ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಕುರುವತ್ತಿ ರಥೋತ್ಸವ

Last Updated 22 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಹೂವಿನ ಹಡಗಲಿ: ತಾಲ್ಲೂಕಿನ ಕುರುವತ್ತಿ ಗ್ರಾಮದಲ್ಲಿ ಬಸವೇಶ್ವರನ ಜಾತ್ರಾ ಮಹೋತ್ಸವವು ಮಂಗಳವಾರ ಸಂಜೆ ಅಪಾರ ಭಕ್ತ ಸಮೂಹದ ನಡುವೆ ವಿಜೃಂಭಣೆಯಿಂದ ಜರುಗಿತು.

ರಥೋತ್ಸವಕ್ಕೂ ಮುನ್ನ ಬೆಳಿಗ್ಗೆಯಿಂದಲೇ ರಾಜ್ಯದ ಅನೇಕ ಭಾಗಗಳಿಂದ ಭಕ್ತಾದಿಗಳು ತಮ್ಮ ಇಷ್ಟಾರ್ಥ ದೇವರಾದ ಬಸವಣ್ಣನಿಗೆ ಮತ್ತು ಮಲ್ಲಿಕಾರ್ಜುನ ದೇವರುಗಳಿಗೆ ಹಣ್ಣು-ಕಾಯಿ, ಹೂವುಗಳ ಅರ್ಚನೆಯನ್ನು ಮಾಡಿಸುತ್ತಿದ್ದರು. ಮಂಗಳಾರತಿ, ಅಭಿಷೇಕಗಳು ಸಂಪ್ರದಾಯಬದ್ಧವಾಗಿ ನಡೆಯುತ್ತಿದ್ದವು. ಇನ್ನೂ ಹಲವು ಭಕ್ತರು ಹುಟ್ಟಿದ ಕಂದಮ್ಮಗಳಿಗೆ ಸಕಲ ಮಂಗಳವಾದ್ಯಗಳೊಂದಿಗೆ ಸನ್ನಿಧಿಗೆ ಬಂದು ಜವುಳ ತೆಗೆಸಿ ಒಳಿತಾಗಲೆಂದು ಹೆತ್ತವರು ಮತ್ತು ಹಿರಿಯರು ಪ್ರಾರ್ಥಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಸಂಜೆಯ ರಥೋತ್ಸವದ ಸಮಯದಲ್ಲಿ ಲಕ್ಷಕ್ಕೂ ಹೆಚ್ಚು ಜನರು ರಥೋತ್ಸವದಲ್ಲಿ ವಿನೀತ ಭಾವದಿಂದ ಭಾಗವಹಿಸಿ ತಮ್ಮ ಭಕ್ತಿ- ಭಾವವನ್ನು ಅರ್ಪಿಸಿದರು. ರಥೋತ್ಸವವು ಸಾಗುತ್ತಿದ್ದಂತೆ ನೆರೆದಿದ್ದ ಭಾರೀ ಪ್ರಮಾಣದ ಭಕ್ತರು ಬಾಳೆಹಣ್ಣು, ಉತ್ತತ್ತಿ ರಥಕ್ಕೆ ಎಸೆದು ಕೈ ಮುಗಿಯುತ್ತಿದ್ದರು.

ಗಂಭೀರವಾಗಿ ಸಕಲ ಸಂಪ್ರದಾಯ ಬದ್ಧವಾಗಿ ಸಾಗುತ್ತಿದ್ದ ರಥೊತ್ಸವವನ್ನು ನೋಡಲು ಭಕ್ತರು ಮನೆ-ಮಾಳಿಗೆಗಳನ್ನೇರಿ, ಎತ್ತರದ ಪ್ರದೇಶದಲ್ಲಿ ನಿಂತುಕೊಂಡು ರಥೋತ್ಸವವನ್ನು ವೀಕ್ಷಿಸುತ್ತಿದ್ದರು.

ರಥೋತ್ಸವಕ್ಕೆ ದ್ವಿಚಕ್ರವಾಹನ, ಬಂಡಿ- ಗಾಡಿಗಳು ಜಾತ್ರೆಯ ದಿನ  ಜನರನ್ನು ಬರಮಾಡಿಕೊಳ್ಳಲು ಕುರುವತ್ತಿಯ ಜನರು ಊರಿನ ಗುಡಿ ಗುಂಡಾರ, ಮನೆ ಮಾರುಗಳನ್ನು ಬಣ್ಣ-ಬಣ್ಣಗಳಿಂದ ಶುಚಿಗೊಳಿಸಿ, ಅಂಗಳವನ್ನು ರಂಗೋಲಿಯ ಎಳೆಗಳಿಂದ ಸಿಂಗರಿಸಿ, ತಳಿರು ತೋರಣಗಳಿಂದ ಅಲಂಕರಿಸಿದ್ದ ದೃಶ್ಯ ಗೋಚರಿಸುತಿತ್ತು.
ಊರ ಬಾಗಿಲು ತೆಂಗಿನಗರಿ ಮತ್ತು ಮಾವಿನಗರಿಯ ತಳಿರು- ತೋರಣಗಳಿಂದ, ಬರುವ ಮಲ್ಲಿಕಾರ್ಜುನ ಮತ್ತು ಬಸವಣ್ಣ ಭಕ್ತಾದಿಗಳಿಗೆ ಸ್ವಾಗತ ಕೋರಲು ಸಿಂಗಾರವಾಗಿದ್ದವು. ತಾಲ್ಲೂಕಿನ ಅನೇಕ ಜನ ಬಂದ ಅನೇಕ ಜನರು ಜಾತ್ರೆಯಲ್ಲಿ ಭಾಗವಹಿಸ್ದಿದರು.

ದಾವಣಗೆರೆ, ಬಳ್ಳಾರಿ, ಹರಪನಹಳ್ಳಿ, ಹೂವಿನ ಹಡಗಲಿ, ಹೊಳಲು, ಹಿರೇಹಡಗಲಿ, ಧಾರವಾಡ, ಹಾವೇರಿ, ರಾಣೆಬೆನ್ನೂರು, ಚಿಕ್ಕಕುರುವತ್ತಿ, ಗುತ್ತಲ, ಹೊನ್ನತ್ತಿ, ಚಂದ್ರಾಪುರ, ಚೌಡಯ್ಯ ದಾನಪುರ, ಮೈಲಾರ, ಮಲ್ಲಾಪುರ, ಅನ್ವೇರಿ, ಮುಂಡರಗಿ, ಗದಗ ಹಾಗೂ ಇನ್ನೂ ಅನೇಕ ಊರುಗಳಿಂದ ಜನರು ಕುರುವತ್ತಿ ಜಾತ್ರೆಗೆ ಆಗಮಿಸಿದ್ದರು.
ಜಾತ್ರೆಯ ಪ್ರಯುಕ್ತ ಮತ್ತು ರಥೋತ್ಸವದ ಅಂಗವಾಗಿ ಕುರುವತ್ತಿ ಗ್ರಾಮದ ಹೊರವಲಯದ ಹೊಲ-ಗದ್ದೆಗಳಲ್ಲಿ ಬಂಡಿ, ಟ್ರ್ಯಾಕ್ಟರ್, ಮಿನಿಡೋರುಗಳು, ತ್ರಿಚಕ್ರ ಮತ್ತು ದ್ವಿಚಕ್ರ ವಾಹನಗಳು ಬೀಡು ಬಿಟ್ಟಿದ್ದವು. ಪ್ರಯಾಣಿಕರಿಗಾಗಿ ಹಡಗಲಿ ಡಿಪೋದಿಂದ ಜಾತ್ರಾ ವಿಶೇಷ

ಶಾಸಕ ಚಂದ್ರಾನಾಯ್ಕ, ಮಾಜಿ ಶಾಸಕ ಪಿ.ಟಿ. ಪರಮೇಶ್ವನಾಯ್ಕ, ಜಿ.ಪಂ. ಸದಸ್ಯ ವಸಂತ, ಮುಖಂಡರಾದ ಸೊಪ್ಪಿನ ವೀರಣ್ಣ, ಅರವಳ್ಳಿ ವೀರಣ್ಣ, ಗುರುಬಸವರಾಜ ರಥೋತ್ಸವದಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT