳಿಸಿದರು.

ಮಹರ್ಷಿ ವಾಲ್ಮೀಕಿ ಬರೆದ ರಾಮಾಯಣವು ಶೌರ್ಯ, ಪ್ರೀತಿ, ತ್ಯಾಗವನ್ನು ತಿಳಿಸುತ್ತದೆ. ಅವರ ತತ್ವ ಆದರ್ಶಗಳು ಇಡೀ ಮನುಕುಲದ ಒಳತಿಗೆ ಪೂರಕವಾಗಿವೆ ಎಂದು ಹೇಳಿದ ಅವರು, ವಾಲ್ಮೀಕಿ ಸಮಾಜದ ಉಪಯೋಗಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ಒದಗಿಸುವ ಭರವಸೆಯನ್ನು ನೀಡಿದರು.

ಉಪನ್ಯಾಸಕ ರವೀಂದ್ರ ಮಾಡಲಗೇರಿ ಮಾತನಾಡಿ, ವಾಲ್ಮೀಕಿ ಅವರು ನಾರದಮುನಿಗಳ ಸಹವಾಸದಿಂದ ಮಹರ್ಷಿ ಗಳಾಗಿ ಪರಿವರ್ತನೆ ಹೊಂದಿದರು. ಸಮಾಜದಲ್ಲಿರುವ ಸುಶಿಕ್ಷತರು ಇತರರಲ್ಲಿ ಜಾಗೃತಿ ಮೂಡಿಸಿ ಎಲ್ಲರೂ ಶಿಕ್ಷಣವಂತರಾಗಲು ಶ್ರಮಿಸಬೇಕೆಂದು ತಿಳಿಸಿದರು.

ಉಪನ್ಯಾಸಕ ಡಾ. ಡಿ.ಕೆ. ಮಾಳಿ ಮಾತನಾಡಿ, ಮಹರ್ಷಿ ವಾಲ್ಮೀಕಿ ಅವರ ಬಗ್ಗೆ ಕೆಲವರು ತಪ್ಪು ಅಭಿಪ್ರಾಯ ಹೊಂದಿದ್ದು, ಅವರ ಬಗ್ಗೆ ಇಲ್ಲ ಸಲ್ಲದ ಟೀಕೆಗಳನ್ನು ಮಾಡುತ್ತಿ ದ್ದಾರೆ. ಮಹಾತ್ಮರ ಬಗ್ಗೆ ಕೀಳು ಪದ ಪ್ರಯೋಗವನ್ನು ಯಾರೂ ಕೂಡ ಮಾಡಬಾರದೆಂದು ಹೇಳಿದರು.

ಸ್ಥಳೀಯ ವಾಲ್ಮೀಕಿ ಸಮಾಜದ ಅಧ್ಯಕ್ಷ ನಾಗರಾಜ ತಳವಾರ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಅಧ್ಯಕ್ಷೆ ಅಕ್ಕಮ್ಮ ರಾಮಜಿ, ಅಪ್ಜಲ್‌ಖಾನ್ ಲೋದಿ, ಸುವರ್ಣಬಾಯಿ ಪಾಟೀಲ, ವೈ.ಐ. ಚೋಳಣ್ಣವರ, ಸುಭಾಸ ಅಬ್ಬಿಗೇರಿ, ಶರಣಪ್ಪ ಉಪ್ಪಿನಬೇಟಗೇರಿ, ಕೆ.ಬಿ.ಪೂಜಾರ, ರಂಗಪ್ಪ ತಳವಾರ, ಎಮ್.ಎಚ್.ರಂಗಣ್ಣವರ, ಲಿಂಗರಾಜ ನಾಯಕ, ಶಂಕರಪ್ಪ ಹಟ್ಟಿಮನಿ, ಶಿವನಗೌಡ ಪಾಟೀಲ, ಬಿ.ಕೆ.ಹಾಳಕೇರಿ, ಹನಮಂತಪ್ಪ ಹರಪನಹಳ್ಳಿ, ಹುಲ್ಲಪ್ಪ ತಳವಾರ, ದುರಗಪ್ಪ ತಳವಾರ, ಹನಮಂತಪ್ಪ ತಳವಾರ, ಮಲ್ಲಪ್ಪ ಯಲಬುರ್ಗಿ, ಶರಣಪ್ಪ ಜಕ್ಕಲಿ ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಬೆಳಿಗ್ಗೆ ಇಲ್ಲಿನ ಎಪಿಎಂಸಿ ಗಣೇಶ ಮಂದಿರದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು. ಮೆರವಣಿಯಲ್ಲಿ ಕುಂಭಹೊತ್ತ ಮಹಿಳೆಯರು, ಜಾಂಜ್ ಮೇಳ, ಡೊಳ್ಳು ಕುಣಿತ ಸೇರಿದಂತೆ ವಿವಿಧ ವಾದ್ಯಗಳು ಜನರ ಗಮನ ಸೆಳೆದವು.

ಸಂಭ್ರಮದ ವಾಲ್ಮೀಕಿ ಜಯಂತಿ
ಗದಗ:
ಸ್ಥಳೀಯ ಅರಟಾಳ ರುದ್ರಗೌಡ ಡಿ.ಇಡಿ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಉಪನ್ಯಾಸಕ ಎಂ.ಸಿ. ಕಿಣಗಿ ಉಪನ್ಯಾಸ ನೀಡಿದರು. ಪ್ರಾಚಾರ್ಯ ಎಸ್.ಎಚ್. ರಾಮದುರ್ಗ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಉಪನ್ಯಾಸಕರು ಹಾಗೂ ಪ್ರಶಿಕ್ಷಣಾರ್ಥಿಗಳು ಹಾಜರಿದ್ದರು. ಮಹಮ್ಮದ್‌ರಫೀಕ್ ಬುಕಟಿಗಾರ ಸ್ವಾಗತಿಸಿದರು. ಡಿ.ಎಂ. ಕಲ್ಮನಿ ಕಾರ್ಯಕ್ರಮ ನಿರೂಪಿಸಿದರು. ಬಾಪುಗೌಡ ಅಡರಕಟ್ಟಿ ವಂದಿಸಿದರು.

ದಲಿತ ಸಂಘರ್ಷ ಸಮಿತಿ: ಸ್ಥಳೀಯ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ವಾಲ್ಮೀಕಿ ಜಯಂತಿ ಆಚರಿಸಲಾಯಿತು. ಎಸ್.ಎನ್. ಬಳ್ಳಾರಿ ಮಾತನಾಡಿ, ವಾಲ್ಮೀಕಿ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈರಪ್ಪ ಕೊಟ್ನಿಕಲ್ ಅಧ್ಯಕ್ಷತೆ ವಹಿಸಿದ್ದರು. ಯಲ್ಲಪ್ಪ ಬಳ್ಳಾರಿ, ಮಾರುತಿ ಗುಡಿಮನಿ, ಹೇಮೇಶ ಯಟ್ಟಿ, ಅಶೋಕ ಮುಳಗುಂದ, ಶಿವಾಜಿ ಪವಾರ, ಪರಶುರಾಮ ಪೂಜಾರ, ಧರ್ಮಣ್ಣ ಹೊಸಮನಿ, ಶ್ರೀನಿವಾಸಗೌಡರ, ಗುತ್ತಿ, ವಿನಾಯಕ ಬಳ್ಳಾರಿ ಮತ್ತಿತರರು ಹಾಜರಿದ್ದರು.

ಹುಲಕೋಟಿ: ಹುಲಕೋಟಿಯ ಗದಗ ಸಹಕಾರಿ ಜವಳಿ ಗಿರಣಿಯ ಪದವಿಪೂರ್ವ ಕಾಲೇಜಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ವಿ.ವೈ. ಹರ್ಲಾಪುರ ಅಧ್ಯಕ್ಷತೆ ವಹಿಸಿದ್ದರು. ಬಿ.ವೈ. ನರೇಗಲ್ ಉಪನ್ಯಾಸ ನೀಡಿದರು. ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ಅನುಪಮ, ವಿದ್ಯಾ, ಯಲ್ಲಮ್ಮ ಪ್ರಾರ್ಥಿಸಿದರು. ಮಹಮ್ಮದ್ ರಫೀಕ್ ದೊಡ್ಡಮನಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿದ್ಯಾ ಮಡಿವಾಳರ ವಂದಿಸಿದರು.

ಪಂ. ಪಂಚಾಕ್ಷರ ಗವಾಯಿಯವರ ಸಂಗೀತ ಕಾಲೇಜು: ನಗರದ ಪಂಡಿತ ಪಂಚಾಕ್ಷರ ಗವಾಯಿಗಳವರ ಸಂಗೀತ ಕಾಲೇಜಿನಲ್ಲಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಉಪನ್ಯಾಸಕ ಎನ್.ಎಂ. ಶೇಖ ಮಾತನಾಡಿ, ಮಹರ್ಷಿ ವಾಲ್ಮೀಕಿ ರಚಿಸಿದ ಮಹಾಕಾವ್ಯ ರಾಮಾಯಣವಾಗಿದೆ. ಇದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದರು.

ಪ್ರಾಚಾರ್ಯ ವಿ.ಎಂ. ಗುರುಮಠ ಅಧ್ಯಕ್ಷತೆ ವಹಿಸಿದ್ದರು. ಡಾ. ಲತಾ ವೃತ್ತಿಕೊಪ್ಪ, ವೈ.ಆರ್. ಮೂಲಿಮನಿ, ಎಚ್.ಎಫ್. ಗಂಜ್ಯಾಳ ಮತ್ತಿತರರು ಹಾಜರಿದ್ದರು. ವಿ.ಎಂ. ಪಟ್ಟದಕಲ್ಲ ಭಕ್ತಿಗೀತೆ ಹಾಡಿದರು. ಉಪನ್ಯಾಸಕ ಜಿ.ಟಿ. ಹಿಡ್ಕಿಮಠ ಸ್ವಾಗತಿಸಿದರು. ಜಿ.ಜಿ. ಸುತಾರ ಕಾರ್ಯಕ್ರಮ ನಿರೂಪಿಸಿದರು.

ಪಂ. ಪಂಚಾಕ್ಷರ ಗವಾಯಿಯವರ ಶಿಕ್ಷಣ ಮಹಾವಿದ್ಯಾಲಯ: ಸ್ಥಳೀಯ ಹಾತಲಗೇರಿ ರಸ್ತೆಯಲ್ಲಿನ ಪಂಡಿತ ಪಂಚಾಕ್ಷರ ಗವಾಯಿಗಳವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಆಚರಿಸಲಾಯಿತು. ಪ್ರಾಚಾರ್ಯ ಬಿ.ಜಿ. ಹಿರೇಮಠ ಅತಿಥಿಯಾಗಿ ಭಾಗವಹಿಸಿದ್ದರು.
 
ಪ್ರಾಚಾರ್ಯ ಆರ್.ಜಿ. ಚಿಕ್ಕಮಠ ಅಧ್ಯಕ್ಷತೆ ವಹಿಸಿದ್ದರು. ಉಪನ್ಯಾಸಕರಾದ ಎಸ್.ಪಿ. ಕೋಳಿವಾಡ, ಜೆ.ಎಸ್. ಇಟಗಿ, ಸುಧಾ ಮುದಕಣ್ಣವರ, ಆರ್.ಎಫ್. ಹೂಗಾರ, ರೂಪಾ ನಾಯ್ಡು, ಎನ್.ಎನ್. ಕಿಂದ್ರಿ, ಡಿ.ಎಸ್. ಶಿಗ್ಲಿ, ರಮೇಶ ರಾಮೇನಹಳ್ಳಿ, ಅಶೋಕ ಬಸೆಟ್ಟಿ, ಪ್ರವೀಣ ಮಾಳೆಕೊಪ್ಪಮಠ, ಎಸ್.ಎಸ್. ದೊಡ್ಡಮನಿ ಮತ್ತಿತರರು ಹಾಜರಿದ್ದರು.
 
ಸಿ.ಎಸ್. ಮಠಪತಿ ಹಾಗೂ ಬಿ.ಎಸ್. ಗಾರವಾಡ ಪ್ರಾರ್ಥಿಸಿದರು. ಎಸ್.ವಿ. ಬಡಿಗೇರ ಸ್ವಾಗತಿಸಿದರು. ಬಿ.ಎಸ್. ಬಸನಗೌಡರ ಕಾರ್ಯಕ್ರಮ ನಿರೂಪಿಸಿದರು. ಬಿ.ಎಂ. ಕರಿಬಿಷ್ಠಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT