ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಡೀಸ್ ಸುಲಭ ಗೆಲುವಿನ ಕನಸಿಗೆ ಐರ್ಲೆಂಡ್ ತೊಡಕು?

Last Updated 10 ಮಾರ್ಚ್ 2011, 18:30 IST
ಅಕ್ಷರ ಗಾತ್ರ

ಮೊಹಾಲಿ (ಪಿಟಿಐ): ವೆಸ್ಟ್ ಇಂಡೀಸ್ ತಂಡದವರು ಸುಲಭ ಗೆಲುವು ಪಡೆಯುವ ಕನಸು ಕಂಡಿದ್ದಾರೆ. ಆದರೆ ಅದನ್ನು ಭಂಗಗೊಳಿಸುವ ಉತ್ಸಾಹ ಹಾಗೂ ಸಾಮರ್ಥ್ಯ ತಮ್ಮಲ್ಲಿದೆ ಎಂದು ಐರ್ಲೆಂಡ್ ವಿಶ್ವಾಸದಿಂದ ಹೋರಾಟಕ್ಕೆ ಸಜ್ಜಾಗಿದೆ.

ಪಂಜಾಬ್ ಕ್ರಿಕೆಟ್ ಸಂಸ್ಥೆ (ಪಿಸಿಎ) ಕ್ರೀಡಾಂಗಣದಲ್ಲಿ ಶುಕ್ರವಾರ ನಡೆಯಲಿರುವ ವಿಶ್ವಕಪ್ ‘ಬಿ’ ಗುಂಪಿನ ಲೀಗ್ ಪಂದ್ಯದಲ್ಲಿ ವಿಂಡೀಸ್‌ಗೆ ಸುಲಭದ ತುತ್ತಾಗುವುದಿಲ್ಲವೆಂದು ಐರ್ಲೆಂಡ್ ತಂಡದ ನಾಯಕ ವಿಲಿಯಮ್ ಪೋರ್ಟರ್‌ಫೀಲ್ಡ್ ಹೇಳಿದ್ದಾರೆ.ಇಂಗ್ಲೆಂಡ್‌ಗೆ ಆಘಾತ ನೀಡಿ, ಭಾರತಕ್ಕೆ ಸುಲಭವಾಗಿ ಶರಣಾಗದ ಹಾಗೆ ಆಡಿದ್ದನ್ನೇ ಅವರು ಭರವಸೆ ಹೆಚ್ಚಿಸುವ ಅಮೃತವಾಗಿಸಿಕೊಂಡಿದ್ದಾರೆ.

ಆದರೆ ಪ್ರತಿ ದಿನವೂ ದೀಪಾವಳಿ ಅಲ್ಲ ಎನ್ನುವುದನ್ನು ಐರ್ಲೆಂಡ್‌ಗೆ ಅರಿವುಮಾಡಿಕೊಡುವುದು ವಿಂಡೀಸ್ ನಾಯಕ ಡೇರನ್ ಸ್ಯಾಮಿ ಉದ್ದೇಶ. ಬಾಂಗ್ಲಾದಲ್ಲಿ ತಮ್ಮ ಬಸ್‌ನತ್ತ ಬೀಸಿಬಂದ ಕಲ್ಲುಗಳಿಂದಾಗಿ ಕಹಿ ನೆನಪು ಪಡೆದ ಸ್ಯಾಮಿ ಅವರು ಭಾರತದಲ್ಲಿ ಉತ್ತಮ ವಾತಾವರಣದ ನಡುವೆ ಆಡುವ ಅವಕಾಶ ಸಿಗುತ್ತದೆ ಎಂದುಕೊಂಡಿದ್ದಾರೆ. ಐರ್ಲೆಂಡ್ ಕೂಡ ಲೀಗ್‌ನಲ್ಲಿ ಈವರೆಗೆ ಉತ್ತಮ ್ರದರ್ಶನ ನೀಡಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಅದನ್ನು ದುರ್ಬಲವೆಂದು ಪರಿಗಣಿಸಿಲ್ಲ.

ವೆಸ್ಟ್ ಇಂಡೀಸ್
ಡೇರನ್ ಸ್ಯಾಮಿ (ನಾಯಕ). ಆ್ಯಡ್ರಿನ್ ಭರತ್, ಕಾರ್ಲಟನ್ ಬಗ್, ಸುಲೇಮಾನ್ ಬೆನ್, ಡೇರನ್ ಬ್ರೇವೊ, ಡ್ವೇನ್ ಬ್ರೇವೊ, ಶಿವನಾರಾಯಣ್ ಚಂದ್ರಪಾಲ್, ಕ್ರಿಸ್ ಗೇಲ್, ನಿಕಿಟಾ ಮಿಲ್ಲರ್, ಕೀರೊನ್ ಪೊಲಾರ್ಡ್, ರವಿ ರಾಮ್‌ಪಾಲ್, ಕೆಮಾರ್ ರಾಚ್, ಆ್ಯಂಡ್ರೆ ರಸಲ್, ರಾಮನರೇಶ್ ಸರವಣ್ ಮತ್ತು ಡೆವೊನ್ ಸ್ಮಿತ್. 

ಐರ್ಲೆಂಡ್
ವಿಲಿಯಮ್ ಪೋರ್ಟರ್‌ಫೀಲ್ಡ್ (ನಾಯಕ), ಆ್ಯಂಡ್ರೆ ಬೊಥಾ, ಅಲೆಕ್ಸ್ ಕ್ಯೂಸೆಕ್, ನೀಲ್ ಓಬ್ರಿಯನ್, ಕೆವಿನ್ ಓಬ್ರಿಯನ್, ಜಾರ್ಜ್ ಡಾಕ್ರೆಲ್, ಟ್ರೆಂಟ್ ಜಾನ್‌ಸ್ಟನ್, ನಿಗೆಲ್ ಜೋನ್ಸ್, ಜಾನ್ ಮೂನಿ, ಬಾಯ್ಡ್ ರಂಕಿನ್, ಪಾಲ್ ಸ್ಟಿರ್ಲಿಂಗ್, ಅಲ್ಬರ್ಟ್ ವಾನ್ ಡೇರ್ ಮೆರ್ವ್, ಗ್ಯಾರಿ ವಿಲ್ಸನ್, ಆ್ಯಂಡ್ರ್ಯೂ ವೈಟ್ ಮತ್ತು ಎಡ್ ಜಾಯ್ಸಾ.

ಅಂಪೈರ್‌ಗಳು: ಅಶೋಕ್ ಡಿಸಿಲ್ವಾ (ಶ್ರೀಲಂಕಾ) ಮತ್ತು ಶಾವೀರ್ ತಾರಾಪುರ (ಭಾರತ); ಮೂರನೇ ಅಂಪೈರ್: ಬ್ರೂಸ್ ಆಕ್ಸೆನ್‌ಫೋರ್ಡ್ (ಆಸ್ಟ್ರೇಲಿಯಾ).
ಮ್ಯಾಚ್ ರೆಫರಿ: ರೋಶನ್ ಮಹನಾಮಾ (ಶ್ರೀಲಂಕಾ).
ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ ಮಧ್ಯಾಹ್ನ 1.00; 1.45ರಿಂದ ಪಂದ್ಯ ಮುಗಿಯುವವರೆಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT