ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಾಪುರದಲ್ಲಿ ಒಣಭೂಮಿ ಅಭಿವೃದ್ಧಿ ಸಂಸ್ಥೆ

Last Updated 1 ಮೇ 2012, 5:45 IST
ಅಕ್ಷರ ಗಾತ್ರ

ಆಲಮಟ್ಟಿ: ಕೃಷ್ಣಾ ನದಿ ತೀರದ ಈ ಭಾಗದಲ್ಲಿ ಈಗ ಆಗಿರುವ ನೀರಾವರಿ ಸೌಲಭ್ಯಗಳನ್ನು ಸದುಪಯೋಗಪಡಿಸಿ ಕೊಂಡು ಈ ಭಾಗದ ರೈತರು ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುವ ನಿಟ್ಟಿನಲ್ಲಿ ವಿಜಾಪುರದಲ್ಲಿ `ಇನ್‌ಸ್ಟಿಟ್ಯೂಟ್ ಆಫ್ ಡ್ರೈ ಲ್ಯಾಂಡ್~ ಸ್ಥಾಪಿಸಲಾಗುವುದು ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯ  ಕುಲಪತಿ ಡಾ. ಆರ್.ಆರ್. ಹಂಚಿನಾಳ ಹೇಳಿದರು.

ಕಮದಾಳ ಮುದ್ದೇಶಪ್ರಭು ದೇವಸ್ಥಾನದ ಬಳಿ ಭಾನುವಾರ ನಡೆದ ಕಬ್ಬು ಬೆಳೆಗಳ ಮತ್ತು ಹೈನುಗಾರಿಕೆ ವಿಚಾರ ಸಂಕಿರಣ ಮತ್ತು ಕೃಷಿ ಉಪಕರಣಗಳ ಪ್ರದರ್ಶನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರಕಾರ ಇದೇ ಪ್ರಥಮಬಾರಿಗೆ ಕೃಷಿ ವಿ.ವಿಗೆ  ರೂ.50 ಕೋಟಿ ವಿಶೇಷ ಅನುದಾನ ನೀಡಿದ್ದು, ಆ ಅನುದಾನದಡಿ ಇದನ್ನು ಸ್ಥಾಪಿಸಿ, ಅದರ ಮೂಲಕ ಕೃಷಿಯಲ್ಲಿ ಆದ ಸಂಶೋಧನೆಗಳನ್ನು ರೈತರಿಗೆ ತಲುಪಿಸುವ ಕಾರ್ಯ ಮಾಡಲಾ ಗುವುದು ಎಂದರು.

ಕೃಷಿ ಉಪಕರಣಗಳ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಎಸ್.ಆರ್. ಪಾಟೀಲ ಮಾತನಾಡಿ, ಕೃಷಿ ಕಠಿಣವಾದ ಕೆಲಸವಾಗಿದ್ದು, ಅದನ್ನು ಬುದ್ಧಿವಂತರೇ ಹೆಚ್ಚಾಗಿ ಮಾಡಬೇಕಿದೆ, ರೈತರು ಸಾಂಪ್ರದಾಯಿಕ ಕೃಷಿ ಪದ್ಧತಿಯೊಂದಿಗೆ ಆಧುನಿಕ ಕೃಷಿ ವಿಧಾನಗಳನ್ನು ತಮ್ಮ ಹೊಲಗಳಲ್ಲಿ ಅಳವಡಿಸಿಕೊಂಡು ಕೃಷಿಯನ್ನು ಮಾಡಬೇಕಿದೆ ಎಂದರು. ರೈತರು ಸಾವಯವ ಗೊಬ್ಬರ ಮತ್ತು ರಾಸಾಯನಿಕ ಗೊಬ್ಬರ ಬಳಕೆಯ ಬಗ್ಗೆ ತೀವ್ರ ಗೊಂದಲದಲ್ಲಿದ್ದಾರೆ ಎಂದರು.

ಪ್ರಗತಿಪರ ರೈತ ಬಾಗಲಕೋಟೆ ಜಿಲ್ಲೆ ದೇವಲಾಪೂರ ಗ್ರಾಮದ ಬಸಪ್ಪ ರುದ್ರಪ್ಪ ಕುರಿ ಹಾಗೂ ಹೇಮರೆಡ್ಡಿ ಮೇಟಿ  ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯ ಮೇಲೆ ಪಂಚಪ್ಪ ಕಲಬುರ್ಗಿ, ಸಂಕೇತ ಬಗಲಿ, ಜಯರಾಮ ಗೊಳ್ಳಾಜಿ, ಎಂ.ಕೆ. ಮಾಮನಿ, ರಾಮನಗೌಡ ಪಾಟೀಲ, ಮಂಜುನಾಥ, ಅಪ್ಪಾಸಾಹೇಬ ಯರನಾಳ  ಇದ್ದರು.

ಶಾಸಕ ಎಸ್.ಕೆ. ಬೆಳ್ಳುಬ್ಬಿ, ಮಾಜಿ ಶಾಸಕ ಶಿವಾನಂದ ಪಾಟೀಲ, ಜಿಪಂ ಸದಸ್ಯ ಶಿವಾನಂದ ಅವಟಿ, ಎಂ.ಎಸ್. ಪಾಟೀಲ ಮೊದಲಾದವರು ಉದ್ಘಾಟನೆ ಕಾರ್ಯಕ್ರಮದ ನಂತರ ನಡೆದ ಗೋಷ್ಠಿಯಲ್ಲಿ  ಮಾತನಾಡಿದರು.

ಪ್ರಾರಂಭದಲ್ಲಿ ರೈತ ಮುಖಂಡ ಬಸವರಾಜ ಕುಂಬಾರ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು. ಚಂದ್ರಶೇಖರ ನುಗ್ಲಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

ಮಧ್ಯಾಹ್ನ ಭಾರತೀಯ ಕೃಷಿ ಪದ್ಧತಿ ಬಗ್ಗೆ ಜಯರಾಜ ಗೊಳ್ಳಾಜಿ, ಕಬ್ಬು ಬೆಳೆಗಳ ಕುರಿತು ಡಾ. ಎನ್.ಎಸ್. ಕಂಬಾರ, ಡಾ. ಸಂಜಯ ಪಾಟೀಲ,ಡಾ. ಬಿ.ಪಿ. ನಾಡಗೌಡ ಉಪನ್ಯಾಸ ನೀಡಿದರು. ಹೈನುಗಾರಿಕೆಯ ಕುರಿತು ಎಸ್.ಎನ್. ಪಟ್ಟಣಶೆಟ್ಟಿ, ಅರವಿಂದ ಕುಂಬಾರ ಮಾತನಾಡಿದರು.

ಕಬ್ಬು ಬೆಳೆಗೆ ಮಾತ್ರವೇ ಒತ್ತು
ನಿಡಗುಂದಿ ಸುತ್ತಮುತ್ತಲಿನ ನೂರಕ್ಕೂ ಹೆಚ್ಚು ರೈತರು ಪಾಲ್ಗೊಂಡಿ ದ್ದರು. ಆದರೇ ಕೃಷಿ ಉಪಕರಣ ಪ್ರದರ್ಶನದಲ್ಲಿ ಯಾವುದೇ ಕೃಷಿ ಉಪಕರಣಗಳ  ಪ್ರದರ್ಶ ವಾಗದಿರುವುದು, ಕೇವಲ ಕಬ್ಬು ಬೆಳೆಗೆ ಮಾತ್ರ ವಿಶೇಷ ಒತ್ತು ನೀಡಿದ್ದು ರೈತರಿಗೆ ಬೇಸರ ಮೂಡಿಸಿತು.  ಉದ್ಘಾಟನೆ ಕಾರ್ಯಕ್ರಮಕ್ಕೆ 100 ರಷ್ಟಿದ್ದ  ರೈತರು, ಮಹತ್ವದ ಕಬ್ಬು ಬೆಳೆ ಮತ್ತು ಹೈನುಗಾರಿಕೆಯ ಬಗ್ಗೆ ನಡೆದ ವಿಚಾರಗೋಷ್ಠಿಯಲ್ಲಿ ಬೆರೆಳೆಣಿಕೆಯ ಜನ ಮಾತ್ರವೇ ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT