ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜೃಂಭಣೆಯಿಂದ ಜರುಗಿದ ದಾಂಡೇಲಪ್ಪ ಜಾತ್ರೆ

Last Updated 7 ಅಕ್ಟೋಬರ್ 2011, 10:00 IST
ಅಕ್ಷರ ಗಾತ್ರ

ದಾಂಡೇಲಿ: ಇಲ್ಲಿಯ ಹಾಲಮಡ್ಡಿಯಲ್ಲಿರುವ ಪುರದೇವರಾದ ದಾಂಡೇಲಪ್ಪ ದೇವಸ್ಥಾನದ ಜಾತ್ರೆ ಅಪಾರ ಜನಸ್ತೋಮ ಹಾಗೂ ಭಕ್ತಾದಿಗಳ ಹರಕೆ ಈಡೇರಿಸುವ ಹಾಗೂ ಸಾಂಪ್ರದಾಯಿಕ ಪೂಜೆ ಪುನಸ್ಕಾರಗಳೊಂದಿಗೆ ಗುರುವಾರ  ವಿಜೃಂಭಣೆಯಿಂದ ಜರುಗಿತು. 

ಮಿರಾಶಿ ಗಲ್ಲಿಯ ದಾಂಡೇಲಪ್ಪ ದೇವಸ್ಥಾನದಿಂದ ಮಿರಾಶಿ ವಂಶಸ್ಥರು ಪಾಲಕಿ ಸೇವೆಯನ್ನು ಆರಂಭಿಸು ವುದರೊಂದಿಗೆ ಭವ್ಯ ಮೆರವಣಿಗೆಯಲ್ಲಿ ಕೊಂಡೊಯ್ಯ ಲಾದ  ಉತ್ಸವ ನಗರದ ಹೊರ ವಲಯದಲ್ಲಿರುವ ಹಾಲಮಡ್ಡಿಯ ದಾಂಡೇಲಪ್ಪ ಮೂಲ ದೇವಸ್ಥಾನ ತಲುಪಿತು. ಅಲ್ಲಿ ಪುರಮಾರ ದಾಂಡೇಲಪ್ಪ ದೇವರ ಪ್ರತಿಷ್ಠಾಪನೆ, ಅಭಿಷೇಕ ಪೂಜೆ, ಹಾಗೂ ವಿವಿಧ ಧಾರ್ಮಿಕ ಕ್ರಿಯೆಗಳು ಬೆಳಗಿನ ಜಾವ ಮುಕ್ತಾಯ ಗೊಂಡವು.

ನಂತರ ದಾಂಡೇಲಿ ಹಾಗೂ ಸುತ್ತಲ ಗ್ರಾಮಗಳ ಸಾವಿರರು ಭಕ್ತರು ತಮ್ಮ ಮನದ ಬೇಡಿಕೆಯಂತೆ ಅಭಿಷೇಕ ಪೂಜೆಯನ್ನು ಸಲ್ಲಿಸಿದರೆ, ಇನ್ನು ಕೆಲವರು  ಹುಂಜಗಳನ್ನು ದಾಂಡೇಲಪ್ಪನಿಗೆ ಅರ್ಪಿಸುವ ಪರಂಪರೆ ಯಂತೆ ತಮ್ಮ ಬೇಡಿಕೆಗಳನ್ನು ದೇವರ ಸನ್ನಿಧಾನದಲ್ಲಿ ಈಡೇರಿಸಿಕೊಂಡು ಮನೆಗಳಿಗೆ ಹಿಂದಿರುಗಿದರು.
 
ಸೂರ್ಯೋದಯವಾಗುತ್ತಿದ್ದಂತೆಯೇ ಹಾಲಮಡ್ಡಿಯ ಮೂಲ ದೇವಸ್ಥಾನಕ್ಕೆ ವಿವಿಧ ಭಾಗಗಳಿಂದ ಆಗಮಿಸಿದ ಭಜನಾ ಮಂಡಳ, ಝಾಂಜ್ ಪಥಕ ದೇವಸ್ಥಾನದ ಆವರಣವನ್ನು ತಲುಪಿ ತಮ್ಮ ಭಕ್ತಿ ಸೇವೆ ಕೈಗೊಂಡರು. ಇದರೊಂದಿಗೆ  ಪ್ರತಿವರ್ಷ ಜಾತ್ರಾ ಮಹೋತ್ಸವ ಆರಂಭವಾಗುವ ಮುನ್ಸೂಚನೆಯಂತೆ ಎಲ್ಲ ಧರ್ಮದ ಜನರು ಕುಟುಂಬ ಸಮೇತರಾಗಿ ದಾಂಡೇಲಪ್ಪನ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ಧನ್ಯತಾ ಭಾವ ತಳೆದರು. 

 ವ್ಯವಸ್ಥಾಪಕರು ಭಕ್ತರ ಹರಕೆ, ಪೂಜೆ, ಪ್ರಸಾದ ವಿತರಣೆಗೆ  ಸಕಲ ಸಿದ್ದತೆ ಕೈಗೊಂಡಿದ್ದರಿಂದ  3ಕಿ.ಮೀ. ಮಾರ್ಗದುದ್ದಕ್ಕೂ ನಗರದ ವಿವಿಧ ಸೇವಾ ಸಂಘಗಳ ವತಿಯಿಂದ ನೀರು, ಪಾನಕ, ಹಾಗೂ ಅಲ್ಪೋಪ ಹಾರಗಳ ಉಚಿತ ವಿತರಣೆ ಕೈಗೊಂಡಿದ್ದರು. ಇದರಿಂದ ಭಕ್ತರಿಗೆ  ಯಾವುದೇ ತೊಂದರೆ ಆಗಲಿಲ್ಲ. ಅಹಿತಕರ ಘಟನೆ ಜರುಗದಂತೆ ಪೊಲೀಸರು ಸಮರ್ಪಕ ಬಂದೋಬಸ್ತಿ ಕಾರ್ಯವನ್ನು ಕೈಗೊಂಡಿದ್ದರು.

ಶಾಸಕರ ಭೇಟಿ:  ಜಾತ್ರೆ ಆರಂಭಗೊಳ್ಳುತ್ತಿದ್ದಂತೆ ಶಾಸಕ ಸುನೀಲ ಹೆಗಡೆ ನಗರದ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ಈ ಸಂದರ್ಭದಲ್ಲಿ ಜೆಡಿಎಸ್‌ನ ಯುವ ನಾಯಕ ಬಾಲಮಣಿ ಹಾಗೂ ನಗರ ಘಟಕದ ಅಧ್ಯಕ್ಷ ಟಿ.ಆರ್.ಚಂದ್ರಶೇಖರ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT