ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದ ಅರಿವು: ನಾಟಕ ಸಹಕಾರಿ

Last Updated 13 ಡಿಸೆಂಬರ್ 2012, 19:40 IST
ಅಕ್ಷರ ಗಾತ್ರ

ಬೆಂಗಳೂರು: `ಮಕ್ಕಳಲ್ಲಿ ವಿಜ್ಞಾನದ ಕುರಿತು ಅರಿವು ಮೂಡಿಸಲು ನಾಟಕ ಮಾಧ್ಯಮವು ಸಹಕಾರಿಯಾಗಲಿದೆ'ಎಂದು ರಂಗಭೂಮಿ ನಿರ್ದೇಶಕ ರಘುವರ್ಧನ ಹೇಳಿದರು.

ಕಸ್ತೂರಬಾ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯವು ಗುರುವಾರ ಏರ್ಪಡಿಸಿದ್ದ ಎರಡು ದಿನಗಳ ದಕ್ಷಿಣ ಭಾರತೀಯ ವಿಜ್ಞಾನ ನಾಟಕೋತ್ಸವ -2012ನ್ನು ಉದ್ಘಾಟಿಸಿ ಮಾತನಾಡಿದರು.

`ವಿದ್ಯಾರ್ಥಿಗಳು ಇಂತಹ ಉತ್ಸವಗಳಲ್ಲಿ ಪಾಲ್ಗೊಂಡು ತಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು' ಎಂದು ಹೇಳಿದರು.

ಆಂಧ್ರಪ್ರದೇಶ, ತಮಿಳುನಾಡು, ಕೇರಳ, ಪಾಂಡಿಚೇರಿಯ ತಲಾ ಎರಡು ತಂಡಗಳು ಹಾಗೂ ರಾಜ್ಯದ ಮಂಗಳೂರು, ಕೊಪ್ಪಳ ಜಿಲ್ಲೆಯ ಎರಡು ತಂಡಗಳು ನಾಟಕೋತ್ಸವದಲ್ಲಿ ಭಾಗವಹಿಸಿವೆ. ಕೋಲ್ಕತ್ತಾದ ಬಿರ್ಲಾ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದಲ್ಲಿ ಜನವರಿ 18 ಮತ್ತು19 ರಂದು ನಡೆಯುವ ರಾಷ್ಟ್ರೀಯ ವಿಜ್ಞಾನ ನಾಟಕೋತ್ಸವಕ್ಕೆ ಎರಡು ತಂಡಗಳು ಆಯ್ಕೆಯಾಗಲಿವೆ.

ನಾಟಕಗಳಿಗೆ ನಾಲ್ಕು ವಿಷಯಗಳು ನೀಡಲಾಗಿದ್ದು, ನಾಟಕದಲ್ಲಿ ಉತ್ತಮ ನಟ (ವಿದ್ಯಾರ್ಥಿ) ಉತ್ತಮ ನಟಿ (ವಿದ್ಯಾರ್ಥಿನಿ), ಉತ್ತಮ ನಿರ್ದೇಶಕ ಹಾಗೂ ಉತ್ತು ಚಿತ್ರಕಥೆ ಪ್ರಶಸ್ತಿಗಳನ್ನು ನೀಡುವರು. ಮೊದಲ ದಿನ ನಾಟಕದ ವಿವಿಧ ಆಯಾಮಗಳ ಕುರಿತು ರಂಗಕರ್ಮಿಗಳಿಂದ ಕಾರ್ಯಾಗಾರ ಹಾಗೂ ಎರಡನೇ ದಿನ ನಾಟಕ ಪ್ರದರ್ಶನಗಳು ನಡೆಯಲಿದೆ.

ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ಸಂಗ್ರಹಾಲಯದ ನಿರ್ದೇಶಕ ಶಿವಪ್ರಸಾದ್ ಖೆನೆಡ್, ಸಂಗ್ರಹಾಲಯ ಕ್ಯೂರೇಟರ್ ಮದನ್ ಗೋಪಾಲ್, ಶಿಕ್ಷಣಾಧಿಕಾರಿ ವಿಶ್ವನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT