ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಟಿಯು ಫಲಿತಾಂಶ ಎಸ್‌ಎಂಎಸ್‌ನ್ಲ್ಲಲಿ ಲಭ್ಯ!

Last Updated 2 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಳಗಾವಿ: ಪ್ರಶ್ನೆಪತ್ರಿಕೆ ಬಯಲುಗೊಳ್ಳುವುದನ್ನು ತಡೆಗಟ್ಟಲು ಆನ್‌ಲೈನ್ ಮೂಲಕ ಪ್ರಶ್ನೆಪತ್ರಿಕೆಗಳನ್ನು ವಿತರಿಸಿ ಗಮನ ಸೆಳೆದಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು, ಇದೀಗ ಪರೀಕ್ಷಾ ಫಲಿತಾಂಶಗಳನ್ನು ಮೊಬೈಲ್ ಎಸ್‌ಎಂಎಸ್  ಮೂಲಕ ಪಡೆದುಕೊಳ್ಳುವಂತಹ ಸೌಲಭ್ಯ ಕಲ್ಪಿಸಿದೆ.

ವಿಶ್ವವಿದ್ಯಾಲಯದ ಬಿಇ, ಎಂಬಿಎ, ಎಮ್‌ಟೆಕ್, ಎಂಸಿಎ, ಪಿಎಚ್‌ಡಿ ವಿದ್ಯಾರ್ಥಿಗಳು  ಪರೀಕ್ಷಾ ಫಲಿತಾಂಶ ಮತ್ತು ಮರು ಮೌಲ್ಯಮಾಪನದ ಫಲಿತಾಂಶವನ್ನೂ  ಮೊಬೈಲ್‌ನಲ್ಲೇ ಎಸ್‌ಎಂಎಸ್ ಮೂಲಕ ಪಡೆದುಕೊಳ್ಳಬಹುದು.

ಪರೀಕ್ಷೆಯ ಫಲಿತಾಂಶ ಪಡೆದುಕೊಳ್ಳಲು RESULT<space> USN<space>your email ID (E¨Ý: RESULT 4PA03C-S007 info@abcd.com) ಎಂದು ಮೊಬೈಲ್‌ನಲ್ಲಿ ಟೈಪ್ ಮಾಡಿ 5424204 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ಮರು ಮೌಲ್ಯಮಾಪನದ ಫಲಿತಾಂಶ ಪಡೆದುಕೊಳ್ಳಲು REVAL<space>USN<space>your email ಈ ಎಂದು ಟೈಪ್ ಮಾಡಿ 5424204 ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸಬೇಕು. ವಿದ್ಯಾರ್ಥಿಗಳು ಎಸ್‌ಎಂಎಸ್ ಕಳುಹಿಸಿದ ಕೆಲ ಕ್ಷಣದಲ್ಲೇ ಫಲಿತಾಂಶದ ವಿವರವುಳ್ಳ ಎಸ್‌ಎಂಎಸ್ ಬರುತ್ತದೆ. ಜೊತೆಗೆ ವಿದ್ಯಾರ್ಥಿಗಳ ಇಮೇಲ್ ವಿಳಾಸಕ್ಕೆ ತಾತ್ಕಾಲಿಕ (ಪ್ರೊವಿಜನಲ್) ಅಂಕಪಟ್ಟಿಯ ಪಿಡಿಎಫ್ ಫೈಲ್ ಸಹ ಬಂದಿರುತ್ತದೆ. ವಿದ್ಯಾರ್ಥಿಗಳು ಕಳುಹಿಸುವ ಎಸ್‌ಎಂಎಸ್‌ಗೆ ರೂ. 2 ಅಥವಾ ರೂ. 3  ಶುಲ್ಕ ವಿಧಿಸಲಾಗುತ್ತದೆ.

ಎಸ್‌ಎಂಎಸ್ ಫಲಿತಾಂಶದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸೀಟಿನ ಸಂಖ್ಯೆ (ಯುಎಸ್‌ಎನ್), ಸೆಮಿಸ್ಟರ್ (ಎಸ್), ಒಟ್ಟು ಅಂಕ (ಟಿ), ಪಡೆದ ಶ್ರೇಣಿ (ಸಿ)ಯ ವಿವರಗಳನ್ನು ಸಂಕ್ಷಿಪ್ತವಾಗಿ ನೀಡಲಾಗುತ್ತದೆ.

ಹಿಂದಿನ ಅಂಕ (ಎಕ್ಸ್), ಈಗಿನ ಅಂಕ (ವೈ), ಆಂತರಿಕ ಪರೀಕ್ಷೆಯ ಸರಾಸರಿ (ಎ) ಹಾಗೂ ಪಡೆದ ಒಟ್ಟು ಅಂಕಗಳ (ಬಿ) ಮಾಹಿತಿಯನ್ನು ಮರು ಮೌಲ್ಯಮಾಪನದ ಎಸ್‌ಎಂಎಸ್ ಒಳಗೊಂಡಿರುತ್ತದೆ ಎಂದು ಕುಲಪತಿ ಡಾ. ಎಚ್. ಮಹೇಶಪ್ಪ `ಪ್ರಜಾವಾಣಿ'ಗೆ ತಿಳಿಸಿದರು.

`ವಿಶ್ವವಿದ್ಯಾಲಯದ ಕಂಪ್ಯೂಟರ್ ಆ್ಯಂಡ್ ನೆಟವರ್ಕ್ ಕಂಟ್ರೋಲ್ ಕೇಂದ್ರದ ಮುಖ್ಯಸ್ಥ ಅನಂತ ಪ್ರಭು ಅವರ ನೇತೃತ್ವದಲ್ಲಿ ಈ ತಂತ್ರಜ್ಞಾನ  ಅಳವಡಿಸಿಕೊಳ್ಳಲಾಗಿದೆ. ಇಂಟರ್‌ನೆಟ್‌ನಲ್ಲಿ ಫಲಿತಾಂಶ ಪ್ರಕಟಿಸಿದ ತಕ್ಷಣದಿಂದಲೇ ಎಸ್‌ಎಂಎಸ್ ಮೂಲಕವೂ ಫಲಿತಾಂಶ ಪಡೆದುಕೊಳ್ಳಬಹುದು.

ಮುಂಬರುವ ದಿನಗಳಲ್ಲಿ ಪರೀಕ್ಷೆ ಶುಲ್ಕ ಭರಿಸುವ ಕೊನೆಯ ದಿನಾಂಕ, ಪರೀಕ್ಷಾ ವೇಳಾಪಟ್ಟಿ, ಸೆಮಿಸ್ಟರ್‌ಗಳ ಪ್ರವೇಶ ಪ್ರಾರಂಭ ದಿನಾಂಕ, ಘಟಿಕೋತ್ಸವದ ದಿನಾಂಕಗಳಂತಹ ಮಾಹಿತಿಗಳನ್ನು ಕಾಲಕಾಲಕ್ಕೆ ಎಸ್‌ಎಂಎಸ್ ಮೂಲಕ ಪಡೆಯುವ ಸೌಲಭ್ಯ ಕಲ್ಪಿಸಲಾಗುವುದು' ಎಂದು ಮಹೇಶಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT