ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನದಲ್ಲಿ ಅರ್ಥಶಾಸ್ತ್ರ ಶ್ರೇಷ್ಠ: ಮಹೇಶ್

Last Updated 8 ಅಕ್ಟೋಬರ್ 2011, 8:50 IST
ಅಕ್ಷರ ಗಾತ್ರ

ಹಾಸನ: `ಇಂದಿನ ಮಾನವೀಯ ವಿಜ್ಞಾನಗಳಲ್ಲಿ ಅರ್ಥಶಾಸ್ತ್ರ ಶ್ರೇಷ್ಠವಾದುದು~ ಎಂದು ಮೈಸೂರಿನ ಮಾನಸ ಗಂಗೋತ್ರಿ ಸಹಕಾರ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಮಹೇಶ್ ನುಡಿದರು.

ಚನ್ನರಾಯಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಆರ್ಥಿಕ ಚಿಂತಕರ ವೇದಿಕೆಯವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ `ಅರ್ಥಶಾಸ್ತ್ರದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರದ ಬಳಕೆ~ ವಿಷಯದ ಉಪನ್ಯಾಸ ನೀಡಿದರು.

ಸಾಮಾನ್ಯ ವಿಜ್ಞಾನವಾದರೆ ಅಂಶಗಳನ್ನು ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಬಹುದು ಅದು ಹೆಚ್ಚು ನಿಖರವಾಗಿರತ್ತದೆ. ಆದರೆ ಮಾನವೀಯ ವಿಜ್ಞಾನದಲ್ಲಿ ಇದು ಅಸಾಧ್ಯ. ಈಚಿನ ದಿನದಲ್ಲಿ ಅರ್ಥಶಾಸ್ತ್ರದಲ್ಲಿ ಗಣಿತ ಹಾಗೂ ಸಂಖ್ಯಾ ಶಾಸ್ತ್ರವನ್ನು ಹೆಚ್ಚಾಗಿ ಬಳಸಲಾಗುತ್ತಿದ್ದು ಆರ್ಥಿಕ ವಿಚಾರಗಳನ್ನೂ ಪ್ರಾಯೋಗಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಕಾರಣದಿಂದಲೇ ಇದು ಶ್ರೇಷ್ಠವೆನಿಸುತ್ತದೆ~ ಎಂದರು.

ಪ್ರಾಂಶುಪಾಲ ಪ್ರೊ.ಎಂ.ಕೆ. ಉಮಾನಾಥ್ ಅಧ್ಯಕ್ಷತೆ ವಹಿಸಿದ್ದರು. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ನೇ.ತಿ. ಸೋಮಶೇಖರ್, ಆರ್ಥಿಕ ಚಿಂತಕರ ವೇದಿಕೆಯ ಅಧ್ಯಕ್ಷ ಎಂ.ಎನ್. ಲೋಕೇಶ್ ಉಪನ್ಯಾಸಕ   ಎಸ್.ಡಿ. ದಿಲೀಪ್ ಕುಮಾರ್    ಎಚ್.ಎಸ್. ಮಂಜು, ಪ್ರದೀಪ್   ಉಪಸ್ಥಿತರಿದ್ದರು. ದಿವ್ಯಾ ನಿರೂಪಿಸಿದರು, ಮಹಾದೇವ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT