ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿತ್ತೀಯ ಕೊರತೆ: ಭರವಸೆ

Last Updated 6 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿರುವ    ಶೇ 4.6ರಷ್ಟು ವಿತ್ತೀಯ ಕೊರತೆ ಸಮತೋಲನ ಕಾಯ್ದುಕೊಳ್ಳುವ ಭರವಸೆಯನ್ನು  ಕೇಂದ್ರ ಸರ್ಕಾರ  ಹೊಂದಿದೆ.

ನೇರ ಮತ್ತು ಪರೋಕ್ಷ ತೆರಿಗೆ ವರಮಾನ ಹೆಚ್ಚಿದೆ. ದಾಖಲೆ ರಫ್ತು ವಹಿವಾಟು ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬಜೆಟ್‌ನಲ್ಲಿ ಅಂದಾಜಿಸಲಾಗಿರುವ ವಿತ್ತೀಯ ಕೊರತೆ ಗುರಿ ತಲುಪಬಹುದು. ಒಟ್ಟಾರೆ ವೃದ್ಧಿ ದರ ಕುಸಿಯುವ ಸೂಚನೆಗಳಿದ್ದರೂ, ವಿತ್ತೀಯ ಕೊರತೆ  ಗುರಿಯಲ್ಲಿ  ವ್ಯತ್ಯಾಸವಾಗುವುದಿಲ್ಲ ಎಂದು ಹೇಳಿದೆ.

ಅಂಕಿ ಅಂಶಗಳ ಪ್ರಕಾರ ಏಪ್ರಿಲ್-ಜೂನ್ ಅವಧಿಯಲ್ಲಿ ರೂ 1,62,653 ಕೋಟಿ ವಿತ್ತೀಯ ಕೊರತೆ ದಾಖಲಾಗಿದೆ. 2013ರ ವೇಳೆಗೆ ವಿತ್ತೀಯ ಕೊರತೆಯನ್ನು ಶೇ 3.5ಕ್ಕೆ ಇಳಿಸುವ ಗುರಿಯನ್ನು ಸರ್ಕಾರ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT