ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ಗಣರಾಜ್ಯೋತ್ಸವಕ್ಕೆ ಸಿದ್ಧತೆ

Last Updated 10 ಜನವರಿ 2014, 6:46 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಜಿಲ್ಲಾ ಕೇಂದ್ರದಲ್ಲಿ ಇದೇ 26ರಂದು ಗಣರಾ ಜ್ಯೋತ್ಸ ವವನ್ನು ವಿಜೃಂಭಣೆಯಿಂದ ಆಚರಿಸಲಾ ಗುವುದು ಎಂದು ಜಿಲ್ಲಾಧಿಕಾರಿ ಬಿ.ಎಸ್.ಶೇಖರಪ್ಪ ತಿಳಿಸಿದರು.

ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ವರ್ಷದಂತೆ ಈ ಬಾರಿಯೂ ಗಣ ರಾಜ್ಯೋತ್ಸವ ಮುನ್ನ ದಿನ ಮಹಿಳೆ ಯರು  ಮತ್ತು ಪುರುಷರಿಗೆ ಪ್ರತ್ಯೇಕ ಸೈಕಲ್ ಸ್‍ಪರ್ಧೆ ನಡೆಸಲಾಗು ವುದು. ಸಮಾರಂಭದಲ್ಲಿ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದರು.

ಕಂದಾಯ ಇಲಾಖೆ, ಪೊಲೀಸರು, ಪತ್ರಕರ್ತರು, ವಕೀಲರ ಸಂಘ, ಅರಣ್ಯ ಸಿಬ್ಬಂದಿಗೆ ಕ್ರಿಕೆಟ್ ಪಂದ್ಯಾವಳಿ ಹಮ್ಮಿ ಕೊಳ್ಳಲಾಗುವುದು. ಸಮಾರಂ ಭದ ಯಶಸ್ವಿಗೆ ವಿವಿಧ ಸಮಿತಿ ರಚಿಸಿದ್ದು, ಉಪ ಸಮಿತಿಗಳು ಈಗಿನಿಂದಲೇ ಸಭೆ ನಡೆಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.ಅಂದು ಸಂಜೆ ಕುವೆಂಪು ಕಲಾ ಮಂದಿ ರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕರುಣಾಕರ, ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಪಿ.ಹೊನ ಕೇರಿ, ಉಪವಿಭಾಗಾಧಿಕಾರಿ ಕೆ. ಚನ್ನ ಬಸಪ್ಪ ಭಾಗವಹಿಸಿದ್ದರು. 

ಗಣರಾಜ್ಯೋತ್ಸವ: ಅದ್ದೂರಿ ಆಚರಣೆಗೆ ನಿರ್ಧಾರ
ನರಸಿಂಹರಾಜಪುರ
:  ಇದೇ 26­ರಂದು ಗಣರಾಜ್ಯೋತ್ಸವ ಕಾರ್ಯ­ಕ್ರಮ­ವನ್ನು ಅದ್ಧೂರಿಯಾಗಿ ಆಚರಿಸ­ಲು ತಾಲ್ಲೂಕು ಕಚೇರಿಯಲ್ಲಿ ಗುರು­ವಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಆಶ್ರಯದಲ್ಲಿ ನಡೆದ ಗಣರಾಜ್ಯೋತ್ಸವದ ಪೂರ್ವ ಭಾವಿ ಸಭೆಯಲ್ಲಿ ತೀರ್ಮಾನಿ ಸಲಾಯಿತು.

ಪ್ರತಿ ವರ್ಷದಂತೆ ಮಕ್ಕಳ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಯಿತು. ಎಲ್ಲಾ ಇಲಾಖೆಯ ಅಧಿಕಾರಿಗಳು ಕಡ್ಡಾಯವಾಗಿ ರಾಷ್ಟ್ರೀಯ ಹಬ್ಬದಲ್ಲಿ ಹಾಜರಿರ ಬೇಕೆಂದು ಸೂಚಿಸಲಾಯಿತು. ಸ್ತಬ್ಧ ಚಿತ್ರಗಳನ್ನು ಮಾಡುವ ಶಾಲೆಯವರು ಮುಂಚಿತವಾಗಿಯೇ ಸಮಿತಿಗೆ ತಿಳಿಸ ಬೇಕೆಂದು ಸಲಹೆ ನೀಡಲಾಯಿತು. ಮರವಣಿಗೆಯಲ್ಲಿ ಭಾಗವಹಿಸುವ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪಟ್ಟಣದ ವಿವಿಧ ಕಡೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಮಾಡಲು ಸಭೆಯಲ್ಲಿ ನಿರ್ಧರಿಸಲಾಯಿತು.

ಸಂಜೆ ಜಾನಪದ ಪರಿಷತ್ ನ ಅಭಿನವ ವೇದಿಕೆಯ ಆಶ್ರಯದಲ್ಲಿ ನಡೆಸಲು ತೀರ್ಮಾನಿಸಲಾಯಿತು. ಚಲನ ಚಿತ್ರ ಸಹ ನಿರ್ದೇಶಕ ಸತೀಶ್ ಆಚಾರ್ ನೇತೃತ್ವದಲ್ಲಿ ‘ನೋಡಿ ಸ್ವಾಮಿ ನಾವಿರೋದೆ ಹೀಗೆ’ ಎಂಬ ನಾಟಕ ಪ್ರದರ್ಶಿಸಲು ನಿರ್ಧರಿಸ­ಲಾಯಿತು.
ಸಭೆಯ ಅಧ್ಯಕ್ಷತೆಯನ್ನು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಜೆ.ಕೃಷ್ಣಮೂರ್ತಿ ವಹಿಸಿದ್ದರು.
ಉಪತಹಶೀಲ್ದಾರ್ ಲೋಕೇಶಪ್ಪ , ವಿವಿಧ ಇಲಾಖೆಯ ಅಧಿಕಾರಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT