ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರಕ್ಕೆ ಬ್ರಿಟನ್ ಬಂಡವಾಳ: ಅಧ್ಯಯನ

ಬ್ರಿಟನ್‌ ಡೆಪ್ಯುಟಿ ಹೈಕಮಿಷನರ್ ಭೇಟಿ
Last Updated 25 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ವಿಜಾಪುರ: ಜಿಲ್ಲೆಯಲ್ಲಿ ಉದ್ದಿಮೆ–ವ್ಯಾಪಾರ ಆರಂಭಿಸುವ ಕುರಿತು ಬ್ರಿಟನ್‌ ಡೆಪ್ಯುಟಿ ಹೈಕಮಿಷನರ್‌ ಇಯಾನ್‌ ಫೆಲ್ಟನ್‌ ಮಂಗಳವಾರ ನಗರದಲ್ಲಿ ಅಧ್ಯಯನ ನಡೆಸಿದರು.

ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರ ಮನೆಗೆ ಭೇಟಿ ನೀಡಿದ ಇಯಾನ್‌ ಈ ಸಂಬಂಧ ಚರ್ಚಿಸಿದರು.
‘ಕರ್ನಾಟಕದಲ್ಲಿ ಅದರಲ್ಲೂ ವಿಶೇಷ ವಾಗಿ ವಿಜಾಪುರ ಮತ್ತು ಸುತ್ತಲ ಜಿಲ್ಲೆ ಗಳಲ್ಲಿ ಉದ್ದಿಮೆ, ವ್ಯಾಪಾರ ಆರಂಭಿಸಲು ಬ್ರಿಟನ್ ವ್ಯಾಪಾರ ಒಕ್ಕೂಟ ಆಸಕ್ತಿ ಹೊಂದಿದೆ. ಪೂರ್ವಭಾವಿಯಾಗಿ ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿ ತದ ಮುಖ್ಯಸ್ಥರನ್ನು ಭೇಟಿ ಮಾಡಿ ಚರ್ಚಿಸುತ್ತಿದ್ದೇನೆ. ವಾಪಾರೋದ್ಯಮಕ್ಕೆ ಈ ಭಾಗದಲ್ಲಿ ಉತ್ತಮ ಅವಕಾಶಗಳಿವೆ’ ಎಂದರು.

‘ಕೂಡಗಿಯಲ್ಲಿ ಉಷ್ಣವಿದ್ಯುತ್ ಘಟಕ ಸ್ಥಾಪನೆಯಾಗುತ್ತಿದ್ದು, ಕೆೈಗಾರಿಕಾ ಕ್ಷೇತ್ರ ಅಭಿವೃದ್ಧಿಗೆ ಪೂರಕವಾಗಿದೆ. ಕೃಷ್ಣಾ ನದಿ ನೀರಿನಲ್ಲಿ  ಹೆಚ್ಚಿನ ಪಾಲು ಜಿಲ್ಲೆಗೆ ದೊರೆ ಯಲಿದೆ. ನೀರಾವರಿ ಯೋಜನೆಗಳ ಅನು ಷ್ಠಾನದಿಂದ ಮುಂಬರುವ ದಿನಗಳಲ್ಲಿ ಜಿಲ್ಲೆ ಕೃಷಿ ಕ್ಷೇತ್ರದಲ್ಲೂ ಪ್ರಗತಿ ಸಾಧಿಸ ಲಿದೆ’ ಎಂದು ಸಚಿವ ಪಾಟೀಲ ಮಾಹಿತಿ ನೀಡಿದರು.

‘ಅತಿ ಹೆಚ್ಚು ಸಂರಕ್ಷಿತ ಸ್ಮಾರಕಗಳು ಈ ಭಾಗದಲ್ಲಿರುವುದರಿಂದ ವಿಜಾಪುರ, ಆಲಮಟ್ಟಿ, ಕೂಡಲಸಂಗಮ, ಪಟ್ಟದ ಕಲ್ಲು, ಬಾದಾಮಿ ಪ್ರವಾಸಿ ತಾಣವಾ ಗಿಯೂ ಅಭಿವೃದ್ಧಿಪಡಿಸಬಹುದು’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT