ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಚಾಲನೆ ಸುರಕ್ಷಿತವಾಗಿರಲಿ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ವಾಹನ ಚಾಲನೆ ಮಾಡುವ ವೇಳೆ ಚಾಲಕರು ಜಾಗರೂಕರಾಗಿರಬೇಕು. ಚಾಲನೆ ವೇಳೆ ಒಂದು ಸಣ್ಣ ತಪ್ಪಿನಿಂದ ತಮ್ಮ ಜೀವವೇ ಹೋಗಬಹುದು ಅಥವಾ ಇನ್ನೊಬ್ಬರ ಪ್ರಾಣಕ್ಕೆ ಹಾನಿ ಉಂಟಾಗಬಹುದು ಎಂಬ ಅರಿವು ಚಾಲಕರಲ್ಲಿ ಇರಬೇಕು ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಬಿ.ಜಿ.ಜೆಟ್ಟಣ್ಣವರ್ ತಿಳಿಸಿದರು.

ಆಟೊರಿಕ್ಷಾ, ಮ್ಯಾಕ್ಸಿಕ್ಯಾಬ್ ವಾಹನ ಚಾಲಕರಿಗೆ ಕಾನೂನು ಅರಿವು ಮೂಡಿಸುವ ಉದ್ದೇಶದಿಂದ ನಗರದ ಸಿಟಿಜನ್ಸ್ ಕ್ಲಬ್‌ನಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

`ನಿರ್ಲಕ್ಷ್ಯ ಚಾಲನೆಯಿಂದ ಯಾರಿಗಾದರೂ ಅಪಾಯವಾಗದೆ ಇರುವುದಿಲ್ಲ.ವಾಹನ ಚಾಲನೆ ಎಂಬುದು ಗಂಭೀರವಾದದ್ದು ಎಂದು ಪರಿಗಣಿಸದೆ ಅದನ್ನು ಮೋಜು ಎಂದು ಭಾವಿಸಿದಾಗಲೇ ಅವಘಡಗಳು ಹೆಚ್ಚು ಸಂಭವಿಸುತ್ತವೆ. ಸುರಕ್ಷತೆಗೆ ಆದ್ಯತೆ ನೀಡಬೇಕು~ ಎಂದರು.

ಡಿವೈಎಸ್‌ಪಿ ಎಂ.ಎಸ್.ಕಾಖಂಡಕಿ, ಸರ್ಕಾರಿ ವಕೀಲ ಜಿ.ಆರ್.ಹರಿಕುಮಾರ್, ವಕೀಲರ ಸಂಘದ ಅಧ್ಯಕ್ಷ ಕೆ.ಎಚ್.ತಮ್ಮೇಗೌಡ, ಆಟೊರಿಕ್ಷಾ ಚಾಲಕರ ಸಂಘದ ಅಧ್ಯಕ್ಷ ಡಾಂಬು ಶ್ರೀನಿವಾಸ್, ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಮಹೇಶ್‌ಕುಮಾರ್, ಸಂಚಾರ ಠಾಣೆ ಎಸ್‌ಐ ನಯಾಜ್ ಬೇಗ್, ನಗರ ಠಾಣೆ ಎಸ್‌ಐ ವಸಂತ್ ಹಾಜರಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT