ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಕಿಲೀಕ್ಸ್ ವೆಬ್‌ಸೈಟ್ ತಾತ್ಕಾಲಿಕ ಮೌನ!

Last Updated 24 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ):  ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿ ಇಡೀ ಜಗತ್ತಿನಾದ್ಯಂತ ಭಾರಿ ಸಂಚಲನ ಉಂಟು ಮಾಡಿದ್ದ ವಿಕಿಲೀಕ್ಸ್ ವೆಬ್‌ಸೈಟ್ ಇದೀಗ ತಾನು ತಾತ್ಕಾಲಿಕವಾಗಿ ಕಾರ್ಯಸ್ಥಗಿತಗೊಳಿಸುವುದಾಗಿ ಪ್ರಕಟಿಸಿದೆ.

ತನ್ನ ಈ ಕ್ರಮಕ್ಕೆ ಆರ್ಥಿಕ ಕಂಪೆನಿಗಳನ್ನು ಹೊಣೆಯನ್ನಾಗಿಸಿರುವ ವಿಕಿಲೀಕ್ಸ್, `ವೀಸಾ, ಮಾಸ್ಟರ್‌ಕಾರ್ಡ್, ವೆಸ್ಟರ್ನ್ ಯೂನಿಯನ್  ಹಾಗೂ ಪೇಪಾಲ್‌ನಂಥ ಕಂಪೆನಿಗಳು ವಿಧಿಸಿರುವ ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಡುವುದಾಗಿಯೂ ಅದು ಹೇಳಿಕೊಂಡಿದೆ.

ಆರ್ಥಿಕ ದಿಗ್ಬಂಧನದ ವಿರುದ್ಧ ಹೋರಾಡುವುದಾಗಿ ವಿಕಿಲೀಕ್ಸ್ ಸಂಸ್ಥಾಪಕ ಜುಲಿಯನ್ ಅಸಾಂಜ್  ಸೋಮವಾರ  ಹೇಳಿದ್ದಾರೆ. ಕಳೆದ ವರ್ಷ ಅಮೆರಿಕ ವಿದೇಶಾಂಗ ಇಲಾಖೆಯ ಸುಮಾರು  250,000 ದಾಖಲೆಗಳನ್ನು ಪ್ರಕಟಿಸುವ ಮೂಲಕ ವಿಕಿಲೀಕ್ಸ್ ಭಾರಿ ಸುದ್ದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT