ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಚಾಲಕರೇ : ಸಂಚಾರ ನಿಯಮ ಉಲ್ಲಂಘಿಸದಿರಿ

Last Updated 6 ಆಗಸ್ಟ್ 2012, 9:05 IST
ಅಕ್ಷರ ಗಾತ್ರ

ಬೆಳಗಾವಿ: ವಾಹನ ಚಾಲಕರೇ ಹುಷಾರ್... ಸಂಚಾರ ಪೊಲೀಸರಿಲ್ಲ ಎಂದು ಟ್ರಾಫಿಕ್ ಸಿಗ್ನಲ್ ಉಲ್ಲಂಘನೆ ಮಾಡೀರಿ ಜೋಕೆ... ಸಂಚಾರ ನಿಯಮ ಉಲ್ಲಂಘಿಸೀರಿ... ಉಲ್ಲಂಘಿಸಿ ರಾಜಾ ರೋಷವಾಗಿ ಹೋದರೂ ದಂಡ ತುಂಬಲೇಬೇಕು. ಏಕೆಂದರೆ ಸಿಸಿ ಟಿವಿ ಕ್ಯಾಮೆರಾಗಳನ್ನು ಎಲ್ಲೆಡೆ ಅಳವಡಿಸ ಲಾಗಿದೆ.

ಪೊಲೀಸ್ ಸಿಬ್ಬಂದಿ ಕೊರತೆ ಎಲ್ಲ ನಗರಗಳಲ್ಲೂ ಇದೆ. ಆದರೆ ಇದನ್ನೆ ನೆಪ ಮಾಡಿಕೊಂಡು ಕಾನೂನು  ಸುವ್ಯವಸ್ಥೆ, ಸಂಚಾರ ವ್ಯವಸ್ಥೆಯನ್ನು ಸುಧಾರಿಸ ದಿದ್ದರೆ ಹೇಗೆ? ನಗರದಲ್ಲಿಯೂ ಪೊಲೀಸ್ ಸಿಬ್ಬಂದಿ ಕೊರತೆ ಇದೆ. ಇದನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾ ರಿಗಳು ಸಹ ಒಪ್ಪಿಕೊಳ್ಳುತ್ತಾರೆ, ಆದರೆ ಸಂಚಾರ ವ್ಯವಸ್ಥೆ ಸುಧಾರಣೆಗೆ ಅವರು ಆದ್ಯತೆ ನೀಡಿದ್ದಾರೆ.

ನಗರದ ಚನ್ನಮ್ಮ ವೃತ್ತ, ಗೋವಾ ವೇಸ್, ಆರ್‌ಪಿಡಿ ಕ್ರಾಸ್, ಕಪಿಲೇಶ್ವರ, ಡಿವಿಎಸ್ ಚೌಕ್, ಅಶೋಕ ವೃತ್ತ, ಗಾಂಧೀನಗರದ ಆಯ್ದ ಕಡೆಗಳಲ್ಲಿ 20 ಸಿಸಿ ಟಿವಿ ಕ್ಯಾಮರಾ ಅಳವಡಿಸ ಲಾಗಿದೆ. ಕಳೆದ ವರ್ಷದ ಸೆಪ್ಟಂಬರ್ ತಿಂಗಳಿನಲ್ಲಿಯೇ ಐದು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸ ಲಾಗಿತ್ತು. ಈಗ ಮತ್ತೆ 15 ಕ್ಯಾಮರಾಗಳನ್ನು ಪೊಲೀಸ್ ಇಲಾಖೆ ಅಳವಡಿಸಿದೆ.

`ಕಳೆದ ಸೆಪ್ಟೆಂಬರ್‌ನಿಂದ ಈವರೆಗೆ ಸಿಸಿ ಟಿವಿ ಕ್ಯಾಮೆರಾದ ಮೂಲಕ ಸಂಚಾರ ನಿಯಮ ಉಲ್ಲಂಘಿಸಿದ್ದರ ಕುರಿತು 18,800 ಪ್ರಕರಣಗಳನ್ನು ದಾಖಲಿಸಿ, 16 ಲಕ್ಷ ರೂಪಾಯಿ ದಂಡ ಸಂಗ್ರಹಿಸಲಾಗಿದೆ. ಈಗಾಗಲೇ ಕ್ಯಾಮರಾಗಳು ಕಾರ್ಯನಿರ್ವ ಹಿಸುತ್ತಿದ್ದು, ಕಂಟ್ರೋಲ್ ರೂಮಿ ನಿಂದಲೇ ಸಂಚಾರ ವ್ಯವಸ್ಥೆ ನಿಯಂತ್ರಿಸು ವಂತಾಗಿದೆ.

ನನ್ನ ಕೊಠಡಿಯಲ್ಲೂ ಟಿವಿ ಅಳವಡಿಕೆ ಮಾಡಲಾಗುತ್ತಿದ್ದು, ಅಲ್ಲಿಂದಲೇ ನಗರದ ಸಂಚಾರ ವ್ಯವಸ್ಥೆ ಪರಿಶೀಲಿಸಬಹುದು. ಸಂಚಾರಿ ನಿಯಮ ಉಲ್ಲಂಘಿಸಿದವರ ವಾಹನ ಸಂಖ್ಯೆಯನ್ನು ಸಹ ಟಿವಿ ಮೂಲಕ ಪಡೆದು, ಆ ಸ್ಥಳ ದಲ್ಲಿರುವ ಪೊಲೀಸ್ ಅಧಿಕಾರಿಗಳಿಗೆ ಈ ಕುರಿತು ಸೂಚಿಸಲಾಗುವುದು. ಅಧಿಕಾರಿ ಯು ತಕ್ಷಣವೇ ಆ ವಾಹನ ತಡೆದು ದಂಡ ಹಾಕುತ್ತಾರೆ~ ಎಂದು ಎಸ್‌ಪಿ ಸಂದೀಪ ಪಾಟೀಲ `ಪ್ರಜಾವಾಣಿ~ಗೆ ತಿಳಿಸಿದರು.

ಬ್ಲ್ಯಾಕ್ ಬೆರ‌್ರಿ: ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವ ವಾಹನಗಳ ಚಾಲಕರ ದಂಡ ವಿಧಿಸಲು ಪೊಲೀಸ್ ಇಲಾಖೆ ಬ್ಲ್ಯಾಕ್ ಬೆರ‌್ರಿ ಉಪಕರಣವನ್ನು ಸಮರ್ಪಕವಾಗಿ ನಗರದಲ್ಲಿ ಬಳಸುತ್ತಿದೆ. ಈಗಾಗಲೇ 7103 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, 12.36 ಲಕ್ಷ ರೂಪಾಯಿ ದಂಡ ಸಂಗ್ರಹಿಸಿದೆ.

ನಗರದಲ್ಲಿ 10 ಬ್ಲ್ಯಾಕ್ ಬೆರ‌್ರಿ ಉಪಕರಣಗಳನ್ನು ಬಳಸಲಾಗುತ್ತಿದೆ. ಕಳೆದ ಜೂನ್ ತಿಂಗಳಿನಿಂದ ಈ ಉಪ ಕರಣ ಬಳಕೆಯಲ್ಲಿದೆ. ಬ್ಲ್ಯಾಕ್ ಬೆರ‌್ರಿ ಉಪಕರಣವು ಕರ್ನಾಟಕ ಸ್ಟೇಟ್ ಪೊಲೀಸ್ ಎಂಬುವ ಸಾಫ್ಟವೇರ್ ಅಳ ವಡಿಸಿದ ಮೊಬೈಲ್ ಫೋನ್ ಮತ್ತು ಪ್ರಿಂಟರ್ ಒಳಗೊಂಡಿರುತ್ತದೆ. ಈ ಉಪ ಕರಣ ಸಂಚಾರ ನಿಯಮಗಳ ಉಲ್ಲಂಘನೆ ಯ ವಿವರ ಮತ್ತು ಅದಕ್ಕೆ ವಿಧಿಸುವ ಸ್ಥಳದಂಡದ ಬಗ್ಗೆ ಪೂರ್ಣ ಪ್ರಮಾಣದ ವಿವರವನ್ನು ಒಳಗೊಂಡಿ ರುತ್ತದೆ.

ಬ್ಲ್ಯಾಕ್ ಬೆರ‌್ರಿಯಲ್ಲಿ ಅಳವಡಿಸು ವಂತಹ ಮಾಹಿತಿಯು ರಾಜ್ಯಮಟ್ಟದಲ್ಲಿ ಅಳ ವಡಿಸಿರುವ ಸರ್ವರ್‌ಗೆ ಹೋಗು ತ್ತದೆ. ರಾಜ್ಯದ ಎಲ್ಲ ಭಾಗಗಳಲ್ಲಿನ ಮಾಹಿತಿ ಲಭಿಸುವಂತಹ ವ್ಯವಸ್ಥೆ ಮಾಡಲಾಗಿದೆ.

`ಬ್ಲ್ಯಾಕ್ ಬೆರ‌್ರಿ ಉಪಕರಣದ ಉಪ ಯೋಗದಿಂದ ಕಾಗದದ ಬಳಕೆ ಕಡಿಮೆ ಯಾಗಿದೆ. ಸಿಬ್ಬಂದಿಗೂ ಸಹ ಅನುಕೂಲ ವಾಗಿದ್ದು, ಇನ್ನೂ ಹೆಚ್ಚಿನ ಉಪಕರಣ ಗಳನ್ನು ಕಳುಹಿಸುವಂತೆ ಪ್ರಸ್ತಾವ ಸಲ್ಲಿಸಲಾಗಿದೆ~ ಎಂದು ಎಸ್‌ಪಿ ಸಂದೀಪ ಪಾಟೀಲ ಹೇಳಿದರು.


`ಸಂಚಾರ ನಿಯಮ ಉಲ್ಲಂಘಿಸಿ ಪಾರಾಗುವವರ ಬಗ್ಗೆ ಮಾಹಿತಿ ಪಡೆದು ವರ ಮನೆಗೆ ನೊಟೀಸು ಜಾರಿಗೊಳಿಸುವ ಕ್ರಮಕ್ಕೆ ಮುಂದಾಗಿದ್ದೇವೆ. ಬೆಂಗಳೂರಿ ನಂತೆ ಇಲ್ಲಿಯೂ ಸಹ ಈ ಯೋಜನೆ ಜಾರಿಗೆ ತರಲಾಗುತ್ತಿದ್ದು, ನೋಟೀಸು ನೀಡಿದ 7 ದಿನದೊಳಗೆ ದಂಡ ಪಾವತಿಸ ಬೇಕಾಗುತ್ತದೆ. ಸಂಚಾರ ನಿಯಮ ಉಲ್ಲಂಘಿಸಿದ ದಿನಾಂಕ, ಸಮಯ, ಸ್ಥಳವನ್ನು ನೊಟೀಸಿನಲ್ಲಿ ನಮೂದಿಸಿ ನೀಡಲಾಗುವುದು~ ಎಂದು ಸಂದೀಪ ತಿಳಿಸಿದರು.

ಬೆಳಗಾವಿಯಲ್ಲಿ ಸಂಚಾರ ವ್ಯವಸ್ಥೆ ನಿರ್ವಹಿಸುವುದು ದೊಡ್ಡ ಸವಾಲಿನ ಕೆಲಸ. ರಸ್ತೆಗಳು ಅಗಲವಿಲ್ಲ, ವಾಹನ ನಿಲುಗಡೆಗೆ ಸ್ಥಳಾವಕಾಶವಿಲ್ಲ. ಇಂಥ ಪರಿಸ್ಥಿತಿಯಲ್ಲೂ ಸುಧಾರಣೆಗೆ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ. ಸುಗಮ ಸಂಚಾರ ಕ್ಕೆ ಫ್ಲೈ ಓವರ್, ರಿಂಗ್ ರಸ್ತೆ ಅವಶ್ಯಕತೆ ಇದೆ. ಹಳೆಯ ಪುಣೆ- ಬೆಂಗಳೂರು ರಸ್ತೆ ಹಾಗೂ ಕಪಿಲೇಶ್ವರ ಹತ್ತಿರ ರೈಲ್ವೆ ಇಲಾಖೆ ಸೇತುವೆ ನಿರ್ಮಿಸಲಿದೆ.

ತರಕಾರಿ ಮಾರುಕಟ್ಟೆ ಯನ್ನು ಸ್ಥಳಾಂತ ರಿಸುವ ಅವಶ್ಯಕತೆ ಇದೆ. ವಾಹನ ನಿಲುಗಡೆಗೆ ಸ್ಥಳಾವಕಾಶ ನೀಡುವಂತೆ ಪಾಲಿಕೆ ಯವರನ್ನು ಕೇಳ ಲಾಗಿದೆ. ರಾಮದೇವ ಗಲ್ಲಿ, ಮಾರುತಿ ಗಲ್ಲಿ, ಕಾಕತಿ ವೇಸ್ ರಸ್ತೆಗಳ ಅಗಲೀಕ ರಣದ ಅವಶ್ಯಕತೆ ಇದೆ. ಈ ಎಲ್ಲ ಸಮಸ್ಯೆಗಳ ನಿವಾರಣೆ ಕುರಿತು ಪಾಲಿಕೆಗೆ ಪ್ರಸ್ತಾವ ಸಹ ನೀಡಲಾಗಿದೆ ಎನ್ನುತ್ತಾರೆ ಎಸ್‌ಪಿ ಸಂದೀಪ ಪಾಟೀಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT