ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರಕ್ಕೆ ಹಾನಿ ಇಲ್ಲ

Last Updated 13 ಅಕ್ಟೋಬರ್ 2011, 6:15 IST
ಅಕ್ಷರ ಗಾತ್ರ

ವಿಜಾಪುರ: `ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಕಾನೂನಿನಿಂದ ವಿಜಾಪುರ ನಗರದ ಜನತೆಗೆ ಯಾವುದೇ ಬಗೆಯ ಹಾನಿ ಇಲ್ಲ. ಈ ಕಾನೂನಿನಿಂದ ವಿಜಾಪುರಕ್ಕೆ ವಿನಾಯಿತಿ ನೀಡುವುದೂ ಬೇಡ. ಕೆಲ ಮಾರ್ಪಾಡು ತಂದು ಈ ಕಾನೂನು ಮುಂದವರೆಸಬೇಕು~ ಎಂದು ವಿಜಾಪುರ ನಗರ ರಕ್ಷಣಾ ವೇದಿಕೆಯ ಅಧ್ಯಕ್ಷ ವಿಶ್ವನಾಥ ಭಾವಿ ಹೇಳಿದರು.

ಈ ಕಾನೂನಿನ ಬಗ್ಗೆ ಪರ-ವಿರೋಧ ಹೇಳಿಕೆಗಳನ್ನು ನೀಡಲಾಗುತ್ತಿದೆ. ಈ ಬಗ್ಗೆ ತಾವು ಪ್ರಾಚ್ಯವಸ್ತುಗಳ ಸಂರಕ್ಷಣಾ ಇಲಾಖೆಯ ಅಧಿಕಾರಿಗಳು ಹಾಗೂ ಇಲಾಖೆಯ ಕಾನೂನು ಸಲಹೆಗಾರ ಎಸ್.ಎಸ್. ಮಠ ಅವರೊಂದಿಗೆ ಚರ್ಚಿಸಿದ್ದು, ಕಾಯ್ದೆಯಲ್ಲಿ ಯಾವುದೇ ಅಪಾಯಕಾರಿ ಅಂಶ ಇಲ್ಲ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

`ಈ ಕಾಯ್ದೆ ಜಾರಿಯಾದರೆ ನಮ್ಮ ಯಾವುದೇ ಆಸ್ತಿ ಹೋಗುವುದಿಲ್ಲ. ಯಾವ ಆಸ್ತಿಯನ್ನೂ ತೆರವುಗೊಳಿಸಬೇಕಿಲ್ಲ. ಸರಾಫ್ ಮಾರುಕಟ್ಟೆಯಿಂದ ಗಾಂಧಿ ಚೌಕ್ ವರೆಗಿನ ಅಂಗಡಿಗಳನ್ನು ತೆರವುಗೊಳಿಸಲಾಗುತ್ತದೆ ಎಂದು ವರ್ತಕರು ಆತಂಕಗೊಂಡಿದ್ದಾರೆ. ಅಂಥ ಯಾವುದೇ ತೆರವು ಕಾರ್ಯಾಚರಣೆ ನಡೆಯುವುದಿಲ್ಲ~ ಎಂದರು.

ಸಂರಕ್ಷಿತ ಸ್ಮಾರಕಗಳಿಂದ 100 ಮೀಟರ್ ನಿಷೇಧಿತ ಸ್ಥಳವೆಂದು ಘೋಷಿಸಲಾಗಿದೆ. ನಿಷೇಧಿತ ಪ್ರದೇಶದಲ್ಲಿಯ ಈಗಿರುವ ಯಾವುದೇ ಖಾಸಗಿ ಕಟ್ಟಡಗಳನ್ನು ತೆರವುಗೊಳಿಸುವಂತೆ ಕಾಯ್ದೆಯಲ್ಲಿ ಆದೇಶವಿಲ್ಲ. ಆದರೆ, ಈ 100 ಮೀಟರ್ ಸ್ಥಳದಲ್ಲಿ ಯಾವುದೇ ಹೊಸ ಕಟ್ಟಡ ಕಟ್ಟಲು ಮತ್ತು ರಿಪೇರಿಗೆ ಅನುಮತಿ ಇಲ್ಲ ಎಂದು ಹೇಳಿದರು.
ಈ ಕಾಯ್ದೆಯ ಪ್ರತಿಯನ್ನು ಕನ್ನಡದಲ್ಲಿ ಮುದ್ರಿಸಿ ವಿತರಿಸಬೇಕು ಎಂದು ಅವರು ಇಲಾಖೆಯವರನ್ನು ಒತ್ತಾಯಿಸಿದರು.

ವಿಜಾಪುರದಲ್ಲಿ ಇಂದು

ಕಾರ್ಯಾಗಾರ: ಬಿಎಲ್‌ಡಿಇ ಸಂಸ್ಥೆಯ ಡಿ.ಇಡಿ. ಕಾಲೇಜಿನಲ್ಲಿ ಶೈಕ್ಷಣಿಕ ಮನೋವಿಜ್ಞಾನದ ಪ್ರಯೋಗಗಳು ಮತ್ತು ಪರೀಕ್ಷೆಗಳ ಒಂದು ದಿನದ ಕಾರ್ಯಾಗಾರ.

ಉದ್ಘಾಟನೆ-ಎಸ್.ಎಚ್. ಲಗಳಿ, ಅತಿಥಿ-ಸಿ.ವಿ. ಹಿರೇಮಠ, ಸಾಯಿರಾಬಾನು ಖಾನ್, ಉಪನ್ಯಾಸ- ಡಾ.ಜಗದೀಶ ಬಿ., ಡಾ.ಎ.ವಿ. ಬಮಗೊಂಡ. ಅಧ್ಯಕ್ಷತೆ-ಕೆ.ಜಿ. ಜೀರಗಾಳಿ.
ಬೆಳಗ್ಗೆ 9.15ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT