ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚ - ಎಷ್ಟು ಪರಿಚಿತ?

Last Updated 5 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

1) ನಮ್ಮ ಭೂಮಿಯ ಒಳಚರಿತ್ರೆಯನ್ನು ತೋರಿಸುತ್ತಿರುವ ಚಿತ್ರ ಇಲ್ಲಿದೆ (ಚಿತ್ರ - 1). ನಮ್ಮ ಭೂಮಿಯದು ನಾಲ್ಕು ಪ್ರಧಾನ ಪದರಗಳ - ‘ಒಳಗರ್ಭ, ಹೊರಗರ್ಭ, ಕವಚ ಮತ್ತು ತೊಗಟೆ’ - ನಿರ್ಮಿತಿ ಹೌದಲ್ಲ? ಈ ಕೆಳಗೆ ಪಟ್ಟಿ ಮಾಡಿರುವ ಗುಣಗಳ ಪದರಗಳು ಯಾವುವು? ಹೆಸರಿಸಬಲ್ಲಿರಾ?
ಅ) ಅತ್ಯಂತ ಕಡಿಮೆ ದಪ್ಪದ ಪದರ
ಬ) ಅತ್ಯಂತ ಹೆಚ್ಚು ಕಬ್ಬಿಣ ತುಂಬಿರುವ ಪದರ
ಕ) ಶಿಲಾಪಾಕ ಮ್ಯಾಗ್ಮಾ ತುಂಬಿರುವ ಪದರ
ಡ) ಅತ್ಯಂತ ಹೆಚ್ಚು ಉಷ್ಣತೆಯ ಪದರ
ಇ) ಘನ ರೂಪದಲ್ಲಿರುವ ಪದರಗಳು

2) ಭೂಮಿಯ ಏಕೈಕ ನೈಸರ್ಗಿಕ ಉಪಗ್ರಹವಾದ ‘ಚಂದ್ರ’ (ಚಿತ್ರ - 2) ರಲ್ಲಿದೆ. ಚಂದ್ರನ ಮೇಲ್ಮೈನಲ್ಲಿ ‘ಸಮುದ್ರದಷ್ಟು ವಿಶಾಲವಾದ’ ಆದರೆ ಜಲರಹಿತ ಹಳ್ಳ - ತಗ್ಗುಗಳಿವೆ; ಅದಕ್ಕೆ ಸಮುದ್ರ ಹೆಸರುಗಳನ್ನೇ ಕೊಟ್ಟಿರುವುದೂ ಆಗಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಚಂದ್ರನಲ್ಲಿದೆ, ಗೊತ್ತೇ?
ಅ) ಬ್ಯಾರೆಂಟ್ಸ್ ಸಮುದ್ರ
ಬ) ಮೃತ ಸಮುದ್ರ (ಡೆಡ್ ಸೀ)
ಕ) ಸೀ ಆಫ್ ಟ್ರಾಂಕ್ವಿಲಿಟಿ
ಡ) ಮೆಡಿಟರೇನಿಯನ್ ಸೀ
ಇ) ಕಪ್ಪು ಸಮುದ್ರ (ಬ್ಲ್ಯಾಕ್ ಸೀ)

3) ‘ತಾಮ್ರ’ದ ಅದಿರಿನ ಚೂರೊಂದು (ಚಿತ್ರ - 3) ರಲ್ಲಿದೆ. ಪ್ರಸಿದ್ಧ ಲೋಹಿಯ ಅದಿರುಗಳ ಈ ಪಟ್ಟಿಯಲ್ಲಿ ತಾಮ್ರದ ಅದಿರುಗಳನ್ನು ಗುರುತಿಸಿ.
ಅ) ಬಾಕ್ಸೈಟ್
ಬ) ಕ್ಯುಪ್ರೈಟ್
ಕ) ಗೆಲೀನಾ
ಡ) ಚಾಲ್ಶೋ ಸೈರೈಟ್ಸ್
ಇ) ಸಿನಬಾರ್
ಈ) ಸೈರೋಲೂಸೈಟ್
ಉ) ಮ್ಯಾಲಕೈಟ್
ಟ) ಮ್ಯಾಗ್ನ ಸೈಟ್

4) ಧರೆಯ ಅಮೂಲ್ಯ ನಿಧಿಯಾದ ‘ರತ್ನ’ದ ಹರಳೊಂದು (ಚಿತ್ರ - 4) ರಲ್ಲಿದೆ. ಭೂ ನಿಕ್ಷೇಪವೊಂದನ್ನು ‘ರತ್ನ’ ಎಂದು ವರ್ಗೀಕರಿಸಲು ಅದಕ್ಕೆ ಇರಲೇಬೇಕಾದ ನಾಲ್ಕು ಗುಣಗಳನ್ನು ಇಲ್ಲಿ ಕೊಟ್ಟಿರುವ ಪಟ್ಟಿಯಲ್ಲಿ ಪತ್ತೆ ಮಾಡಿ.

ಅ) ಶುದ್ಧ ಸ್ಫಟಿಕ ರೂಪ
ಬ) ಗಟ್ಟಿತನ
ಕ) ಆಕರ್ಷಕ ಬಣ್ಣ
ಡ) ದೊಡ್ಡ ಗಾತ್ರ
ಇ) ಹೊಳಪು
ಈ) ಬಹು ವಿರಳ ಲಭ್ಯತೆ

5) ಕೃಷಿ ಭೂಮಿಯಲ್ಲಿ (ಚಿತ್ರ - 5) ರಸಗೊಬ್ಬರಗಳ ಬಳಕೆ ಸರ್ವವ್ಯಾಪಕ. ರಸಗೊಬ್ಬರಗಳು ಮುಖ್ಯವಾದ ಮೂರು ವಿಧ ಸಸ್ಯ ಪೋಷಕ ಅಂಶಗಳನ್ನು ಒದಗಿಸುತ್ತವೆ. ಆ ಪೋಷಕಾಂಶಗಳು ಯಾವುವು?
ಅ) ಗಂಧಕ
ಬ) ರಂಜಕ
ಕ) ಕಬ್ಬಿಣ
ಡ) ಸಾರಜನಕ
ಇ) ಸೋಡಿಯಂ
ಈ) ಮೆಗ್ನೀಸಿಯಂ
ಉ) ಕ್ಯಾಲ್ಷಿಯಂ
ಟ) ಪೊಟಾಸಿಯಂ

6) ಮನುಷ್ಯರ ಕಳ್ಳಬೇಟೆಯಿಂದಾಗಿ ಅಪಾಯದ ಹಾದಿ ಹಿಡಿದಿರುವ ಪ್ರಸಿದ್ಧ ಪಕ್ಷಿ ಪ್ರಭೇದವೊಂದು (ಚಿತ್ರ - 6) ರಲ್ಲಿದೆ.
ಅ) ಈ ಪಕ್ಷಿಯ ಹೆಸರೇನು?
ಬ) ಈ ವರ್ಗದ ಹಕ್ಕಿಗಳ ನೈಸರ್ಗಿಕ ನೆಲೆ ಯಾವುದು?

7) ಪ್ರಬಲ, ಭಯಂಕರ, ಪ್ರಳಯಕರ ‘ಕಡಲ ಅಲೆ’ ಗಳ ದೃಶ್ಯ (ಚಿತ್ರ - 7) ರಲ್ಲಿದೆ. ಕಡಲಲ್ಲಿ ಅತ್ಯಂತ ಬಲಿಷ್ಠ ಅಲೆಗಳನ್ನು ಬಡಿದೆಬ್ಬಿಸುವ ವಿದ್ಯಮಾನ ಯಾವುದು?
ಅ) ಚಂಡಮಾರುತ
ಬ) ಸೂರ್ಯ -ಚಂದ್ರರ ಸೆಳೆತ
ಕ) ಬಿರುಗಾಳಿ
ಡ) ಸಾಗರ ತಳದ ಭೂಕಂಪ

8) (ಚಿತ್ರ - 8) ರಲ್ಲಿರುವ ಪ್ರಾಣಿಯನ್ನು ಗಮನಿಸಿ:

ಅ) ಈ ಪ್ರಾಣಿ ಯಾವುದು?
ಬ) ಇದು ಪ್ರೈಮೇಟ್‌ಗಳ ಯಾವ ವರ್ಗಕ್ಕೆ ಸೇರಿದೆ?
ಕ) ಇದರ ನೈಸರ್ಗಿಕ ವಾಸಕ್ಷೇತ್ರ ಯಾವುದು?

9) ಬೃಹದ್ಗಾತ್ರಕ್ಕೆ ಸಮಾನಾರ್ಥಕವಾಗಿರುವ ಸಾಗರ ವಾಸಿಗಳಾಗಿರುವ ‘ತಿಮಿಂಗಿಲ’ ಗಳ ಪ್ರಧಾನ ಆಹಾರ ಪ್ರಾಣಿ (ಚಿತ್ರ - 9) ರಲ್ಲಿದೆ. ಈ ಪ್ರಾಣಿ ಯಾವುದು ಗೊತ್ತೇ?
ಅ) ಸೀಲ್

ಬ) ಕ್ರಿಲ್
ಕ) ಸೀಗಡಿ
ಡ) ರ್ಫೈತೋ ಪ್ಲಾಂಕ್ಟನ್

10) ‘ಉತ್ತರ ಧ್ರುವ’ದ ನೇರದಿಂದ ಕಾಣುವಂತೆ ನಮ್ಮ ಭೂಮಿಯ ಚಿತ್ರಣ ಇಲ್ಲಿದೆ (ಚಿತ್ರ - 10) - ಈ ದೃಶ್ಯದಲ್ಲಿ ಕಿಂಚಿತ್ತೂ ಗೋಚರಿಸುತ್ತಿಲ್ಲದ ಭೂಖಂಡಗಳು ಯಾವುವು?

11) (ಚಿತ್ರ - 11) ರಲ್ಲಿರುವ ‘ಹಾರು ವಾಹನ’ ಇವುಗಳಲ್ಲಿ ಯಾವುದು?
ಅ) ಏರೋ ಫಾಯ್ಲಿ
ಬ) ಏರ್ ಶಿಪ್
ಕ) ಗ್ಲೈಡರ್ ಶೂಟ್

ಉತ್ತರಗಳು
1) ಅ - ತೊಗಟೆ; ಬ - ಒಳಗರ್ಭ; ಕ -
    ಕವಚ; ಡ - ಒಳಗರ್ಭ; ಇ -
    ತೊಗಟೆ ಮತ್ತು ಒಳಗರ್ಭ.
2) ಕ - ಸೀ ಆಫ್ ಟ್ರಾಂಕ್ವಿಲಿಟಿ
3) ಕ್ಯುಪ್ರೈಟ್, ಚಾಲ್ನೋಸೈರೈಟ್ಸ್ ಮತ್ತು
     ಮ್ಯಾಲಕೈಟ್
4) ಅ, ಬ, ಇ ಮತ್ತು ಈ
5) ಬ, ಡ ಮತ್ತು ಟ
6) ಅ - ಸ್ವರ್ಗಪಕ್ಷಿ; ಬ - ನ್ಯೂಗಿನಿ
7) ಡ - ಸಾಗರ ತಳದ ಭೂಕಂಪ
8) ಅ - ಒರಂಗೊಟಾನ್; ಬ - ವಾನರ;
     ಕ - ಬೋರ್ನಿಯೋ
9) ಬ - ಕ್ರಿಲ್
10) ದಕ್ಷಿಣ ಅಮೆರಿಕ, ಅಂಟಾರ್ಕ್ಟಿಕಾ
       ಮತ್ತು ಆಸ್ಟ್ರೇಲಿಯಾ
11) ಗ್ಲೈಡರ್.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT