ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಲ್‌ಸ್ಟ್ರೀಟ್ ಪ್ರತಿಭಟನೆಗೆ ತಿರುವು

Last Updated 23 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್ (ಐಎಎನ್‌ಎಸ್): ಉದ್ಯಮಗಳಲ್ಲಿನ ದುರಾಸೆ ವಿರುದ್ಧ ನಡೆಯುತ್ತಿರುವ ವಾಲ್‌ಸ್ಟ್ರೀಟ್ ಪ್ರತಿಭಟನೆ ನಿಧಾನವಾಗಿ ರಾಜಕೀಯ ತಿರುವು ಪಡೆಯುತ್ತಿದೆ.

2012ರ ಅಧ್ಯಕ್ಷೀಯ ಚುನಾವಣೆಗೆ ಕಾವು ಏರುತ್ತಿದ್ದು, ಚುನಾವಣೆ ಸಂದರ್ಭದಲ್ಲಿ ಉದ್ಯಮ ರಂಗಕ್ಕೆ ಕಡಿವಾಣ ಹಾಕಲು ಸಾಧ್ಯವಿಲ್ಲ. ಹಾಗಾಗಿ ಈಗ ಪ್ರತಿಭಟನೆ ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ.

2009ರಲ್ಲಿ ಬರಾಕ್ ಒಬಾಮ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ತೆಗೆದುಕೊಂಡ ನಿರ್ಧಾರಗಳು ಪ್ರತಿಭಟನಾಕಾರರ ಪರವಾಗಿವೆ. ಹಾಗಾಗಿ ಈ ಸನ್ನಿವೇಶವನ್ನು ಒಬಾಮ ತಮ್ಮ ಚುನಾವಣೆ ಸಂದರ್ಭದಲ್ಲಿ ಬಳಸಿಕೊಳ್ಳುವ ಸಾಧ್ಯತೆ ಇದೆ.

ವಿರೋಧ ಪಕ್ಷವಾದ ರಿಪಬ್ಲಿಕನ್‌ನ ಆರ್ಥಿಕ ನೀತಿಗಳನ್ನು ಈ ಸಂದರ್ಭದಲ್ಲಿ ಒಬಾಮ ಟೀಕೆ ಮಾಡುವ ಸಾಧ್ಯತೆ ಇದೆ. ವಾಲ್‌ಸ್ಟ್ರೀಟ್‌ನಿಂದಲೇ ತಮ್ಮ ಚುನಾವಣೆಗೆ ನಿಧಿ ಸಂಗ್ರಹ ಮಾಡಿರುವ ಒಬಾಮ, ಪರಿಣಾಮಕಾರಿ ಹಣಕಾಸು ವಲಯ ಸ್ಥಾಪಿಸುವ ಆಕಾಂಕ್ಷೆ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT