ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ಪ್ರಪಂಚ-ಎಷ್ಟು ಪರಿಚಿತ?

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

1. ಮನುಷ್ಯರ ಹಾವಳಿಯಿಂದ ಅಳಿದುಹೋಗಿರುವ ಮತ್ತು ಅಳಿವ ಅಂಚಿನಲ್ಲಿರುವ ಜೀವಿಗಳ ಸಂಕೇತವಾಗಿ ಪ್ರಸಿದ್ಧವಾಗಿರುವ ಪಕ್ಷಿ ಚಿತ್ರ-1ರಲ್ಲಿದೆ. ಈ ಹಕ್ಕಿ ಯಾವುದು?

ಅ. ಸಾಲಿಟೇರ್
ಬ. ಮೋವಾ
ಕ. ಡೋಡೋ
ಡ. ಕಕಾಪೋ

2. ನೆಲದ ಮೇಲೂ, ನೀರಿನ ಮೇಲೂ ಗಾಳಿ ಮೆತ್ತೆ ರೂಪಿಸಿ ತೇಲುತ್ತ ಸಾಗುವ ಚಕ್ರರಹಿತ ವಾಹನ ಚಿತ್ರ-2ರಲ್ಲಿದೆ. ಈ ವಾಹನ ಗೊತ್ತೇ?

ಅ. ಹೆಲಿಕಾಪ್ಟರ್
ಬ. ಹೋವರ್ ಕ್ರಾಫ್ಟ್
ಕ. ಸ್ಪೀಡ್ ಬೋಟ್
ಡ. ಹೈಡ್ರೋಫಾಯಿಲ್

3. ಭಾರೀ ಗಾತ್ರದ, ಸಾಧು ಸ್ವಭಾವದ, ಸಸ್ಯಾಹಾರಿಯಾದ ಸಾಗರ ಪ್ರಾಣಿಯೊಂದು ಚಿತ್ರ-3ರಲ್ಲಿದೆ. ಈ ಪ್ರಾಣಿಯನ್ನು ಗುರುತಿಸಬಲ್ಲಿರಾ?

ಅ. ಮ್ಯಾನೆಟೀ
ಬ. ಡ್ಯೂಗಾನ್
ಕ. ನೀರಾನೆ
ಡ. ಸಾಗರಸಿಂಹ

4. ಪುರಾತನ ನಾಗರಿಕತೆಯೊಂದಕ್ಕೆ ಸಂಬಂಧಿಸಿದ ಬೃಹದಾಕಾರದ ವಿಶಿಷ್ಟ ವಾಸ್ತುಶಿಲ್ಪ ಚಿತ್ರ-4ರಲ್ಲಿದೆ. ಮೆಟ್ಟಿಲುಗಳಿಂದ ಕೂಡಿದ ಇಂಥ ವಿಸ್ಮಯದ ಪ್ರಾಚೀನ ಪಿರಮಿಡ್‌ನ್ನು ಯಾವ ಪ್ರದೇಶದಲ್ಲಿ ನೇರ ನೋಡಬಹುದು?

ಅ. ಮಲೇಶಿಯಾ
ಬ. ಮಧ್ಯ ಅಮೆರಿಕ
ಕ. ಈಜಿಪ್ಟ್
ಡ. ಇರಾಕ್
ಇ. ಚೀನಾ

5. ನಮ್ಮ ಸೌರವ್ಯೆಹದ ಒಂದು ಗ್ರಹವಾದ `ಬುಧ~ ಅಲ್ಲಿನ ಸೂರ್ಯೋದಯ ಕಾಲದ ಒಂದು ದೃಶ್ಯ ಚಿತ್ರ-5ರಲ್ಲಿದೆ. ಬುಧಗ್ರಹದ ಬಗೆಗಿನ ಈ ಹೇಳಿಕೆಗಳಲ್ಲಿ ಯಾವುದು ಸರಿಯಲ್ಲ?

ಅ. ಅದು ಸೌರವ್ಯೆಹದ ಅತ್ಯಂತ ಚಿಕ್ಕ ಗ್ರಹ
ಬ. ಅದು ಸೂರ್ಯನಿಗೆ ಅತ್ಯಂತ ಹತ್ತಿರದ ಗ್ರಹ
ಕ. ಬುಧ ಗ್ರಹ `ಚಂದ್ರ~ರನ್ನು ಪಡೆದಿಲ್ಲ
ಡ. ಗ್ರಹಗಳಲ್ಲೆಲ್ಲ ಬುಧನದೇ ಅತ್ಯಧಿಕ ಬಿಸಿಯ ಪರಿಸರ
ಇ. ಪ್ರಸ್ತುತ ಬುಧ ಗ್ರಹದ ಅಧ್ಯಯನ ನಡೆಸಿರುವ ವ್ಯೋಮನೌಕೆ `ಮೆಸೆಂಜರ್~

6. ಧರೆಯ ಅತ್ಯಂತ ವಿಸ್ತಾರ ಪಾರಾವಾರವಾಗಿರುವ `ಪೆಸಿಫಿಕ್ ಮಹಾಸಾಗರ~ ಚಿತ್ರ-6ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಪ್ರಸಿದ್ಧ ದ್ವೀಪ/ದ್ವೀಪ ಸಮೂಹಗಳಲ್ಲಿ ಯಾವುವು ಪೆಸಿಫಿಕ್ ಸಾಗರದಲ್ಲಿವೆ?

ಅ. ವೆಸ್ಟ್ ಇಂಡೀಸ್
ಬ. ಗ್ಯಾಲಪಗಾಸ್
ಕ. ಶ್ರಿಲಂಕಾ
ಡ. ಹವಾಯ್
ಇ. ಲಕ್ಷದ್ವೀಪ
ಈ. ಟಾಸ್ಮೇನಿಯಾ
ಉ. ಮಡಗಾಸ್ಕರ್
ಟ. ಈಸ್ಟರ್ ದ್ವೀಪಗಳು

7. ವಿಶ್ವದಲ್ಲಿನ ಅನ್ಯ ಸೌರವ್ಯೆಹಗಳ ಅನ್ಯ ಗ್ರಹಗಳ ಶೋಧವನ್ನು ವಿಶೇಷವಾಗಿ ಕೈಗೊಂಡಿರುವ `ಬಾಹ್ಯಾಕಾಶ ದೂರದರ್ಶಕ~ ಚಿತ್ರ-7ರಲ್ಲಿದೆ. ಇದರ ಹೆಸರೇನು?

ಅ. ಹಬಲ್ ದೂರದರ್ಶಕ
ಬ. ಕೆಪ್ಲರ್ ದೂರದರ್ಶಕ
ಕ. ಚಂದ್ರ ದೂರದರ್ಶಕ
ಡ. ಕೆಕ್ ದೂರದರ್ಶಕ

8. `ಹುಳು~ವೊಂದನ್ನು ಹಿಡಿದು ತಂದು ತನ್ನ ಗೂಡಿಗೆ ತುರುಕುತ್ತಿರುವ `ಕೀಟ~ ಚಿತ್ರ-8ರಲ್ಲಿದೆ. ಈ ಕೀಟ ಯಾವುದು ಗೊತ್ತೇ?

ಅ. ಕದಿರಿಬ್ಬೆ
ಬ. ದುಂಬಿ
ಕ. ಜೇನ್ನೊಣ
ಡ. ಮಿಡತೆ
ಇ. ಕಣಜ

9. ಚಿತ್ರ-9ರಲ್ಲಿರುವ ಪ್ರಾಣಿಯನ್ನು ಗಮನಿಸಿದಿರಾ? ಇದೊಂದು `ವಾನರ~ (ಏಪ್) ಎಂಬುದು ಸ್ಪಷ್ಟ ತಾನೇ?

ಅ. ಈ ವಾನರ ಯಾವುದು?

ಬ. ನಿಮ್ಮ ತೀರ್ಮಾನಕ್ಕೆ ಆಧಾರವಾದ ಇದರ ಶರೀರ ಲಕ್ಷಣ ಏನು?

10. ಭಯಂಕರ, ಹಾನಿಕರ ಹವಾ ವಿದ್ಯಮಾನ `ಟಾರ್ನೆಡೋ~ (ಸುಂಟರಗಾಳಿ)ದ ದೃಶ್ಯವೊಂದು ಚಿತ್ರ-10ರಲ್ಲಿದೆ. ಈ ಕೆಳಗೆ ಹೆಸರಿಸಿರುವ ಯಾವ ದೇಶದಲ್ಲಿ ಟಾರ್ನೆಡೋ ಹಾವಳಿ ಅತಿ ಹೆಚ್ಚು?

ಅ. ಜರ್ಮನಿ
ಬ. ರಷಿಯ
ಕ. ಯು.ಎಸ್.ಎ.
ಡ. ದಕ್ಷಿಣ ಆಫ್ರಿಕ
ಇ. ಆಸ್ಟ್ರೇಲಿಯ

11. ಬಹು ವರ್ಣಗಳ, ಬಹುಬೆಲೆಯ `ರತ್ನ~ವೊಂದು ಚಿತ್ರ-11ರಲ್ಲಿದೆ. ಸುಪ್ರಸಿದ್ಧವಾಗಿರುವ ಈ ಜನಪ್ರಿಯ ರತ್ನದ ಹೆಸರೇನು?

ಅ. ಪಚ್ಚೆ (ಎಮರಾಲ್ಡ್)
ಬ. ಓಪಾಲ್
ಕ. ಪುಷ್ಪರಾಗ
ಡ. ಮಾಣಿಕ್ಯ

12. `ಜೆಲ್ಲಿ ಮೀನು, ಬಂಗಾರ ಮೀನು, ಬೆಳ್ಳಿ ಮೀನು, ನಕ್ಷತ್ರ ಮೀನು~-ಈ ಜೀವಿಗಳ ಬಗೆಗಿನ ನಾಲ್ಕು ಪ್ರಶ್ನೆಗಳು:

ಅ. ಇವುಗಳಲ್ಲಿ ನಿಜವಾದ ಮತ್ಸ್ಯ ಯಾವುದು?
ಬ. ಚಿತ್ರದಲ್ಲಿರುವ `ಮೀನು~ ಯಾವುದು?
ಕ. ಯಾವುದು ಹಳೆಯ ಕಾಗದ. ಪುಸ್ತಕ ರಾಶಿಗಳಲ್ಲಿ ನೆಲೆಸುವ ಮೀನು?
ಡ. ಯಾವುದು ಪಾರದರ್ಶಕ ಶರೀರದ ಪ್ರಾಣಿ?

ಉತ್ತರಗಳು
1. ಕ-ಡೋಡೋ
2. ಬ-ಹೋವರ್‌ಕ್ರಾಫ್ಟ್
3. ಅ-ಮ್ಯಾನೆಟೀ
4. ಬ-ಮಧ್ಯ ಅಮೆರಿಕ
5. `ಡ~-ತಪ್ಪು ಹೇಳಿಕೆ
6. ಬ, ಡ, ಈ ಮತ್ತು ಟ
7. ಬ-ಕೆಪ್ಲರ್
8. ಇ-ಕಣಜ
9. ಅ-ಗಿಬ್ಸನ್; ಬ-ತುಂಬ ಉದ್ದದ ಬಾಹುಗಳು
10. ಕ-ಯು.ಎಸ್.ಎ.
11. ಬ-ಓಪಾಲ್
12. ಅ-ಬಂಗಾರ ಮೀನು; ಬ-ನಕ್ಷತ್ರ ಮೀನು; ಕ-ಬೆಳ್ಳಿ ಮೀನು; ಡ-ಜೆಲ್ಲಿ ಮೀನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT