ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸಕ್ಕೆ ಮನೆ.. ದುಡಿಮೆಗೆ ಅಂಗಡಿ

Last Updated 24 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮನೆ ಅನ್ನೋದು ಕುಟುಂಬ­ದೊಟ್ಟಿಗೆ ವಾಸವಾಗಿ ಇರಲು ಒಂದು ನೆಲೆ ... ಅಷ್ಟೇನಾ? ಅಂದರೆ ದುಡಿಮೆ ಮಾಡೋದು ಮಾತ್ರ ಬೇರೆಲ್ಲೋ ದೂರದಲ್ಲಾ? ಇಂತಹ­ದ್ದೊಂದು ಪ್ರಶ್ನೆ ಮುಂದಿ­ಟ್ಟುಕೊಂಡು ಹುಡುಕೋಕೆ ಹೊರಟರೆ, ಎಷ್ಟೋ ಮನೆಗಳು ಈಗ ವಾಸಕ್ಕೆ ಅವಕಾಶ ಮಾಡಿಕೊ­ಡುವುದರ ಜತೆಗೇ ದುಡಿಮೆ ತಾಣಗಳೂ ಆಗಿವೆ.

ಜನ ಹೆಚ್ಚಾಗಿ ಓಡಾಡುವ ರಸ್ತೆಗಳ­(ಮುಖ್ಯರಸ್ತೆಗಳ) ಬದಿ­ಯಲ್ಲಿರುವ ಮನೆ­ಗಳನ್ನೊಮ್ಮೆ ಗಮನವಿಟ್ಟು ನೋಡಿ­ದರೆ ಅಲ್ಲಿ ಮನೆ ಜತೆಗೇ ಒಂದೆರಡು ಅಂಗಡಿ ಮಳಿಗೆಗಳೂ ಸೇರಿ­ಕೊಂ­ಡಿರುವುದು ಕಣ್ಣಿಗೆ ಬೀಳು­ತ್ತದೆ. ಗ್ರಾಮೀಣ, ಪಟ್ಟಣ ಪ್ರದೇಶ­ಗಳಲ್ಲಂತೂ ಅಂಗಡಿ ಮಳಿಗೆ ಇಲ್ಲದೆ ರಸ್ತೆ ಬದಿಯ ನಿವೇಶನಗಳಲ್ಲಿ ಜನ ಮನೆಯನ್ನೇ ಕಟ್ಟೋದಿಲ್ಲ. ಯಾಕೆಂ­ದರೆ ಸಣ್ಣ ಪ್ರಮಾಣದಲ್ಲಿ ಬಂಡವಾಳ ಹಾಕಿ ಒಂದು ಕಿರಾಣಿ ಅಂಗಡಿ ಹಾಕಿ­ಕೊಂಡು ಬಿಟ್ಟರೆ, ಆ ಕುಂಟುಂ­ಬದ ಜೀವನ ಹೇಗೋ ನಡೆದುಹೋಗುತ್ತೆ ಅನ್ನೋ ಲೆಕ್ಕಾಚಾರ.

ಕೃಷಿ ಕೆಲಸದ ಜತೆಗೆ ಮನೆಯಲ್ಲಿ ಉಳಿದವರಲ್ಲಿ ಯಾರಾದರೂ ಒಬ್ಬರು  ಅಂಗಡಿಯ ಜವಾಬ್ದಾರಿ ವಹಿಸಿಕೊ­ಳ್ಳುತ್ತಾರೆ. ಹಾಗಾಗಿಯೇ ಮನೆ ಕಟ್ಟಿಸುವಾಗ ಸ್ವಲ್ಪ ಬುದ್ಧಿಗೆ ಕೆಲಸ ಕೊಟ್ಟರೆ ವಾಸವಿರೋಕೆ ಮನೆಯೂ ಆಗುತ್ತೆ, ಬದುಕಿಗಾಗಿ ದುಡಿಯೋಕೆ ಒಂದು ದಾರಿಯೂ ಆಗುತ್ತೆ. ಗ್ರಾಮೀಣ, ಪಟ್ಟಣ ಪ್ರದೇಶದ ಮುಖ್ಯರಸ್ತೆಗಳಲ್ಲಿನ ನಿವೇಶನ ಹೊಂದಿ­ದವರು ಕಿರಾಣಿ ಅಂಗಡಿಯೋ, ಟೈಲರ್ ಅಂಗಡಿಯೋ, ಪಂಚರ್ ಅಂಗಡಿಯೋ ಇಟ್ಟುಕೊಂಡು ಮನೆ­ಯೊ­ಟ್ಟಿಗೇ ಬದುಕನ್ನೂ ರೂಪಿಸಿ­ಕೊಂಡು ಬಿಡುತ್ತಾರೆ. ಮನೆಯನ್ನೇ ಆದಾಯದ ಮೂಲವನ್ನಾ­ಗಿಸಿಕೊ­ಳ್ಳುತ್ತಾರೆ. ಎರಡು ಮೂರು ಅಂಗಡಿ ಮಳಿಗೆಗಳನ್ನು ಕಟ್ಟುವ ಕೆಲವರು ಒಂದು ಮಳಿಗೆಯಲ್ಲಿ ತಾವೇ ವ್ಯಾಪಾರ ಶುರುವಿಟ್ಟುಕೊಂಡರೆ ಉಳಿ­ದ­-ವನ್ನು ಬಾಡಿಗೆಗೆ ನೀಡಿ ಹೆಚ್ಚುವರಿ ಆದಾಯ ಗಳಿಸುತ್ತಾರೆ.

ನಗರ ಪ್ರದೇಶದಲ್ಲಿ ಕೂಡಾ ಇದೇ ರೀತಿ ಅಂಗಡಿ ಮಳಿಗೆಗಳನ್ನು ಕಟ್ಟಿರುವ ಅದೆಷ್ಟೋ ಮನೆಗಳನ್ನು ನೋಡಬಹುದು. ನಗರಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ರೋಲಿಂಗ್‌ ಷಟರ್ ಇರುವ ಮಳಿಗೆಗಳನ್ನು ನಿರ್ಮಿಸು­ತ್ತಾರೆ. ಕಾರು ಇದ್ದರೆ ನಿಲ್ಲಿಸೋಕೆ ಸುರಕ್ಷಿತ ಜಾಗ ಇರಲಿ ಎಂದೋ, ವೃತ್ತಿ ಕ್ಷೇತ್ರದಲ್ಲಿದ್ದವರಾದರೆ ತಮ್ಮದೇ ಕಚೇರಿ ತೆರೆಯಬಹುದು ಎಂದೋ ಲೆಕ್ಕಾಚಾರ ಹಾಕಿರುತ್ತಾರೆ. ಇನ್ನು ಮನೆಯಲ್ಲೇ ಇರುವ ಹಿರಿಯರು, ನಿವೃತ್ತ ನೌಕರರಿಗೆ ಸಮಯ ಕಳೆಯೋದಿಕ್ಕೆ ಆಗೋದಿಲ್ಲ. ಹೀಗಾಗಿಯೇ ಮನೆಗೇ ತಾಗಿ­ಕೊಂಡಂತಿರುವ ಮಳಿಗೆಯಲ್ಲಿ ಪುಟ್ಟ ಅಂಗಡಿ ಇಟ್ಟರೆ ಬೇಜಾರು ಕಳೆಯೋ­ದಲ್ಲದೆ, ಲಾಭವೂ ಆಗುತ್ತೆ ಅನ್ನೋ ಲೆಕ್ಕಾಚಾರ. ಮನೆಗೆ ಕಟ್ಟಲು ವೆಚ್ಚವಾಗುವ ದುಡ್ಡು ಈ ಅಂಗಡಿ ಮಳಿಗೆ ನಿರ್ಮಿಸಿದಾಗ ಬೇಗನೇ ವಾಪಸ್ ಬರುತ್ತದೆ.

ರಸ್ತೆ ಬದಿ ನಿವೇಶನವಿದ್ದಲ್ಲಿ ಮನೆ ಕಟ್ಟುವಾಗ ಸ್ವಲ್ಪ ಯೋಚಿಸಿ, ಯೋಜಿಸಿ ಕಟ್ಟಿದರೆ ಮನೆಯಲ್ಲಿರುವ ಒಬ್ಬರಿಗೆ ಅದು ಉದ್ಯೋಗಾವಕಾಶ ಕಲ್ಪಿಸಿ­ಕೊಡುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT