ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್: ನಾಲ್ಕನೇ ಸುತ್ತು ಪ್ರವೇಶಿಸಿದ ಆ್ಯಂಡಿ ಮರ್ರೆ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ರಾಯಿಟರ್ಸ್): ಅತ್ಯಾಕರ್ಷಕ ಪ್ರದರ್ಶನ ಮುಂದುವರಿಸಿರುವ ಇಂಗ್ಲೆಂಡ್‌ನ ಆ್ಯಂಡಿ ಮರ್ರೆ ಇಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನಿಸ್ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದ ಸಿಂಗಲ್ಸ್‌ನಲ್ಲಿ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ಆಲ್ ಇಂಗ್ಲೆಂಡ್ ಕ್ಲಬ್‌ನ ಸೆಂಟರ್ ಕೋರ್ಟ್‌ನಲ್ಲಿ ನಡೆದ ಪಂದ್ಯದಲ್ಲಿ ಮರ್ರೆ 7-5, 3-6, 7-5, 6-1ರಲ್ಲಿ ಸೈಪ್ರಸ್ ಮಾರ್ಕಸ್ ಬಗ್ಡಾಟಿಸ್ ಅವರನ್ನು ಪರಾಭವಗೊಳಿಸಿದರು.

ನಾಲ್ಕನೇ ಶ್ರೇಯಾಂಕದ ಆಟಗಾರನಿಗೆ ಈ ಪಂದ್ಯದಲ್ಲಿ ಕಠಿಣ ಪೈಪೋಟಿ ಎದುರಾಯಿತು. ಶ್ರೇಯಾಂಕ ರಹಿತ ಆಟಗಾರ ಬಗ್ಡಾಟಿಸ್ ಎರಡನೇ ಸೆಟ್ ಗೆದ್ದು ಆತಿಥೇಯ ಆಟಗಾರನಿಗೆ ತಿರುಗೇಟು ನೀಡಿದರು. ಆದರೆ ಮೂರು ಹಾಗೂ ನಾಲ್ಕನೇ ಸೆಟ್‌ನಲ್ಲಿ ಮರ್ರೆ ಅವರ ಬಿರುಸಿನ ಸರ್ವ್‌ಗಳಿಗೆ ದಿಟ್ಟ ಉತ್ತರ ನೀಡಲು ಸೈಪ್ರಸ್‌ನ ಆಟಗಾರನಿಗೆ ಸಾಧ್ಯವಾಗಲಿಲ್ಲ. ಮರ‌್ರೆ 10 ಏಸ್ ಸಿಡಿಸಿದರು.

ಸ್ಥಳೀಯ ಆಟಗಾರ ಮರ‌್ರೆಗೆ ಅದ್ಭುತ ಬೆಂಬಲ ಲಭಿಸಿತು. ಅವರು ಇಲ್ಲಿಯೇ 2004, 2005 ಹಾಗೂ 2009ರ ಫೈನಲ್‌ನಲ್ಲಿ ಸ್ವಿಟ್ಜರ್ಲೆಂಡ್‌ನ ರೋಜರ್ ಫೆಡರರ್ ವಿರುದ್ಧ ಸೋಲು ಕಂಡಿದ್ದರು. ಈ ಬಾರಿಯ ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಮರ‌್ರೆ ಸೋಮವಾರ ಕ್ರೊವೇಷಿಯದ ಮರಿನ್ ಸಿಲಿಕ್ ಅವರ ಸವಾಲನ್ನು ಎದುರಿಸಬೇಕಾಗಿದೆ.

ಸಿಲಿಕ್ ಮೂರನೇ ಸುತ್ತಿನ ಪಂದ್ಯದಲ್ಲಿ 7-6, 6-4, 6-7, 6-7, 17-15ರಲ್ಲಿ ಅಮೆರಿಕದ ಸ್ಯಾಮ್ ಕ್ವಾರಿ ಎದುರು ಗೆದ್ದು ನಾಲ್ಕನೇ ಸುತ್ತಿನಲ್ಲಿ ಆಡಲು ಅರ್ಹತೆ ಪಡೆದಿದ್ದರು. ಮರ‌್ರೆ ಅವರನ್ನು ಸೋಲಿಸುವ ವಿಶ್ವಾಸವನ್ನು ಸಿಲಿಕ್ ವ್ಯಕ್ತಪಡಿಸಿದ್ದಾರೆ.

ರಾಡಿಕ್‌ಗೆ ಆಘಾತ: ಸ್ಪೇನ್‌ನ ಡೇವಿಡ್ ಫೆರೆರ್ ಅವರು ಮೂರು ಬಾರಿಯ ರನ್ನರ್ ಅಪ್ ಅಮೆರಿಕದ ಆ್ಯಂಡಿ ರಾಡಿಕ್‌ಗೆ ಆಘಾತ ನೀಡಿದರು. ಮೂರನೇ ಸುತ್ತಿನ ಪಂದ್ಯದಲ್ಲಿ ಫೆರೆರ್ 2-6, 7-6, 6-4, 6-3ರಲ್ಲಿ 30ನೇ ಶ್ರೇಯಾಂಕದ ರಾಡಿಕ್ ಅವರನ್ನು ಮಣಿಸಿದರು. ಮೊದಲ ಸೆಟ್‌ನಲ್ಲಿ ಸೋಲುಕಂಡ ಸ್ಪೇನ್‌ನ ಆಟಗಾರ ಬಳಿಕ ಅದ್ಭುತವಾಗಿ ತಿರುಗೇಟು ನೀಡಿದರು. ಆದರೆ ಫೆರೆರ್‌ಗೆ ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಕಠಿಣ ಎದುರಾಳಿ ಇದ್ದಾರೆ.

2009ರ ಅಮೆರಿಕ ಓಪನ್ ಚಾಂಪಿಯನ್ ಜುವಾನ್ ಮಾರ್ಟಿನ್ ಡೆಲ್ ಪೊಟ್ರೊ ಅವರನ್ನು ಎದುರಿಸಬೇಕಾಗಿದೆ.
ಕಳೆದ ಬಾರಿ ಕ್ವಾರ್ಟರ್ ಫೈನಲ್ ತಲುಪಿದ್ದ ಅಮೆರಿಕದ ಮಾರ್ಡಿ ಫಿಷ್ ಮೂರನೇ ಸುತ್ತಿನ ಮತ್ತೊಂದು ಪಂದ್ಯದಲ್ಲಿ 6-3, 7-6, 7-6ರಲ್ಲಿ ಬೆಲ್ಜಿಂನ ಡೇವಿಡ್ ಗೊಫಿನ್ ಅವರನ್ನು ಪರಾಭವಗೊಳಿಸಿದರು.

ಹೃದಯ ಶಸ್ತ್ರ ಚಿಕಿತ್ಸೆ ಬಳಿಕ ಅವರು ಆಡುತ್ತಿರುವ ಮೊದಲ ಗ್ರ್ಯಾನ್‌ಸ್ಲಾಮ್ ಟೂರ್ನಿ ಇದಾಗಿದೆ. ಮುಂದಿನ ಪಂದ್ಯದಲ್ಲಿ ಅವರು    ಐದನೇ ಶ್ರೇಯಾಂಕದ ಜೋ ವಿಲ್ಫ್ರೆಡ್ ಸೊಂಗಾ ಅವರ ಸವಾಲು ಎದುರಿಸಲಿದ್ದಾರೆ. ಸೊಂಗಾ 2011ರಲ್ಲಿ ಸೆಮಿಫೈನಲ್‌ನಲ್ಲಿ ತಲುಪಿದ್ದರು.

ಅರ್ಹತಾ ಹಂತದಲ್ಲಿ ಗೆದ್ದು ಬಂದಿರುವ ಅಮೆರಿಕದ ಬ್ರಯಾನ್ ಬೇಕರ್ 6-4, 4-6, 6-1, 6-3ರಲ್ಲಿ ಫ್ರಾನ್ಸ್‌ನ ಬೆನೊಯಿಟ್ ಪೇರ್ ಎದುರು ಗ್ದ್ದೆದು ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

 ಹರ್ನಿಯಾ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಈ ಆಟಗಾರ ಆರು ವರ್ಷ ತಮ್ಮ ಟೆನಿಸ್ ಜೀವನವನ್ನು ಹಾಳು ಮಾಡಿಕೊಂಡಿದ್ದರು. ಅವರು ನಾಲ್ಕನೇ ಸುತ್ತಿನ ಪಂದ್ಯದಲ್ಲಿ ಜರ್ಮನಿಯ ಫಿಲಿಪ್ ಕೊಹ್ಲಶ್ರೆಬರ್ ಅವರನ್ನು ಎದುರಿಸಲಿದ್ದಾರೆ.

ಮಹಿಳೆಯರ ವಿಭಾಗದ ಸಿಂಗಲ್ಸ್‌ನಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ 6-7, 6-2, 9-2ರಲ್ಲಿ ಚೀನಾದ ಜೀ ಜೆಂಗ್ ಅವರನ್ನು ಸೋಲಿಸಿ ನಾಲ್ಕನೇ ಸುತ್ತು ಪ್ರವೇಶಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT