ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಚಾರಣೆ ಕೈಬಿಡಲು ಒಪ್ಪದ ಕೋರ್ಟ್

ಮುಷರಫ್ ವಿರುದ್ಧ ರಾಷ್ಟ್ರದ್ರೋಹ ಆರೋಪ
Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್‌ ಮುಷರಫ್‌ ಅವರು ತಮ್ಮ ವಿರುದ್ಧದ ವಿಚಾರಣೆಗಾಗಿ ವಿಶೇಷ ನ್ಯಾಯಾಲಯ ಸ್ಥಾಪಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಆಕ್ಷೇಪಣೆ­ಗಳನ್ನು ಕೋರ್ಟ್‌್ ತಿರಸ್ಕರಿಸಿದೆ.

ಹೀಗಾಗಿ ರಾಷ್ಟ್ರದ್ರೋಹದ ಆರೋಪದ ವಿಚಾರ­ಣೆ­ಯಿಂದ ಹೊರಬರಲು ಮುಷರಫ್‌ ನಡೆಸುತ್ತಿ­ರುವ ಪ್ರಯತ್ನಕ್ಕೆ ಹಿನ್ನ­ಡೆಯಾಗಿದೆ. ತಮ್ಮ ಮೇಲಿನ ಆರೋಪಗಳಿಗಾಗಿ ವಿಶೇಷ ನ್ಯಾಯಾ­­ಲಯ ಸ್ಥಾಪಿಸಿರುವುದು, ನ್ಯಾಯ­ಮೂ­ರ್ತಿ­ಗಳ ನೇಮ­­ಕಾತಿ ಹಾಗೂ  ಸರ್ಕಾರಿ ವಕೀಲರ ನೇಮಕಾತಿ ಬಗ್ಗೆ ಆಕ್ಷೇಪ ವ್ಯಕ್ತ­ಪಡಿಸಿ ಮುಷರಫ್‌ ಮೂರು ಅರ್ಜಿಗಳನ್ನು ಸಲ್ಲಿ­ಸಿದ್ದರು. ಇಸ್ಲಾಮಾಬಾದ್‌ ಹೈಕೋರ್ಟ್‌ ನ್ಯಾಯ­ಮೂರ್ತಿ ರಿಯಾಜ್‌ ಅಹಮ್ಮದ್‌ ಖಾನ್‌ ಈ ಅರ್ಜಿಗಳನ್ನು ವಜಾಗೊಳಿಸಿದರು.

ಇದೇ ಮೊದಲು: ಇದೇ ವೇಳೆ ನ್ಯಾಯಾಲಯವು ಮುಷರಫ್‌ ಅವರಿಗೆ, ೨೦೦೭ರಲ್ಲಿ ತುರ್ತು ಪರಿಸ್ಥಿತಿ ಹೇರಿ ರಾಷ್ಟ್ರದ್ರೋಹ ಎಸಗಿದ ಆರೋಪಕ್ಕೆ ಸಂಬಂಧಿ­ಸಿದ ವಿಚಾರಣೆಗಾಗಿ ಮಂಗಳ­ವಾರ ಕೋರ್ಟ್‌ಗೆ ಖುದ್ದು ಹಾಜರಾಗಲು ಸಮನ್‌್ಸ ನೀಡಿದೆ. ರಾಷ್ಟ್ರದಲ್ಲಿ ಮಾಜಿ ಸೇನಾ ಸರ್ವಾಧಿಕಾರಿ­ಯೊಬ್ಬರು ರಾಷ್ಟ್ರ­ದ್ರೋಹದ ಆರೋಪಕ್ಕಾಗಿ ವಿಚಾ­ರಣೆಗೆ ಗುರಿಯಾ­ಗಿ­ರು­ವುದು ಇದೇ ಮೊದ­ಲಾಗಿದೆ. ಒಂದೊಮ್ಮೆ  ಮುಷರಫ್‌ ಅಪ­ರಾಧಿ ಎಂಬ ತೀರ್ಪು ಹೊರಬಿದ್ದಲ್ಲಿ ಅವರು ಜೀವಾವಧಿ ಶಿಕ್ಷೆ ಅಥ­ವ ಮರಣ ದಂಡನೆ ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ.

ಮುಷರಫ್‌ ಅವರು ತುರ್ತು ಪರಿಸ್ಥಿತಿ ವಿಧಿಸಿದ್ದು ಸೇನಾ ಮುಖ್ಯ­­ಸ್ಥರಾಗಿ ಅಧಿಕಾರದಲ್ಲಿದ್ದಾಗ, ಹೀಗಾಗಿ ಸೇನಾ ನ್ಯಾಯಾ­­ಲಯ ಮಾತ್ರ ಈ ಕುರಿತು ವಿಚಾರಣೆ ನಡೆಸಬ­ಹುದು ಎಂದು ಮುಷರಫ್‌ ಪರ ವಕೀಲರು ವಾದ ಮಂಡಿ­ಸಿ­ದರು. ಈ ವಿಚಾರಣೆಗೆ ಸಂಬಂಧಿಸಿದಂತೆ ಸರ್ಕಾರಿ ವಕೀಲ­ರಾಗಿ ನೇಮಕಗೊಂಡಿರುವ ಅಕ್ರಮ ಶೇಖ್‌ ಅವರು ಬಲ­ಪಂಥೀಯ ಪಕ್ಷಗಳೊಡನೆ ಸಂಪರ್ಕ ಹೊಂದಿದವ­ರಾಗಿದ್ದಾರೆ; ಅಲ್ಲದೇ, ಅವರು ಮುಷರಫ್‌ ಅವರ ಕಟುಟೀಕಾಕಾರರು ಆಗಿದ್ದಾರೆ. ಇಂಥವರನ್ನು ಪ್ರಾಸಿಕ್ಯೂಟರ್‌ ಆಗಿ ನೇಮಿಸಿರು­ವುದು ಸರಿಯಲ್ಲ ಎಂದರು. ಆದರೆ ನ್ಯಾಯಮೂರ್ತಿಯವರು ಈ ವಾದವನ್ನು ಪುರಸ್ಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT