ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯ ತಿರುಮಲೇಶ್ವರ ಉತ್ಸವ

Last Updated 6 ಅಕ್ಟೋಬರ್ 2011, 18:40 IST
ಅಕ್ಷರ ಗಾತ್ರ

ಅರಸೀಕೆರೆ: ಶರನ್ನವರಾತ್ರಿ ಹಾಗೂ ದಸರಾ ಹಬ್ಬದ ಅಂಗವಾಗಿ ತಾಲ್ಲೂ ಕಿನ ಮಾಡಾಳು ಗ್ರಾಮದ ತಿರುಮ ಲೇಶ್ವರ ಉತ್ಸವ ಗುರುವಾರ ಸಂಜೆ ಬೀದಿಗಳಲ್ಲಿ ಮಂಗಲ ವಾದ್ಯದೊಂ ದಿಗೆ ವಿಜೃಂಭಣೆಯಿಂದ ನಡೆಯಿತು.

ದಸರಾ ಅಂಗವಾಗಿ ಒಂಭತ್ತು ದಿನ ಗಳಿಂದ ಗ್ರಾಮದ ಮಧ್ಯ ಭಾಗದಲ್ಲಿ ರುವ ತಿರುಮಲೇಶ್ವರ ದೇವಾಲಯ ದಲ್ಲಿ ವಿಶೇಷ ಪುಷ್ಪಾ ಲಂಕೃತ ಮಂಟ ಪದಲ್ಲಿ ಅಶ್ವಾರೋಹಿಯಾಗಿ ದೇವರು ಪಟ್ಟಕ್ಕೆ ಕುಳಿತು ವಿಶೇಷ ಪೂಜೆ  ನಡೆ ದವು. 

ಗುರುವಾರ ಸಂಜೆ ತಿರು ಮಲ ದೇವಾಲಯದ ವಿವಿಧ ಛತ್ರಿ ಚಾಮರ ಹಾಗೂ ಬಿರುದಾವಳಿ ಗಳೊಂದಿಗೆ ಮಂಗಲವಾದ್ಯದೊಂದಿಗೆ ಅಶ್ವಾರೋ ಹಿಯಾಗಿ ಪುಷ್ಪಾಲಂಕೃತ ಮಂಟಪದಲ್ಲಿ ತಿರುಮಲ ದೇವರನ್ನು ಪ್ರತಿಷ್ಠಾಪಿಸಿ ಉತ್ಸವದಲ್ಲಿ ಪಂಚಲಿಂಗೇಶ್ವರ ಸ್ವಾಮಿ ದೇವಾಲಯಕ್ಕೆಕರೆದೊಯ್ಯಲಾಯಿತು.

ಬನ್ನಿ ಮರದ ಮುಂಭಾಗ ತಿರುಮಲ ದೇವರನ್ನು ಕೂರಿಸಲಾಯಿತು. ಬಳಿಕ ನೊರೊಂದೆಡೆ ಸೇವೆ, ಬಿಲ್ಲು-ಬಾಣ ಮತ್ತು ವಿವಿಧ ರೀತಿಯ ಆಯುಧ  ಇಟ್ಟು ಪೂಜೆ ಸಲ್ಲಿಸಲಾಯಿತು. ನಂತರ ಬನ್ನಿಯನ್ನು ಭಕ್ತರಿಗೆ ವಿತರಿಸಿ ವಿಜಯ ದಶಮಿ ಹಾಗೂ ಶರನ್ನವರಾತ್ರಿ ದಸರಾಕ್ಕೆ ತೆರೆ ಬಿದ್ದಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT