ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನ ವಸ್ತುಪ್ರದರ್ಶನ: ರಾಷ್ಟ್ರಮಟ್ಟಕ್ಕೆ ಆಯ್ಕೆ

Last Updated 7 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಹೂವಿನಹಡಗಲಿ (ಬಳ್ಳಾರಿ ಜಿಲ್ಲೆ): ತಾಲ್ಲೂಕಿನ ಮಾನ್ಯರಮಸಲವಾಡದ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ವಿ.ಮಂಜು ನಾಯ್ಕ ತಯಾರಿಸಿದ ~ವಿದ್ಯುತ್ ಉಳಿತಾಯ ಗ್ರಾಮ~ ಎಂಬ ಮಾದರಿ ರಾಷ್ಟ್ರಮಟ್ಟದ ವಿಜ್ಞಾನ ವಸ್ತು ಪ್ರದಶನಕ್ಕೆ ಆಯ್ಕೆಯಾಗಿದೆ.

ಉ.ಕ. ಜಿಲ್ಲೆಯ ಕುಮಟಾದಲ್ಲಿ ನಡೆದ ರಾಜ್ಯ ಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಈ ಮಾದರಿ ಆಯ್ಕೆಯಾಗಿದೆ. ದೆಹಲಿಯಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶವನ್ನು ಮಂಜು ನಾಯ್ಕ ಪಡೆದು ಕೊಂಡಿದ್ದಾನೆ.

ದ್ಯುತಿ ವಿದ್ಯುತ್ ಪರಿಣಾಮ ತತ್ವದ ಆಧಾರದಅಡಿಯಲ್ಲಿ ತಯಾರಿಸಲಾಗಿರುವ ಈ ಮಾದರಿ ಅತಿ ಕಡಿಮೆ ವೆಚ್ಚದ ಸಲಕರಣೆಗಳನ್ನು ಹೊಂದಿದೆ. 9 ವೋಲ್ಟ್ ಬ್ಯಾಟರಿ, ಎಲ್‌ಡಿಆರ್ ಸರ್ಕ್ಯೂಟ್, ಎಲ್‌ಇಡಿ ಬಲ್ಬ್, ತಾಮ್ರದ ತಂತಿ, ಹಾಗೂ ಕಟ್ಟಿಗೆ ಬಳಸಿ ಇದನ್ನು ತಯಾರಿಸಲಾಗಿದೆ.

ಈ ಮಾದರಿಯಲ್ಲಿ ಬಳಸಿರುವ ಸರ್ಕಿಟ್, ಹಗಲಿನಲ್ಲಿ ಬೀದಿ ದೀಪ ಉರಿಯುವುದನ್ನು ಸ್ವಯಂ ಚಾಲಿತವಾಗಿ ನಿಯಂತ್ರಿಸುತ್ತದೆ. ರಾತ್ರಿ ಸಮಯದಲ್ಲಿ ಸ್ವಯಂ ಚಾಲಿತವಾಗಿ ಹೊತ್ತಿಕೊಳ್ಳುವಂತೆ ಮಾಡುತ್ತದೆ.

ಬೀದಿ ದೀಪಗಳಿಂದ ಗ್ರಾಮಗಳಲ್ಲಿ ಅನವಶ್ಯಕವಾಗಿ ವಿದ್ಯುತ್ ಪೋಲಾಗುವುದನ್ನು ಈ ಮಾದರಿಯಿಂದ ಸುಲಭವಾಗಿ ನಿಯಂತ್ರಿಸಬಹುದು. ವಿದ್ಯುತ್ ಬರ ಎದುರಿಸುತ್ತಿರುವ ಇಂತಹ ಸಂದರ್ಭದಲ್ಲಿ ಈ ಮಾದರಿ ಅವಶ್ಯಕವೆನ್ನಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT