ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರದಲ್ಲಿ 47 ಮಿ.ಮೀ. ಮಳೆ

Last Updated 20 ಸೆಪ್ಟೆಂಬರ್ 2013, 5:56 IST
ಅಕ್ಷರ ಗಾತ್ರ

ವಿಜಾಪುರ: ಗುರುವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 12 ಗಂಟೆಗಳ ಅವಧಿ­ಯಲ್ಲಿ ವಿಜಾಪುರ ನಗರದಲ್ಲಿ ದಾಖಲೆಯ 46.8 ಮಿಲಿ ಮೀಟರ್‌ ಮಳೆಯಾಗಿದೆ. ಪ್ರಸಕ್ತ ಮಳೆಗಾಲದ ಅವಧಿಯಲ್ಲಿ ಸುರಿದ ಅತ್ಯಧಿಕ ಪ್ರಮಾಣದ ಮಳೆ ಇದಾಗಿದೆ.

ಇಂಡಿ ತಾಲ್ಲೂಕಿನ ಅಗರಖೇಡದಲ್ಲಿ ಅತ್ಯಧಿಕ 64.1 ಮಿ.ಮೀಟರ್‌ ಮಳೆ­ಯಾಗಿದ್ದರೆ, ಹಲಸಂಗಿಯಲ್ಲಿ 45 , ಭೂತನಾಳದಲ್ಲಿ 36.4, ಕುಮಠಗಿ­ಯಲ್ಲಿ 45.8 ಮಿ.ಮೀ. ಮಳೆಯಾಗಿದೆ.

ವಿಜಾಪುರ ನಗರದಲ್ಲಿ ರಾತ್ರಿ ಇಡೀ ಸುರಿದ ಮಳೆಯಿಂದ ಹಳೆಯ ಮನೆಗಳು ಸೋರಲಾರಂಭಿಸಿದರೆ, ರಸ್ತೆಗಳ ಸ್ಥಿತಿಯಂತೂ ಅಯೋಮಯ­ವಾಗಿದೆ. ಯಾವುದೇ ರಸ್ತೆಯಲ್ಲಿ ಸಂಚ­ರಿಸಿದರೂ ರಾಡಿ ನೀರಿನ  ಸಿಂಚನ­ವಾಗುತ್ತಿದೆ. ನಗರದ ಕೊಳೆಗೇರಿಗಳಲ್ಲಿ ನೀರು ನುಗ್ಗಿದ್ದರಿಂದ ಅಲ್ಲಿಯ ಜನ ಪರದಾಡಿದರು. ಇಲ್ಲಿಯ ಸೋಲಾಪುರ ರಸ್ತೆಯ ಕೆ.ಸಿ. ನಗರದ ತಗ್ಗು ಪ್ರದೇಶದ ಮನೆ ಗಳಿಗೆ ನೀರು ನುಗ್ಗಿದ್ದು, ಕೆಲ ಮನೆಗಳ ಆವರಣದಲ್ಲಿ ಮೊಣಕಾಲುದ್ದ ನೀರು ನಿಂತಿದೆ.

ನೀರು ಮುಂದೆ ಸಾಗಲು ಚರಂಡಿ ವ್ಯವಸ್ಥೆ ಇಲ್ಲದಿರು­ವುದು ಇದಕ್ಕೆ ಕಾರಣ. ನಗರಸಭೆಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾ ಗಿಲ್ಲ ಎಂದು ಅಲ್ಲಿಯ ನಿವಾಸಿಗಳು ದೂರಿದರು.

ಬುಧವಾರ ರಾತ್ರಿಯಿಂದ ಗುರುವಾರ ಬೆಳಗಿನ 8 ಗಂಟೆಯ ಅವಧಿಯಲ್ಲಿ ಜಿಲ್ಲೆಯಲ್ಲಿ ಸುರಿದ ಮಳೆಯ ವಿವರ (ಮಿ.ಮೀ.ಗಳಲ್ಲಿ): ವಿಜಾಪುರ ನಗರ–46.8, ನಾಗಠಾಣ–21, ಭೂತ ನಾಳ–36.4, ಹಿಟ್ನಳ್ಳಿ–12.4, ತಿಕೋಟಾ–13.8 ಮಮದಾಪುರ–7, ಕುಮಠಗಿ–45.8, ಕನ್ನೂರ–8.6, ಬಬಲೇಶ್ವರ –17,

ಬಸವನ ಬಾಗೇವಾಡಿ –7, ಮನಗೂಳಿ –21, ಆಲಮಟ್ಟಿ –0.2, ಹೂವಿನ ಹಿಪ್ಪರಗಿ –3.2, ಆರೇಶಂಕರ–17.6, ಮಟ್ಟಿಹಾಳ–15.
ಇಂಡಿ–29.2, ನಾದ ಬಿ.ಕೆ.–14.2, ಅಗರಖೇಡ –64.1, ಹೊರ್ತಿ –4.2, ಹಲಸಂಗಿ–45, ಚಡಚಣ –17.2, ಝಳಗಿ–33.5.ಮುದ್ದೇಬಿಹಾಳ –9, ನಾಲತವಾಡ ಮಳೆ ಆಗಿಲ್ಲ, ತಾಳಿ ಕೋಟಿ –11.3, ಢವಳಗಿ –12.2,
ಸಿಂದಗಿ –13, ಆಲಮೇಲ –23.5, ಸಾಸಾಬಾಳ –15, ರಾಮನಳ್ಳಿ –11.4, ಕಡ್ಲೇವಾಡ –4.1, ದೇವರ ಹಿಪ್ಪರಗಿ –22.2, ಕೊಂಡಗೂಳಿ –12.1.

ಸರಾಸರಿ ಮಳೆಯ ವಿವರ: ವಿಜಾಪುರ ಜಿಲ್ಲೆ 17.2 ಮಿ.ಮೀ., ಬಸವನ ಬಾಗೇವಾಡಿ ತಾಲ್ಲೂಕು 10.7 ಮಿ.ಮೀ., ವಿಜಾಪುರ ತಾಲ್ಲೂಕು–23 ಮಿ.ಮೀ., ಇಂಡಿ ತಾಲ್ಲೂಕು 29.6 ಮಿ.ಮೀ. ಮುದ್ದೇಬಿಹಾಳ ತಾಲ್ಲೂಕು 8.1 ಮಿ.ಮೀ., ಸಿಂದಗಿ ತಾಲ್ಲೂಕು 14.5 ಮಿ.ಮೀ.
ಆಲಮಟ್ಟಿ: ಆಲಮಟ್ಟಿ ಜಲಾಶಯಕ್ಕೆ 60,235 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, 51,435 ಕ್ಯೂಸೆಕ್ ನೀರು ಹೊರ ಬಿಡಲಾಗುತ್ತಿದೆ. ಜಲಾಶಯದ ಮಟ್ಟ 519.55 ಮೀಟರ್ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT