ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಹನ ಸಂಚಾರ: ಮಾರ್ಗ ಬದಲಾವಣೆ

Last Updated 19 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಮಡಿಕೇರಿ: ದಸರಾ ಉತ್ಸವದ ನಿಮಿತ್ತ ದಶಮಂಟಪಗಳ ಮೆರವಣಿಗೆಯು ಅ.24 ರಂದು ರಾತ್ರಿ ನಡೆಯಲಿದ್ದು, ಕಾನೂನು ಸುವ್ಯವಸ್ಥೆ ಕಾಪಾಡುವುದರ ಜೊತೆ ವಾಹನಗಳ ಸುಗಮ ಸಂಚಾರಕ್ಕೆ ಪೊಲೀಸ್ ಇಲಾಖೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ್ ಅಣ್ಣಿಗೇರಿ ತಿಳಿಸಿದ್ದಾರೆ.
ಚೆಕ್‌ಪೋಸ್ಟ್: ಮಂಗಳೂರು ರಸ್ತೆ ದೊಡ್ಡ ತಿರುವು, ಮೂರ್ನಾಡು ರಸ್ತೆ ಪಂಪ್‌ಹೌಸ್ ಬಳಿ, ಸಿದ್ದಾಪುರ ರಸ್ತೆ ಕೊಡಗು ವಿದ್ಯಾಲಯ ಶಾಲೆ ಜಂಕ್ಷನ್, ಮೈಸೂರು ರಸ್ತೆ ಸುಸ್ವಾಗತ ಕಮಾನು ಬಳಿ, ಸೋಮವಾರಪೇಟೆ ರಸ್ತೆ ಸಂಪಿಗೆ ಕಟ್ಟೆ, ಗಾಳಿಬೀಡು ರಸ್ತೆ ಐ.ಟಿ.ಐ, ಮೈತ್ರಿ ಜಂಕ್ಷನ್ ಸ್ಥಳಗಳಲ್ಲಿ ಪೊಲೀಸ್ ಚೆಕ್‌ಪೋಸ್ಟ್ ವ್ಯವಸ್ಥೆ ಮಾಡಲಾಗಿದೆ.

ವಾಹನ ನಿಲುಗಡೆ ಸ್ಥಳ: ಎಫ್.ಎಂ.ಸಿ. ಕಾಲೇಜು ಮೈದಾನ, ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನ, ಆರ್.ಎಂ.ಸಿ. ಯಾರ್ಡ್ ಮೈದಾನ (ದ್ವಿಚಕ್ರ ಮೋಟಾರು ಸೈಕಲ್ ಮಾತ್ರ), ಜೂನಿಯರ್ ಕಾಲೇಜು ಮೈದಾನ, ಮಂಗಳೂರು ರಸ್ತೆ ದೊಡ್ಡ ತಿರುವು, ಮೂರ್ನಾಡು ರಸ್ತೆ, ಪಂಪ್ ಹೌಸ್ ಬಳಿಯ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಮೈಸೂರು ರಸ್ತೆ ಕಡೆಯಿಂದ ಬರುವ ವಾಹನಗಳು ಸಂಪಿಗೆ ಕಟ್ಟೆ ಕಡೆಯಿಂದ ಎ.ವಿ.ಸ್ಕೂಲ್, ಮುತ್ತಪ್ಪ ದೇವಸ್ಥಾನ ಮುಂದೆ ಸೆಂಟ್ ಜೋಸೆಫ್ ಕಾನ್ವೆಂಟ್, ಎಸ್.ಪಿ.ಆಫೀಸ್ ಜಂಕ್ಷನ್, ಮುಂದೆ ಐ.ಟಿ.ಐ. ಜಂಕ್ಷನ್ ಕಡೆಯಿಂದ              ಎಫ್.ಎಂ.ಸಿ ಕಾಲೇಜು ಮೈದಾನಕ್ಕೆ ಬಂದು ವಾಹನ ನಿಲುಗಡೆಗೊಳಿಸುವುದು.
ಸಿದ್ದಾಪುರ, ಮೂರ್ನಾಡು ಮತ್ತು ಮಂಗಳೂರು ರಸ್ತೆ ಕಡೆಗಳಿಂದ ಬರುವ ವಾಹನಗಳಿಗೆ ಆರ್.ಎಂ.ಸಿ ಯಾರ್ಡ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಗಾಳಿಬೀಡು, ಅಬ್ಬಿಪಾಲ್ಸ್, ಸೋಮವಾರಪೇಟೆ ಹಾಗೂ ಕಾಲೂರು ಕಡೆಗಳಿಂದ ಬರುವ ವಾಹನಗಳಿಗೆ   ಎಫ್.ಎಂ.ಸಿ. ಕಾಲೇಜು ಮೈದಾನ ಮತ್ತು ಸೆಂಟ್ ಜೋಸೆಫ್ ಕಾನ್ವೆಂಟ್ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ಮೈಸೂರು, ಸಿದ್ದಾಪುರ, ಮಂಗಳೂರು ಕಡೆಯಿಂದ ಬರುವ ದ್ವಿಚಕ್ರ ವಾಹನಗಳ ನಿಲುಗಡೆಗೆ ಮೈಸೂರು ರಸ್ತೆಯ ಈಸ್ಟ್ ಎಂಡ್ ಹೋಟೆಲ್‌ನ ಮುಂಭಾಗದಲ್ಲಿರುವ ಶಾಂತಿ ಚರ್ಚ್ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ.

ವಿರಾಜಪೇಟೆ ಕಡೆಯಿಂದ ಬರುವ ವಾಹನ ನಿಲುಗಡೆಗೆ ಮೂರ್ನಾಡು ರಸ್ತೆಯ ಸರ್ಕಾರಿ ಆಸ್ಪತ್ರೆಯ ಪಂಪ್ ಹೌಸ್ ಬಳಿ ಚಿಕ್ಕ ಮೈದಾನದಲ್ಲಿ ಮತ್ತು ರಸ್ತೆಯ ಒಂದು ಬದಿಯಲ್ಲಿ ನಿಲುಗಡೆ ವ್ಯವಸ್ಥೆ ಮಾಡಲಾಗಿದೆ.
ಸಾರ್ವಜನಿಕರು ವಾಹನ ನಿಲುಗಡೆ ಮಾಡಿದ ಸ್ಥಳದಲ್ಲೇ ವಾಹನಗಳನ್ನು ನಿಲುಗಡೆಗೊಳಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸುವಂತೆ ಅವರು ಮನವಿ ಮಾಡಿದ್ದಾರೆ.

ಏಕಮುಖ ಸಂಚಾರ: ಮೈಸೂರು, ಸೋಮವಾರಪೇಟೆ ಕಡೆಗಳಿಂದ ಬರುವ ವಾಹನಗಳು ಚೈನ್‌ಗೇಟಿನಿಂದ ಜೂನಿಯರ್ ಕಾಲೇಜು ಮೈದಾನಕ್ಕೆ ಪ್ರವೇಶಿಸುವ ದಾರಿಯಲ್ಲಿ ತಾತ್ಕಾಲಿಕ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಜೂನಿಯರ್ ಕಾಲೇಜು ಮೈದಾನದಲ್ಲಿ ನಿಲುಗಡೆಗೊಳಿಸಿದ ವಾಹನಗಳು ವಾಪಾಸು ಮೈಸೂರು ರಸ್ತೆಗೆ ಹೋಗುವಾಗ ಗೌಡ ಸಮಾಜ, ರಾಘವೇಂದ್ರ ದೇವಸ್ಥಾನ ಕಡೆಯಿಂದ ಚೈನ್‌ಗೇಟಿಗಾಗಿ ಹೋಗುವಂತೆಯು ಏಕಮುಖ ಸಂಚಾರ ರಸ್ತೆಯಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ.

ವಾಹನ ಸಂಚಾರ ಮತ್ತು ನಿಲುಗಡೆ ನಿಷೇಧ: ಜಿ.ಟಿ. ವೃತ್ತದಿಂದ                ಕೆ.ಎಸ್.ಆರ್.ಟಿ.ಸಿ. ಡಿಪೋವರೆಗೆ ರಸ್ತೆಯ ಉಭಯ ಕಡೆಗಳಲ್ಲಿ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಅ.24 ಹಾಗೂ ಅ.25 ರಂದು ಕುಂದುರುಮೊಟ್ಟೆ ದೇವಸ್ಥಾನದಿಂದ ಗಾಂಧೀ ಮಂಟಪ- ಎಂ.ಎಂ. ವೃತ್ತದವರೆಗೂ, ಜಿ.ಟಿ. ವೃತ್ತದಿಂದ ಖಾಸಗಿ ಬಸ್ಸು ನಿಲ್ದಾಣ, ಇಂದಿರಾ ವೃತ್ತ, ಕಾಲೇಜು ರಸ್ತೆ, ಎಸ್.ಬಿ.ಐ. ಜಂಕ್ಷನ್, ಗಣಪತಿ ಬೀದಿ, ಮಹದೇವಪೇಟೆ ಎಲ್ಲಾ ರಸ್ತೆಗಳಲ್ಲಿ ವಾಹನ ಸಂಚಾರ ಹಾಗೂ ನಿಲುಗಡೆಯನ್ನು ನಿಷೇಧಿಸಿದೆ.

ಮಂಗಳೂರು ಕಡೆಯಿಂದ ಮೈಸೂರು ಕಡೆಗೆ ಮತ್ತು ಮೈಸೂರು ಕಡೆಯಿಂದ ಮಂಗಳೂರು ಕಡೆಗೆ ಜಿ.ಟಿ.ವೃತ್ತದ ಮುಖಾಂತರ ಎಲ್ಲಾ ವಾಹನಗಳಿಗೆ ಸಂಚಾರ ವ್ಯವಸ್ಥೆ ಮಾಮೂಲಿನಂತಿರುತ್ತದೆ.  ಜಿ.ಟಿ. ವೃತ್ತದ ಬಳಿ ಬರುವ ಎಲ್ಲಾ ಮಂಟಪಗಳು ಜಿ.ಟಿ. ವೃತ್ತದ ಬಳಿ ಇರುವ ಪೆಟ್ರೋಲ್ ಬಂಕ್ ಬಳಿಯಿಂದ ತಿರುಗಿ ಹೋಗವುದು.ಅ.24 ರಂದು ಸಂಜೆ. 4 ಗಂಟೆಯ ನಂತರ ಮಡಿಕೇರಿ ನಗರದೊಳಗೆ ಜನ ಸಂದಣಿ ಅಧಿಕವಾಗುವುದರಿಂದ ಯಾವುದೇ ವಾಹನಗಳಿಗೆ ನಗರದೊಳಗೆ ಪ್ರವೇಶ ನಿರ್ಬಂಧಿಸಲಾಗಿದೆ ಮತ್ತು ಮಂಟಪಗಳು ದೇವಸ್ಥಾನ ತಲುಪುವವರೆಗೆ ವಾಹನ ಸಂಚಾರವನ್ನು ನಿಷೇಧಿಸಿದೆ.

ಅ.24 ರ ಸಂಜೆ 4 ಗಂಟೆಯಿಂದ ಅ.25 ರ ಬೆಳಗ್ಗೆ 10 ಗಂಟೆಯವರೆಗೆ ಅಬ್ಬಿಫಾಲ್ಸ್ ಮತ್ತು ಗಾಲ್ಫ್ ಮೈದಾನಕ್ಕೆ ಪ್ರವಾಸಿಗರ ಭೇಟಿ ಹಾಗೂ ವಾಹನ ಸಂಚಾರವನ್ನು ನಿಷೇಧಿಸಿದೆ.

ಮಂಗಳೂರು ರಸ್ತೆಯ ದೊಡ್ಡ ತಿರುವಿನ ಕೆಳಗಡೆಗೆ ರಸ್ತೆಯ ಬದಿಗಳಲ್ಲಿ ಲಘು ವಾಹನಗಳ ನಿಲುಗಡೆಯನ್ನು ನಿಷೇಧಿಸಲಾಗಿದೆ.

ದಸರಾ ವೀಕ್ಷಿಸಣೆಗೆ ತೆರಳುವ ಸಾರ್ವಜನಿಕರು ತಮ್ಮ ಮನೆಯ ಸುರಕ್ಷತೆ ಬಗ್ಗೆ ಎಚ್ಚರ ವಹಿಸುವುದು. ಅಲ್ಲದೆ ಮನೆಯಲ್ಲಿ ಯಾರಾದರೂ ಇರುವಂತೆ ವ್ಯವಸ್ಥೆ ಮಾಡಿಕೊಳ್ಳುವುದು.ಸಾರ್ವಜನಿಕರು ತಮ್ಮ ವಾಹನಗಳನ್ನು ಪೊಲೀಸ್ ಇಲಾಖೆ ವತಿಯಿಂದ ನಿಲುಗಡೆಗೆ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿಯೇ ನಿಲುಗಡೆಗೊಳಿಸುವುದು.

ಯಾವುದೇ ಅಪರಿಚಿತ ವಸ್ತುಗಳು (ಟಿಫನ್ ಬಾಕ್ಸ್, ರೇಡಿಯೋ, ಅನಾಥ ಪೆಟ್ಟಿಗೆ, ಬ್ಯಾಗು ಮುಂತಾದ ಸಂಶಯಾಸ್ಪದ ವಸ್ತುಗಳು) ಕಂಡುಬಂದಲ್ಲಿ ಸಾರ್ವಜನಿಕರು ಕೂಡಲೇ ಪೊಲೀಸ್ ನಿಯಂತ್ರಣ ಕೊಠಡಿ ದೂರವಾಣಿ ಸಂಖ್ಯೆ 100, 228330 ಹಾಗೂ ಮಡಿಕೇರಿ ನಗರ ಠಾಣೆ ದೂರವಾಣಿ ಸಂಖ್ಯೆ 229333, ವೃತ್ತ ನಿರೀಕ್ಷಕರ ಕಚೇರಿ ದೂರವಾಣಿ ಸಂಖ್ಯೆ 229146, ಸಂಚಾರಿ ನಿಯಂತ್ರಣ ಠಾಣೆ 220081 ಗೆ ಮಾಹಿತಿ ನೀಡಲು ಕೋರಿದೆ.ದಸರಾ ಜನೋತ್ಸವ ಕಾರ್ಯಕ್ರಮದ ಸಂಬಂಧ ಮಡಿಕೇರಿ ನಗರದ ಮಹದೇವಪೇಟೆ ಮತ್ತು ಗಣಪತಿ ಬೀದಿ ನಿವಾಸಿಗಳು ಅ.24 ರಂದು ಮಧ್ಯಾಹ್ನ 2 ಗಂಟೆಯಿಂದ ಅ.25 ರಂದು ಸಂಜೆ. 6 ಗಂಟೆಯವರೆಗೆ ತಮ್ಮ ವಾಹನಗಳನ್ನು ಮಹದೇವಪೇಟೆಯಲ್ಲಿರುವ ಎಲ್.ಜಿ.ಕ್ರಸೆಂಟ್ ಶಾಲೆಯ ಆವರಣ ಮತ್ತು ಕನಕದಾಸ ರಸ್ತೆಯ ನಗರಸಭೆ ಹಿಂದೂಸ್ಥಾನಿ ಶಾಲೆಯ ಆವರಣದಲ್ಲಿ ನಿಲುಗಡೆ ಮಾಡಲು ಸೂಚಿಸಿದೆ.

ಅ.24 ರಂದು ಸಂಜೆ 4 ಗಂಟೆಯ ನಂತರ ವಾಹನಗಳಲ್ಲಿ ಮಡಿಕೇರಿ ನಗರಕ್ಕೆ ಆಗಮಿಸುವ ಸ್ಥಳೀಯ ನಾಗರಿಕರು ಹಾಗೂ ಹೋಂ ಸ್ಟೆ, ಲಾಡ್ಜ್ ಅಥವಾ ರೆಸಾರ್ಟ್‌ಗಳಲ್ಲಿ ಉಳಿದುಕೊಳ್ಳಲು ಆಗಮಿಸುವ ಪ್ರವಾಸಿಗರು ಸಂಪಿಗೆಕಟ್ಟೆ, ಗದ್ದುಗೆ, ಮುತ್ತಪ್ಪ ದೇವಸ್ಥಾನ ರಸ್ತೆ, ಕಾನ್ವೆಂಟ್ ಜಂಕ್ಷನ್, ಎಫ್.ಎಂ.ಸಿ. ಕಾಲೇಜು ಮಾರ್ಗವಾಗಿ ತೆರಳುವಂತೆ ಅವರು ಕೋರಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT