ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿ.ಟಿ.ಯು: ಬೆಂಗಳೂರು ಯುವಕರ ಮೇಲುಗೈ

Last Updated 6 ಏಪ್ರಿಲ್ 2013, 5:42 IST
ಅಕ್ಷರ ಗಾತ್ರ

ಬೆಳಗಾವಿ: ಚಿನ್ನದ ನಗುವಿನಿಂದ ಕಂಗೊಳಿ ಸಿದ ವಿದ್ಯಾರ್ಥಿಗಳು... ಚಪ್ಪಾಳೆಗಳ ಸುರಿಮಳೆ... ಸಾಧನೆ ಮಾಡಿದ ತೃಪ್ತಿ... ಇದು ಶುಕ್ರವಾರ ನಡೆದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 12ನೇ ಘಟಿಕೋತ್ಸವದಲ್ಲಿ ಕಂಡು ಬಂದ ದೃಶ್ಯ.

ಬೆಂಗಳೂರಿನ ಬಿಐಟಿ ಕಾಲೇಜಿನ ಇಲೆಕ್ಟ್ರಿಕಲ್ ಮತ್ತು ಇಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿ ಅಭಿನವ ವಿ.ರಾವ್ 7 ಚಿನ್ನದ ಪದಕ ಪಡೆದು `ಚಿನ್ನದ ಹುಡುಗ'ನಾಗಿ ಹೊರಹೊಮ್ಮಿದರು.

`ಪಾಲಕರ ಪ್ರೋತ್ಸಾಹ, ಶಿಕ್ಷಕರು ಹಾಗೂ ಸ್ನೇಹಿತರ ಉತ್ತೇಜನದಿಂದ 7 ಚಿನ್ನದ ಪದಕ ಪಡೆಯಲು ಸಾಧ್ಯವಾ ಯಿತು. ಇಷ್ಟೊಂದು ಚಿನ್ನದ ಪದಕಗಳು ಲಭಿಸುತ್ತವೆ ಎಂದು ನಿರೀಕ್ಷಿಸಿರಲಿಲ್ಲ. ಈ ಸಾಧನೆಯ ಶ್ರೇಯಸ್ಸು ಪಾಲಕರಿಗೆ ಸಲ್ಲುತ್ತದೆ' ಎಂದು ಅಭಿನವ `ಪ್ರಜಾವಾಣಿ' ಜೊತೆಗೆ ಸಂತಸ ಹಂಚಿಕೊಂಡರು.

`ನಮ್ಮ ತಂದೆ ವೈದ್ಯರಾಗಿದ್ದು, ತಾಯಿ ಸ್ನಾತಕೋತ್ತರ ಪದವೀಧರೆ. ಸದ್ಯ ನಾನು ಬೆಂಗಳೂರಿನ ರಾಬರ್ಟ್- ಬುಷ್ ಎಂಜಿನಿಯರಿಂಗ್ ಮತ್ತು ಬಿಜಿನೆಸ್ ಸೊಲ್ಯೂಷನ್ ಕಂಪೆನಿಯಲ್ಲಿ ಇಲೆಕ್ಟ್ರಿಕಲ್ ಎಂಜನಿಯರ್ ಆಗಿ ಕಾರ್ಯನಿರ್ವಹಿಸು ತ್ತಿದ್ದು, ಅಧ್ಯಯನವನ್ನು ಮುಂದುವರಿಸು ತ್ತೇನೆ. ಸಾಧನೆಗೆ ಏಕಾಗ್ರತೆ, ಶಿಸ್ತು ಮುಖ್ಯ. ಅದರ ಜೊತೆಗೆ ಸತತ ಪರಿಶ್ರಮಪಟ್ಟು ಓದಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ' ಎಂದು ತಮ್ಮ ಅನುಭವ ಹಂಚಿಕೊಂಡರು.

ಸಂಶೋಧನೆ ಮಾಡುವೆ
`ನನಗೆ 6 ಚಿನ್ನದ ಪದಕ ಲಭಿಸಿವೆ ಎಂಬ ವಿಷಯ ಕೇಳಿ ಸಂತೋಷವಾಯಿತು. ನನ್ನ ತಂದೆ- ತಾಯಿಗಳು ಈ  ಪದಕಗಳನ್ನು ಪಡೆಯಲು ಅರ್ಹರು. ನನ್ನ ಸಾಧನೆಯ ಯಶಸ್ಸು ನೇರವಾಗಿ ಅವರಿಗೆ ಸಲ್ಲುತ್ತದೆ. ನನ್ನ ತಂದೆ ಹಾಗೂ ತಾಯಿ ಬ್ಯಾಂಕ್ ಉದ್ಯೋಗಿಯಾ ಗಿದ್ದಾರೆ.

ಸದ್ಯ ನಾನು ಖಾಸಗಿ ಕಂಪೆನಿ ಯೊಂದರಲ್ಲಿ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸಂಶೋಧನೆ ಮಾಡುವ ಆಸೆ ಇದೆ. ಈ ಪದಕಗಳು ಸಿಕ್ಕಿದ್ದರಿಂದ ಅಧ್ಯಯನ ಮುಂದುವರಿಸಲು ಪ್ರೇರಣೆ ಸಿಕ್ಕಂತಾಗಿದೆ' ಎಂದು 6 ಚಿನ್ನದ ಪದಕ ಪಡೆದ ಬೆಂಗಳೂರಿನ ಆರ್.ಎನ್.ಎಸ್. ತಾಂತ್ರಿಕ ಸಂಸ್ಥೆಯ ಫಾಲ್ಗುಣ ಪಿ. ಹೇಳಿದರು.

ಶಿಕ್ಷಕ ವೃತ್ತಿ ಸೇರುವೆ
`ನನ್ನ ಮನೆಯಲ್ಲಿ ಎಲ್ಲರೂ ಸಿವಿಲ್ ಎಂಜಿನಿಯರ್‌ಗಳಾಗಿದ್ದು ಅವರ ಪ್ರೇರಣೆಯಿಂದ ನಾನು ಸಿವಿಲ್ ಎಂಜನಿಯರಿಂಗ್ ವಿಭಾಗವನ್ನು ಆಯ್ದು ಕೊಂಡೆ. ಈಗ ನಾನು ಸಿವಿಲ್ ಎಂಜಿನಿಯ ರಿಂಗ್‌ನಲ್ಲಿ ಪ್ರಥಮ ರ‌್ಯಾಂಕ್ ಪಡೆದು 6 ಚಿನ್ನದ ಪದಕಗಳಿಗೆ ಭಾಜನವಾಗಿದ್ದು ಬಹಳ ಖುಷಿ ತಂದಿದೆ. ಐಐಟಿ ಮದ್ರಾಸ್ ಸಂಸ್ಥೆಯಲ್ಲಿ ಅಧ್ಯಯನ ಮುಂದುವರಿಸುವ ಉದ್ದೇಶವಿದೆ. ವಿದೇಶದಲ್ಲಿ ಸಂಶೋಧನೆ ಕೈಗೊಳ್ಳುವ ಆಸೆ ಹೊಂದಿದ್ದು, ವಿದ್ಯಾಭ್ಯಾ ಸದ ನಂತರ ಶಿಕ್ಷಕ ವೃತ್ತಿ ಸೇರುತ್ತೇನೆ' ಎಂದು 6 ಚಿನ್ನದ ಪದಕ ಪಡೆದ ಬೆಂಗಳೂರಿನ ಎಂ.ವಿ.ಜಯರಾಮನ್ ಎಂಜಿನಿಯರಿಂಗ್ ಕಾಲೇಜಿನ ಶಂತನು ಚಕ್ರವರ್ತಿ ತಮ್ಮ ಸಂತಸ ವ್ಯಕ್ತಪಡಿಸಿದರು.

ಹೆಚ್ಚಿನ ಸಾಧನೆ ಹಂಬಲ
`ಮಂಡ್ಯ ಜಿಲ್ಲೆಯ ಅಲ್ಲಿಗೇರಿಯ ಹಳ್ಳಿಯಲ್ಲಿ ಚಿಕ್ಕದೊಂದು ಹೊಟೇಲ್ ಇದೆ. ಆ ಹೊಟೇಲ್‌ನಿಂದ ಬಂದ ಹಣದಲ್ಲಿ ನನ್ನ ತಂದೆ ನನ್ನನ್ನು ಓದಿಸಿದ್ದಾರೆ. ಈ ಚಿನ್ನದ ಪದಕಗಳನ್ನು ಅವರಿಗೆ ಸಮರ್ಪಿಸುತ್ತೇನೆ. ಶಿಕ್ಷಣ ಕ್ಷೇತ್ರದಲ್ಲಿ ಇನ್ನೂ ಹೆಚ್ಚಿನ ಸಾಧನೆ ಮಾಡುವ ಹಂಬಲವಿದೆ' ಎಂದು 5 ಚಿನ್ನದ ಪದಕ ಪಡೆದ ಮಂಡ್ಯದ ಬಿಜಿಎಸ್ ತಾಂತ್ರಿಕ ಸಂಸ್ಥೆಯ ಉಮೇಶ ಸಿ.ಎಸ್. ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT